ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಹೊರ ರಾಜ್ಯಗಳ ಸಿಎಂಗಳು, ನಾಯಕರ ಆಗಮನ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ಭಾಗಿಯಾಗಲಿದ್ದಾರೆ.
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರ ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಇದಕ್ಕಾಗಿ ಬೆಂಗಳೂರು ನಗರದಲ್ಲಿರುವ ಕಂಠೀರವಣ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆ. ಹಾಗಿದ್ದರೆ ಈ ಸಮಾರಂಭಕ್ಕೆ ಹೊರ ರಾಜ್ಯಗಳಿಂದ ಬರುತ್ತಿರುವ ಮುಖ್ಯಮಂತ್ರಿಗಳು ಹಾಗೂ ನಾಯಕರು ಯಾರು? ಇಲ್ಲಿದೆ ನೋಡಿ.
- ಎಂಕೆ ಸ್ಟಾಲಿನ್- ತಮಿಳುನಾಡು ಮುಖ್ಯಮಂತ್ರಿ
- ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ
- ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ
- ಹೇಮಂತ್ ಸೋರನ್- ಜಾರ್ಖಂಡ್ ಮುಖ್ಯಮಂತ್ರಿ
- ತೇಜಸ್ವಿ ಯಾದವ್- ಬಿಹಾರ ಉಪಮುಖ್ಯಮಂತ್ರಿ
- ಶರದ್ ಪವಾರ್- ಆರ್ಜೆಡಿ ಪಕ್ಷದ ಮುಖ್ಯಸ್ಥ
- ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ
- ಅಖಿಲೇಶ್ ಯಾದವ್- ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ
- ಫಾರೂಕ್ ಅಬ್ದುಲ್ಲಾ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
- ಮೆಹಬೂಬ ಮುಫ್ತಿ- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ
- ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
- ಡಿ.ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
- ಲಲನ್ ಸಿಂಗ್- ಜೆಡಿಯು ಅಧ್ಯಕ್ಷ
- ವೈಕೊ- ಎಂಡಿಎಂಕೆ ಅಧ್ಯಕ್ಷ
- ಎನ್ಕೆ ಪ್ರೇಮಚಂದ್ರನ್- ಆರ್ಎಸ್ಪಿ ಅಧ್ಯಕ್ಷ
- ದೀಪನ್ಕರ್ ಭಟ್ಟಾಚಾರ್ಯ- ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ
- ಡಾ. ಥೋಲ್. ತಿರುಮಾವಲವನ್- ವಿಸಿಕೆ ಅಧ್ಯಕ್ಷ
- ಜಯಂತ್ ಚೌಧರಿ- ಆರ್ಎಲ್ಡಿ ಅಧ್ಯಕ್ಷ
- ಜೋಸ್ ಕೆ ಮಾಣಿ- ಕೇರಳ ಕಾಂಗ್ರೆಸ್ ಅಧ್ಯಕ್ಷ
- ಸಾದಿಕ್ ಅಲಿ ತಂಙಳ್- ಐಯುಎಂಎಲ್ ಅಧ್ಯಕ್ಷ
ಇದನ್ನೂ ಓದಿ: ಸಿಇಟಿ ಪರೀಕ್ಷೆಯಂದೇ ಪ್ರಮಾಣವಚನ: ಮೋದಿ ರೋಡ್ ಶೋ ಟೀಕಿಸಿದ್ದ ಸಿದ್ದರಾಮಯ್ಯಗೆ ಬಿಎಲ್ ಸಂತೋಷ್ ಟಕ್ಕರ್
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Fri, 19 May 23