ಉಡುಪಿ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ (Udupi Assembly Constituency) ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಫೈಟ್ ನೀಡಿದೆ, ಹೌದು 2018ರಲ್ಲಿ ರಘುಪತಿ ಭಟ್ ಗೆದ್ದು ಶಾಸಕರಾಗಿದ್ದರು, ಆದರೆ ಈ ಬಾರಿ ಅವರಿಗೆ ಟಿಕೇಟ್ ನೀಡಲ್ಲ, ಹಿಜಾಬ್ ವಿಚಾರ ದೇಶದ್ಯಾಂತ ಚರ್ಚೆಯಾಗಲು ಉಡುಪಿಯೇ ಕಾರಣ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಈ ಬಾರಿ ರಘುಪತಿ ಭಟ್ಗೆ ಬಿಜೆಪಿ ಟಿಕೇಟ್ ನೀಡಿಲ್ಲ, ಅದಕ್ಕೆ ಈ ಬಾರಿ ಯಶ್ಪಾಲ್ ಸುವರ್ಣ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಇದೀಗ ಯಶ್ಪಾಲ್ ಗೆಲುವು ಸಾಧಿಸಿದ್ದಾರೆ. ಉಡುಪಿಗೆ ಇವರು ಹೊಸ ಮುಖವಾದರೂ, ಸಂಘಟನೆಯಲ್ಲಿ ಹೆಚ್ಚು ಶ್ರಮಿಸಿದವರು. ಮೋಗವೀರ ಸಮುದಾಯದಲ್ಲಿ ಇವರು ಗುರುತಿಸಿಕೊಂಡಿದ್ದು, ಉಡುಪಿಯಲ್ಲಿ ಮೋಗವೀರ ಸಮುದಾಯದ ಜನರು ಹೆಚ್ಚಿದ್ದಾರೆ, ಇದರ ಜತೆಗೆ ಅವರು ರಾಜಕೀಯವಾಗಿ ಹೆಚ್ಚು ಸಾಧನೆ ಮಾಡಿದ್ದಾರೆ. ಇದೀಗ ಯಶ್ ಪಾಲ್ ಗೆಲುವು ಸಾಧಿಸಿದ್ದಾರೆ.
ಇನ್ನೂ ಯಶ್ಪಾಲ್ ಸುವರ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಆದರೆ ಅವರು ಈ ಬಾರಿ ಸೋತಿದ್ದಾರೆ. ಪ್ರಸಾದ್ ರಾಜ್ ಕಾಂಚನ್ ಒಬ್ಬ ಉದ್ಯಮಿಯು ಹೌದು. ಇನ್ನೂ ಜೆಡಿಎಸ್ ಪಕ್ಷದಿಂದ ದಕ್ಷತ್ ಆರ್ ಶೆಟ್ಟಿ ಸೋತಿದ್ದರೆ ಎಎಪಿಯಿಂದ ಪ್ರಕಾಶ್ ಪೂಜಾರಿ ಕೂಡ ಸೋಲು ಅನುಭವಿಸಿದ್ದಾರೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Sat, 13 May 23