ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಹೊರ ರಾಜ್ಯಗಳ ಸಿಎಂಗಳು, ನಾಯಕರ ಆಗಮನ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ಭಾಗಿಯಾಗಲಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Image Credit source: IANS Photo
Rakesh Nayak Manchi
Updated on:
May 19, 2023 | 7:32 PM
ಬೆಂಗಳೂರು: ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಇದಕ್ಕಾಗಿ ಬೆಂಗಳೂರು ನಗರದಲ್ಲಿರುವ ಕಂಠೀರವಣ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆ. ಹಾಗಿದ್ದರೆ ಈ ಸಮಾರಂಭಕ್ಕೆ ಹೊರ ರಾಜ್ಯಗಳಿಂದ ಬರುತ್ತಿರುವ ಮುಖ್ಯಮಂತ್ರಿಗಳು ಹಾಗೂ ನಾಯಕರು ಯಾರು? ಇಲ್ಲಿದೆ ನೋಡಿ.
ಎಂಕೆ ಸ್ಟಾಲಿನ್- ತಮಿಳುನಾಡು ಮುಖ್ಯಮಂತ್ರಿ
ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಹೇಮಂತ್ ಸೋರನ್- ಜಾರ್ಖಂಡ್ ಮುಖ್ಯಮಂತ್ರಿ
ತೇಜಸ್ವಿ ಯಾದವ್- ಬಿಹಾರ ಉಪಮುಖ್ಯಮಂತ್ರಿ
ಶರದ್ ಪವಾರ್- ಆರ್ಜೆಡಿ ಪಕ್ಷದ ಮುಖ್ಯಸ್ಥ
ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ
ಅಖಿಲೇಶ್ ಯಾದವ್- ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ
ಫಾರೂಕ್ ಅಬ್ದುಲ್ಲಾ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಮೆಹಬೂಬ ಮುಫ್ತಿ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
ಡಿ.ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
ಲಲನ್ ಸಿಂಗ್- ಜೆಡಿಯು ಅಧ್ಯಕ್ಷ
ವೈಕೊ- ಎಂಡಿಎಂಕೆ ಅಧ್ಯಕ್ಷ
ಎನ್ಕೆ ಪ್ರೇಮಚಂದ್ರನ್- ಆರ್ಎಸ್ಪಿ ಅಧ್ಯಕ್ಷ
ದೀಪನ್ಕರ್ ಭಟ್ಟಾಚಾರ್ಯ- ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.