ಪಿಎಫ್‌ಐ, ಎಸ್‌ಡಿಪಿಐ ಮೆಚ್ಚಿಸಲು ಬಜರಂಗದಳ ನಿಷೇಧಿಸಲು ಹೊರಟ ಕಾಂಗ್ರೆಸ್; ಉಡುಪಿಯಲ್ಲಿ ಅನಿಲ್ ಆ್ಯಂಟನಿ

|

Updated on: May 05, 2023 | 7:20 PM

ಪಿಎಫ್‌ಐ ಮತ್ತು ಎಸ್‌ಡಿಪಿಐ ಮೆಚ್ಚಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಬಜರಂಗದಳ ನಿಷೇಧಿಸಲು ಹೊರಟಿದೆ ಎಂದು ಕೇರಳ ಬಿಜೆಪಿ ನಾಯಕ ಅನಿಲ್ ಆ್ಯಂಟನಿ ಟೀಕಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಮೆಚ್ಚಿಸಲು ಬಜರಂಗದಳ ನಿಷೇಧಿಸಲು ಹೊರಟ ಕಾಂಗ್ರೆಸ್; ಉಡುಪಿಯಲ್ಲಿ ಅನಿಲ್ ಆ್ಯಂಟನಿ
ಉಡುಪಿಯಲ್ಲಿ ಅನಿಲ್ ಆ್ಯಂಟನಿ
Follow us on

ಉಡುಪಿ: ಪಿಎಫ್‌ಐ ಮತ್ತು ಎಸ್‌ಡಿಪಿಐ ಮೆಚ್ಚಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಬಜರಂಗದಳ ನಿಷೇಧಿಸಲು ಹೊರಟಿದೆ ಎಂದು ಕೇರಳ ಬಿಜೆಪಿ (BJP) ನಾಯಕ ಅನಿಲ್ ಆ್ಯಂಟನಿ (Anil Antony) ಟೀಕಿಸಿದರು. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅನಿಲ್ ಆ್ಯಂಟನಿ ಶುಕ್ರವಾರ ಉಡುಪಿಗೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಭಅಗವಹಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮತ್ತು ಕೋಮುವಾದ ಹೆಚ್ಚಾಗಲಿದೆ. ಹಿಗಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಕರ್ನಾಟಕ ಚುನಾವಣೆಯು ಅಭಿವೃದ್ಧಿ ದೃಷ್ಟಿಯಿಂದ ಅತೀ ಮಹತ್ವ ಪಡೆದಿದೆ. ಕಾಂಗ್ರೆಸ್‌ನದ್ದು ರಿವರ್ಸ್‌ಗೇರ್ ಸರ್ಕಾರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಎಟಿಎಂ ರೀತಿ ಬಳಕೆಯಾಗುವ ಸಾಧ್ಯತೆ ಇದೆ. ಡಬಲ್ ಇಂಜಿನ್ ಸರ್ಕಾರದ ಮಹತ್ವ ಜನರಿಗೆ ಅರಿವಾಗಿದೆ ಎಂದು ಅವರು ಹೇಳಿದರು.

‘ಕೇರಳ ಸ್ಟೋರಿ’ ಸಿನಿಮಾ ವಿವಾದ ವಿಚಾರ ಪ್ರಸ್ತಾಪಿಸಿದ ಅವರು, ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರ ಬಣ್ಣ ಬಯಲಾಗಿದೆ. ಸತ್ಯ ಘಟನೆ ಆಧರಿಸಿದ ಚಿತ್ರ ಪ್ರದರ್ಶನವನ್ನು ನಿಷೇಧಿಸಲು ಮುಂದಾಗಿದ್ದಾರೆ. ರಾಜಕೀಯ ಷಡ್ಯಂತ್ರಕ್ಕಾಗಿ ಧಾರ್ಮಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದು ಬಿಜೆಪಿ ನಿಲುವು ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಜನರನ್ನು ಲೂಟಿ ಮಾಡಿವೆ: ತುಮಕೂರಿನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಕೊನೆಯ ಹಂತದಲ್ಲಿ ಪ್ರಚಾರಕ್ಕಾಗಿ ಕರ್ನಾಟಕ ತಲುಪಿದೆ. ಉಡುಪಿಯ ಬೈಂದೂರಿನ ಬಳಿ ಇರುವ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತಾ ದಿನವನ್ನು ಪ್ರಾರಂಭಿಸಿದೆ. ಜೊತೆಯಲ್ಲಿ ಪಕ್ಷದ ಪಾಲಕ್ಕಾಡ್ ವಲಯದ ಉಸ್ತುವಾರಿ ಉನ್ನಿಕೃಷ್ಣನ್ ಮಾಸ್ಟರ್, ಕೇರಳ ಬಿಜೆಪಿ ಕಾರ್ಯದರ್ಶಿ ಸುರೇಶ ಮತ್ತು ಕೇರಳ ಬಿಜೆಪಿ ನಾಯಕ ಶ್ರೀಕುಮಾರ್ ಜಿ. ಇದ್ದಾರೆ ಎಂದು ಅನಿಲ್ ಆ್ಯಂಟನಿ ಟ್ವೀಟ್ ಮಾಡಿದ್ದಾರೆ.


ಅನಿಲ್ ಆ್ಯಂಟನಿ ಅವರು ಕಾಂಗ್ರೆಸ್​​ನ ಹಿರಿಯ ನಾಯಕ ಎಕೆ ಆ್ಯಂಟನಿ ಪುತ್ರ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Fri, 5 May 23