Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡದ್ರೋಹಿ ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಬೆಳಗಾವಿಗರು; ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿಯೂ ಸೋಲು

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ನಾಡದ್ರೋಹಿ ಎಂಇಎಸ್, ಮತ್ತೆ ತನ್ನ ರಾಜಕೀಯ ಅಸ್ತಿತ್ವ ಸ್ಥಾಪಿಸಲು ಶತಪ್ರಯತ್ನ ಮಾಡಿತ್ತು. ಬೆಳಗಾವಿ ಜಿಲ್ಲೆಯ ಕೆಲ ನಾಯಕರ ವೈಯಕ್ತಿಕ ಪ್ರತಿಷ್ಠೆ ಜಿದ್ದಿನ ರಾಜಕಾರಣದಿಂದ ಎಂಇಎಸ್ ಗೆ ಮರುಜೀವ ಬಂದಂತಾಗಿತ್ತು. ಆದ್ರೆ, ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಸ್ಪರ್ಧಿಸಿದ ಆರು ಕ್ಷೇತ್ರಗಳಲ್ಲೂ ಮಕಾಡೆ ಮಲಗಿದೆ. ಮುಖಭಂಗ ಅನುಭವಿಸಿದರೂ ಎಂಇಎಸ್ ಹೊಸ ನಾಟಕ ಶುರುಮಾಡಿದ್ದು, ತಮ್ಮ ಸೋಲಿಗೆ ಕೈ, ಕಮಲ ಮಹಾ ನಾಯಕರು ಕಾರಣವೆನ್ನುತ್ತಿದೆ.

ನಾಡದ್ರೋಹಿ ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಬೆಳಗಾವಿಗರು; ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿಯೂ ಸೋಲು
ಪ್ರಾತಿನಿಧಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 19, 2023 | 8:33 PM

ಬೆಳಗಾವಿ: ದಶಕದ ಹಿಂದೆ ಬೆಳಗಾವಿ (Belagavi) ಯಲ್ಲಿ ಎಂಇಎಸ್(MES)ಶಾಸಕರು ಆಯ್ಕೆಯಾಗಿ ಬರುತ್ತಿದ್ದರು. ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಸದಾ ಗಡಿವಿವಾದ ಪ್ರಸ್ತಾಪಿಸಿ ಮುಗ್ಧ ಮರಾಠಿಗರಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕಾರಣ ಮಾಡಿಕೊಂಡು ಬಂದಿತ್ತು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಎಂಇಎಸ್​ಗೆ ಮರುಜೀವ ತುಂಬುವಂತ ಕೆಲಸ ಬೆಳಗಾವಿಯ ಕೆಲವು ನಾಯಕರು ಮಾಡುತ್ತಿರೋ ಆರೋಪ ಕೇಳಿ ಬಂದಿತ್ತು. ತಮ್ಮ ವೈಯಕ್ತಿಕ ವರ್ಚಸ್ಸು ಜಿದ್ದಾಜಿದ್ದಿನ ರಾಜಕಾರಣಕ್ಕೆ ಎಂಇಎಸ್​ನ್ನು ಕೆಲ ನಾಯಕರು ದಾಳ ಮಾಡಿಕೊಂಡಿರುವ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಇದೇ ಉತ್ಸಾಹದಲ್ಲಿ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಭರ್ಜರಿ ಕ್ಯಾಂಪೇನ್ ಸಹ ಮಾಡಿತ್ತು.

​ ಸ್ಪರ್ಧಿಸಿದ್ದ ಆರಕ್ಕೆ ಆರು ಕ್ಷೇತ್ರಗಳಲ್ಲಿ ಮಕಾಡೆ ಮಲಗಿದ ಎಂಇಎಸ್

ಹೌದು ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ, ನಿಪ್ಪಾಣಿಯಲ್ಲಿ ಸ್ಪರ್ಧಿಸಿದ್ದ ಎಂಇಎಸ್ ಕನಿಷ್ಠ ಎರಡು ಕ್ಷೇತ್ರಗಳಲ್ಲಾದರೂ ಗೆಲ್ಲುತ್ತೇವೆ ಎಂಬ ಕನಸು ಕಂಡಿತ್ತು. ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿ ಆರ್.ಎಂ.ಚೌಗುಲೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಅಭ್ಯರ್ಥಿ ರಮಾಕಾಂತ ಕೊಂಡೂಸ್ಕರ್ ಭರ್ಜರಿ ಪ್ರಚಾರ ಮಾಡಿದ್ದರು. ಶಿವಸೇನೆ ಉದ್ಧವ್ ಠಾಕ್ರೆ ಬಣದ ವಕ್ತಾರ ಸಂಜಯ್ ರಾವುತ್ ಸೇರಿ ಹಲವು ಎನ್​ಸಿಪಿ ನಾಯಕರನ್ನು ಕರೆಯಿಸಿ ಪ್ರಚಾರ ಮಾಡಿಸಿದ್ದರು. ಮುಗ್ಧ ಮರಾಠಿಗರ ಮನದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದರು. ಆದ್ರೆ, ನಾಡದ್ರೋಹಿ ಎಂಇಎಸ್​ಗೆ ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿಯ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಎಂಇಎಸ್​ ಸ್ಪರ್ಧಿಸಿದ ಆರಕ್ಕೆ ಆರು ಕ್ಷೇತ್ರಗಳಲ್ಲಿ ಮಕಾಡೆ ಮಲಗಿದೆ. ಎಂಇಎಸ್​ಗೆ ತಕ್ಕ ಪಾಠ ಕಲಿಸಿದ ಮರಾಠಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಹೊರ ರಾಜ್ಯಗಳ ಸಿಎಂಗಳು, ನಾಯಕರ ಆಗಮನ

ಇನ್ನು ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಎಂಇಎಸ್​ ತಮ್ಮ ಸೋಲಿಗೆ ಮಹಾರಾಷ್ಟ್ರದ ಬಿಜೆಪಿ, ಕಾಂಗ್ರೆಸ್ ನಾಯಕರು ಕಾರಣವೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು. ಎಂಇಎಸ್ ಯುವಸಮಿತಿ ಫೇಸ್​ಬುಕ್ ಪೇಜ್​ನಲ್ಲಿ ಪೋಸ್ಟ್ ಮಾಡಿ ಎಂಇಎಸ್ ಸೋಲಿಗೆ ಕಾರಣರಾದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಗಿರೀಶ್ ಮಹಾಜನ್, ಚಿತ್ರಾ ವಾಘ್, ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾನ್, ಅಶೋಕ್ ಚೌಹಾನ್​ಗೆ ಅಭಿನಂದನೆಗಳು. ಎಂಇಎಸ್ ಸೋಲಿಗೆ ಗಡಿಭಾಗದ ಮರಾಠಿಗರು ಕಾರಣರಲ್ಲ ಮಹಾರಾಷ್ಟ್ರದ ರಾಜಕಾರಣಿಗಳು ಕಾರಣ ಎಂದು ಬರೆದುಕೊಂಡಿದ್ದಾರೆ.

ಇನ್ನು ವಿಧಾನಸಭೆ ಚುನಾವಣೆ ವೇಳೆ ಎಂಇಎಸ್​ಗೆ ಮರುಜೀವ ಬಂದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅಭಯ್ ಪಾಟೀಲ್ ಎಂಇಎಸ್​ಗೆ ಮರುಜೀವ ಕೊಟ್ಟವರು ಯಾರೆಂದು ನಿಮಗೆ ಗೊತ್ತು. ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಖಾನಾಪುರದಲ್ಲಿ ಹಿಂದೆ ಎಂಇಎಸ್​ನವರೇ ಆರಿಸಿ ಬರುತ್ತಿದ್ದರು. ಜನರು ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ. ಎಂಇಎಸ್​ ಮುಗಿದು ಹೋಗಿದೆಯೋ ಬಿಟ್ಟಿದೆಯೋ ಅವರಿಗೆ ಬಿಟ್ಟಿದ್ದು. ಆದ್ರೆ, ಎಂಇಎಸ್ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯಲು ಯತ್ನಿಸಿದವರು ಯಾರು? ಹೆಗಲು ಕೊಟ್ಟವರು ಯಾರೆಂಬುದನ್ನ ವಿಚಾರ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬಂದಿದ್ದರೂ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಚಿವ ರಮಾನಾಥ್ ​ರೈ

ಇನ್ನು ಮಹಾರಾಷ್ಟ್ರ ರಾಜಕಾರಣಿಗಳ ಪ್ರಚಾರದಿಂದ ಸೋಲಾಯಿತು ಎಂಬ ಎಂಇಎಸ್ ವಾದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಭಯ್ ಪಾಟೀಲ್, ‘ಮಹಾರಾಷ್ಟ್ರದಿಂದ ಅತಿ ಹೆಚ್ಚು ರಾಜಕಾರಣಿಗಳು ಎಂಇಎಸ್ ಪರ ಪ್ರಚಾರ ಮಾಡಿದ್ರು. ನನ್ನ ಪರವಾಗಿ ದೇವೇಂದ್ರ ಫಡ್ನವಿಸ್ ಮಾತ್ರ ಬಂದಿದ್ರು. ನನ್ನ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಅಸ್ತಿತ್ವದಲ್ಲಿ ಇಲ್ಲದ ಕೆಲ ಪಕ್ಷಗಳು ಎಲ್ಲರೂ ಸೇರಿ ಎಂಇಎಸ್​ಗೆ ಬೆಂಬಲ ಮಾಡಿದರೂ ಗೆದ್ದಿಲ್ಲ. ಈ ಚುನಾವಣೆಯಲ್ಲಿ ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಗಡಿವಿವಾದ ಭಾಷಾ ವಿವಾದಕ್ಕೆ ಮನ್ನಣೆ ಕೊಟ್ಟಿದ್ರೆ ಒಂದು ಕ್ಷೇತ್ರದಲ್ಲಾದರೂ ಗೆಲ್ಲಬೇಕಿತ್ತಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಪದೇ ಪದೇ ಗಡಿವಿವಾದ ಪ್ರಸ್ತಾಪಿಸಿ ಪುಂಡಾಟಿಕೆ ಮೆರೆಯುತ್ತಿದ್ದ ನಾಡದ್ರೋಹಿ ಎಂಇಎಸ್​ಗೆ ಬೆಳಗಾವಿಯ ಜನ ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಭಾಷಾ ವೈಷಮ್ಯ, ಗಡಿ ವಿವಾದ ಮರೆತು ಅಭಿವೃದ್ಧಿ ಪರ ವಿಚಾರದಲ್ಲಿ ತೊಡಗಿ ತನ್ನ ಹಳೆಯ ಚಾಳಿಯನ್ನು ಎಂಇಎಸ್ ಬಿಡಲಿ ಎಂಬುದು ಬೆಳಗಾವಿಗರ ಆಶಯ.

ವರದಿ: ಮಹಾಂತೇಶ ಕುರಬೇಟ್ ಟಿವಿ9 ಬೆಳಗಾವಿ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ