ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ಎಲ್ಲಾ ಪ್ರಚಾರ ಸಭೆಗಳಲ್ಲೂ ಹೇಳಿದ್ದೇನೆ. ಸುಮಾರು 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ( Siddaramaiah) ಹೇಳಿದ್ದಾರೆ .ಕಾಂಗ್ರೆಸ್ ಪಾರ್ಟಿ ತನ್ನ ಶಕ್ತಿ ಮೇಲೆ ಸರ್ಕಾರ ಮಾಡುತ್ತದೆ. ಜನರು ಬದಲಾವಣೆ ಬಯಸಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ವಿರುದ್ದ ಕೆಂಪಣ್ಣ ಧ್ವನಿ ಎತ್ತಿದ್ದರು. ರಾಜ್ಯದ ಜನ ಬೇಸತ್ತು, ಬಿಜೆಪಿ ತೊಲಗಲಿ ಎಂದು ಪಾಠ ಕಲಿಸಿದ್ದಾರೆ. ಮೋದಿ,ನಡ್ಡಾ, ಯಡಿಯೂರಪ್ಪ ಎಲ್ಲರಿಗೂ ಗೊತ್ತಿದ್ದರೂ ಸುಳ್ಳು ಹೇಳುತ್ತಿದ್ದರು. ಇಂಟೆಲಿಜೆಂಟ್ಸ್ ಎಜೆನ್ಸಿ ಇದ್ದರೂ ಆಗಲಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ತಾವು ಎಣಿಸಿದಂತೆಯೇ ಕಾಂಗ್ರೆಸ್ 120 ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ ಮತ್ತು ಯಾವುದೇ ಪಕ್ಷದ ನೆರವಿಲ್ಲದೆ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ . ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ವರುಣಾ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋಲಲಿದ್ದಾರೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್ ಶಾ (Amit Shah) ಅವರು ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಮತದಾರನ ಮೇಲೆ ಪ್ರಭಾವ ಬೀರಲಾರರು, ಯಾಕೆಂದರೆ, ರಾಜ್ಯದ ಜನತೆ ಬಿಜೆಪಿ ಸರ್ಕಾರದಿಂದ ಬೇಸತ್ತು ಹೋಗಿದೆ. ಕಾಂಗ್ರೆಸ್ ಪಕ್ಷ ಹೇಳಿದ್ದು ನಿಜವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಗೆಲುವು, ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಇದು ಜಾತ್ಯತೀತ ಪಕ್ಷಕ್ಕೆ ಸಂದ ಜಯ.ಕರ್ನಾಟಕದ ಜನರು ಭರವಸೆ ನೀಡಿದಂತೆ ನೀಡುವ ಸ್ಥಿರ ಸರ್ಕಾರವನ್ನು ಬಯಸಿದ್ದರು ಮತ್ತು ಆದ್ದರಿಂದ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ ಎಂದಿದ್ದಾರೆ.
Honesty over 40% commission,
Stability over instability,
Secularism over communal politics,
Harmony over hatred,
Karnataka pride over trouble engine,
Kannadigas’ mandate is loud and clear!!
It is Congress!!
— Siddaramaiah (@siddaramaiah) May 13, 2023
ಇನ್ನೊಂದು ಟ್ವೀಟ್ನಲ್ಲಿ 40% ಕಮಿಷನ್ ವಿರುದ್ಧ ಪ್ರಾಮಾಣಿಕತೆ, ಅಸ್ಥಿರತೆಯ ವಿರುದ್ಧ ಸ್ಥಿರತೆ, ಕೋಮು ರಾಜಕಾರಣದ ವಿರುದ್ಧ ಸೆಕ್ಯುಲರಿಸಂ, ದ್ವೇಷದ ವಿರುದ್ಧ ಸಾಮರಸ್ಯ, ಟ್ರಬಲ್ ಎಂಜಿನ್ ವಿರುದ್ಧದ ಕರ್ನಾಟಕದ ದನಿ, ಕನ್ನಡಿಗರ ಜನಾದೇಶ ಗಟ್ಟಿಯಾಗಿದೆ. ಇದು ಕಾಂಗ್ರೆಸ್ ಎಂದು ಟ್ವೀಟ್ ಮಾಡಿದ್ದಾರೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sat, 13 May 23