Srirangapatna Election Results: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಶ್ರೀಕಂಠಯ್ಯ-ರಮೇಶ್ ಬಾಬು- ಸಚ್ಚಿದಾನಂದ ಮಧ್ಯೆ ತ್ರಿಕೋನ ಸ್ಪರ್ಧೆ

Srirangapatna Assembly Election Results 2023 Live Counting Updates: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಬಿಜೆಪಿಯಿಂದ ಯುವ ನಾಯಕ ಎಸ್. ಸಚ್ಚಿದಾನಂದ, ಜೆಡಿಎಸ್‌ನಿಂದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಖಾಡದಲ್ಲಿದ್ದಾರೆ. ಮತ ಎಣಿಕೆಯ ವಿವರ ಇಲ್ಲಿದೆ.

Srirangapatna Election Results: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಶ್ರೀಕಂಠಯ್ಯ-ರಮೇಶ್ ಬಾಬು- ಸಚ್ಚಿದಾನಂದ ಮಧ್ಯೆ ತ್ರಿಕೋನ ಸ್ಪರ್ಧೆ
ಕಾಂಗ್ರೆಸ್​, ಬಿಜಪಿ, ಜೆಡಿಎಸ್
Edited By:

Updated on: May 13, 2023 | 3:49 AM

Srirangapatna Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ (Srirangapatna Assembly constituency) ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಬಿಜೆಪಿಯಿಂದ ಯುವ ನಾಯಕ ಎಸ್. ಸಚ್ಚಿದಾನಂದ, ಜೆಡಿಎಸ್‌ನಿಂದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಖಾಡದಲ್ಲಿದ್ದಾರೆ. ಆಮ್​ ಆದ್ಮಿ ಪಾರ್ಟಿಯಿಂದ ಸಿಎಸ್ ವೆಂಕಟೇಶ್​​ ಕಣಕ್ಕೆ ಇಳಿದಿದ್ದಾರೆ.

ಕೋಟೆ ನಾಡು, ಶ್ರೀರಂಗನ ನೆಲೆ ಬೀಡಿನಲ್ಲಿ 16 ಬಾರಿ ಚುನಾವಣೆಗಳು ನಡೆದಿವೆ. 15 ಚುನಾವಣೆಗಳಲ್ಲೂ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದವರೇ ಕ್ಷೇತ್ರ ಆಳಿದ್ದಾರೆ. 018ರ ಚುನಾವಣೆಯಲ್ಲಿ ರಮೇಶ್‌ಬಾಬು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರೆ, ಕಾಂಗ್ರೆಸ್‌ ತೊರೆದ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಸೇರ್ಪಡೆಗೊಂಡು ಗೆಲುವು ಸಾಧಿಸಿದ್ದರು. ರೈತಸಂಘದಿಂದ 6 ಬಾರಿ ಹಾಗೂ ಬಿಜೆಪಿಯಿಂದ 1 ಬಾರಿ ಸ್ಪರ್ಧಿಸಿದ್ದ ಕೆ.ಎಸ್‌.ನಂಜುಂಡೇಗೌಡರು ಸತತ 7 ಬಾರಿಯೂ ಸೋಲು ಅನುಭವಿಸಿದ್ದಾರೆ.

ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದ ನಟ ಅಂಬರೀಷ್‌ ಕೂಡ 2008ರ ಚುನಾವಣೆಯಲ್ಲಿ ಸೋತಿದ್ದರು. ಒಕ್ಕಲಿಗ ಪ್ರಾಬಲ್ಯವಿರುವ ಈ ಮತ ಕ್ಷೇತ್ರದಲ್ಲಿ ಗೆದ್ದವರು, ಸೋತವರು ಎಲ್ಲರೂ ಒಕ್ಕಲಿಗರೇ ಆಗಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ