Sringeri Election 2023 Winner: ಶೃಂಗೇರಿ: ಮಾಜಿ-ಹಾಲಿಗಳ ರಣಕಣದಲ್ಲಿ ಟಿಡಿ ರಾಜೇಗೌಡಗೆ ಗೆಲುವು

|

Updated on: May 13, 2023 | 4:33 PM

TD Rajegowda: ಶೃಂಗೇರಿಯು ಮಾಜಿ-ಹಾಲಿ ಶಾಸಕರುಗಳ ರಣಕಣವಾಗಿತ್ತು ,  ಚುನಾವಣೆಯಲ್ಲಿ ಹಾಲಿ ಶಾಸಕ ಟಿಡಿ ರಾಜೇಗೌಡ ಗೆಲುವು ಸಾಧಿಸಿದ್ದಾರೆ.

Sringeri Election 2023 Winner: ಶೃಂಗೇರಿ: ಮಾಜಿ-ಹಾಲಿಗಳ ರಣಕಣದಲ್ಲಿ ಟಿಡಿ ರಾಜೇಗೌಡಗೆ ಗೆಲುವು
ಟಿಡಿ ರಾಜೇಗೌಡ
Follow us on

ಶೃಂಗೇರಿಯು ಮಾಜಿ-ಹಾಲಿ ಶಾಸಕರುಗಳ ರಣಕಣವಾಗಿತ್ತು , ಚುನಾವಣೆಯಲ್ಲಿ ಹಾಲಿ ಶಾಸಕ ಟಿಡಿ ರಾಜೇಗೌಡ ಗೆಲುವು ಸಾಧಿಸಿದ್ದಾರೆ. ಇತ್ತ ಆರನೇ ಬಾರಿಗೆ ಬಿಎಂ ದೇವರಾಜ್ ಬಿಜೆಪಿಯಿಂದ ಕಣಕ್ಕಿಳಿದಿದ್ದರು,  ಕ್ಷೇತ್ರದಲ್ಲಿ ಜೀವರಾಜ್ ಮೂರು ಬಾರಿ ಗೆಲುವು ಸಾಧಿಸಿದ್ದರೆ ರಾಜೇಗೌಡ 2018ರಲ್ಲಿ ಗೆದ್ದಿದ್ದರು. ಇವರ ಜತೆಗೆ ಈ ಬಾರಿ ಜೆಡಿಎಸ್​ನಿಂದ ಸುಧಾಕರ್ ಶೆಟ್ಟಿ, ಎಎಪಿಯಿಂದ ರಂಜನ್ ಗೌಡ ಕಣದಲ್ಲಿದ್ದಾರೆ.

ಕರ್ನಾಟಕದ ಮೂರನೇ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಈ ರಾಜ್ಯ ಕಂಡ ಅತ್ಯಂತ ಜನಪ್ರಿಯ ಶಿಕ್ಷಣ ಸಚಿವ ಗೋವಿಂದೇಗೌಡರು ಪ್ರತಿನಿಧಿಸುವ ಐತಿಹಾಸಿಕ ಶೃಂಗೇರಿ ವಿಧಾನಸಭಾ ಕ್ಷೇತ್ರವು ಈ ಬಾರಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಹಣಾಹಣಿಗೆ ಸಾಕ್ಷಿಯಾಗಿತ್ತು. ಹಾಲಿ ಶಾಸಕ ಟಿಡಿ ರಾಜೇಗೌಡ ಅವರಿಗೆ ಕಾಂಗ್ರೆಸ್ ಮೂರನೇ ಬಾರಿಗೆ ಟಿಕೆಟ್ ನೀಡಿತ್ತು.

ಈ ಕ್ಷೇತ್ರದಲ್ಲಿ 1957ರಲ್ಲಿ ಕಡಿದಾಳ್ ಮಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷವಾಗಿತ್ತು. 1962ರಲ್ಲೂ ಅವರೇ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಮೂರು ಬಾರಿ ಗೋವಿಂದೇಗೌಡರು ಶೃಂಗೇರಿಯನ್ನು ಪ್ರತಿನಿಧಿಸಿದ್ದರು.

 

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:31 pm, Sat, 13 May 23