AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಅರ್ಪಣೆ; ಕಟ್ಟಿದ್ದ ಹರಕೆ ಈಡೇರಿಸಿದ ಮಾರುತೇಶ್ವರ

2023 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಹಾಗೂ ರೋಣ ಕ್ಷೇತದಲ್ಲಿ ಜಿ ಎಸ್ ಪಾಟೀಲ್ ಆಯ್ಕೆ ಆಗಬೇಕೆಂದು ತಿಮ್ಮಾಪೂರ‌ ಗ್ರಾಮದ ಮಾರುತೇಶ್ವರನಿಗೆ ಯುವಕ್ರು ಹರಕೆ ಹೊತ್ತಿದ್ದು, ಇದೀಗ ಎರಡು ಹರಕೆಗಳು ನಿಜವಾಗಿರುವ ಹಿನ್ನಲೆ ನಾಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಅರ್ಪಣೆ; ಕಟ್ಟಿದ್ದ ಹರಕೆ ಈಡೇರಿಸಿದ ಮಾರುತೇಶ್ವರ
ಗದಗ
ಕಿರಣ್ ಹನುಮಂತ್​ ಮಾದಾರ್
|

Updated on:May 19, 2023 | 6:03 PM

Share

ಗದಗ: 2023 ರಲ್ಲಿ ಸಿದ್ದರಾಮಯ್ಯ (Siddaramaiah) ಸಿಎಂ ಆಗಬೇಕು ಹಾಗೂ ರೋಣ ಕ್ಷೇತದಲ್ಲಿ ಜಿ ಎಸ್ ಪಾಟೀಲ್(G S Patil) ಆಯ್ಕೆ ಆಗಬೇಕೆಂದು ತಿಮ್ಮಾಪೂರ‌ ಗ್ರಾಮದ ಮಾರುತೇಶ್ವರನಿಗೆ ಯುವಕರು ಹರಕೆ ಹೊತ್ತಿದ್ದು, ಇದೀಗ ಎರಡು ಹರಕೆಗಳು ನಿಜವಾಗಿರುವ ಹಿನ್ನಲೆ ನಾಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹೌದು 2023 ಮಾರ್ಚ್ 25 ರಂದು ಯುಗಾದಿ ಹಬ್ಬದ ನಿಮಿತ್ತ ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯಲ್ಲಿ 2023 ರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲರು ಶಾಸಕರಾಗಬೇಕು ಎಂದು ಬಾಳೆ ಹಣ್ಣಿನ ಮೇಲೆ ಬರೆದು ಗ್ರಾಮದ ಯುವಕರಾದ ಸುರೇಶ ಆಲೂರು, ಕಿರಣ ಜೋಗಿನ ಮತ್ತು ಅವರ ತಂಡ ರಥದ ಕಳಶಕ್ಕೆ ಎಸೆಯುವ ಮೂಲಕ ತಿಮ್ಮಾಪೂರ ಗ್ರಾಮದ ಯುವಕರು ವಿಶಿಷ್ಟವಾದ ಹರಕೆ ಹೊತ್ತಿದ್ದರು.

ಹರಕೆ ಈಡೇರಿಸಿದ ಮಾರುತೇಶ್ವರ

ರಥದ ಕಳಶಕ್ಕೆ ಈ ರೀತಿ ಹಣ್ಣು ಎಸೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಾಗಿದ್ದು, ಇಂದು (ಮೇ.19) ಸತ್ಯವಾಗಿದೆ. ಹರಕೆಯಂತೆ ಈಗ ಸಿದ್ದರಾಮಯ್ಯ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಜೊತೆಗೆ ರೋಣ ಶಾಸಕರಾಗಿ ಜಿ ಎಸ್ ಪಾಟೀಲ್ ಆಯ್ಕೆಯಾಗಿದ್ದಾರೆ.

ಎತ್ತಿನ ಮೇಲೂ ನಡೆದಿದ್ದ ಸಿಎಂ ವಿಚಾರ ಸತ್ಯ

ಕಳೆದ ವರ್ಷ ನಡೆದ ಕಾರ ಹುಣ್ಣಿಮೆಗೆ ಎತ್ತುಗಳನ್ನು ಸಿಂಗರಿಸಿ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದು ಎತ್ತುಗಳನ್ನು ಕರಿ ಹರಿವಲ್ಲಿ ಬಿಟ್ಟಾಗ ಸಿದ್ದರಾಮಯ್ಯನವರ ಹೆಸರಿನ ಎತ್ತು ಮುಂದೆ ಬಂದು ಶುಭ ಸೂಚಕವನ್ನು ಸೂಚಿಸಿದ್ದು ಈಗ ಸತ್ಯವಾಗಿದೆ. 2023 ರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಆಯ್ಕೆಯಾಗಿ ನಾಳೆ(ಮೇ.20) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೂ ರೋಣ ವಿಧಾನ ಸಭಾ ಕ್ಷೇತ್ರಕ್ಕೆ ಜಿ ಎಸ್ ಪಾಟೀಲರು 24688 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ದೇವರಲ್ಲಿಟ್ಟ ನಂಬಿಕೆ ಸತ್ಯವಾಗಿದೆ ಎಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಪದಗ್ರಹಣ: 8 ರಾಜ್ಯಗಳಿಂದ ಬರುವ ಮುಖ್ಯಮಂತ್ರಿಗಳಿಗೆ Z+ ಭದ್ರತೆ

ನಾಳೆ ತಿಮ್ಮಾಪೂರದಲ್ಲಿ ಸಂಭ್ರಮ

ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಂಗವಾಗಿ ಶ್ರೀ ಮಾರುತೇಶ್ವರನಿಗೆ ವಿಶೇಷ ಪೂಜೆ ನಡೆಯುತ್ತವೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬ್ಯಾನರ್ ಕಟೌಟಗಳನ್ನು ಕಟ್ಟಿ ಗ್ರಾಮವನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಎತ್ತಿನ ಮೆರವಣಿಗೆ ಮಾಡುವ ಮೂಲಕ ಅನ್ನ ಸಂತರ್ಪಣೆ ಮಾಡಲಾಗುವುದು ಎಂದು ಗ್ರಾಮದ ಮುಖಂಡರು, ಅಭಿಮಾನಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Fri, 19 May 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ