Ullal Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ (Ullal Assembly Constituency) ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೆ ಜೆಡಿಎಸ್ ಕೂಡ ಪ್ರಬಲ ಪೈಪೋಟಿ ನೀಡಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ 4 ಬಾರಿ ಶಾಸಕರಾಗಿ ಆಯ್ಕೆಯಾದವರು, ಆದರೆ ಉಳ್ಳಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂದು ಹೇಳಬಹುದು, 4 ಚುನಾವಣೆಯಲ್ಲಿ ಯು.ಟಿ ಖಾದರ್ ಅವರಿಗೆ ಬಿಜೆಪಿ ಅಥವಾ ಇನ್ನೂ ಯಾವ ಪಕ್ಷವು ಪ್ರಬಲವಾದ ಪೈಪೋಟಿ ನೀಡಿರಲಿಲ್ಲ. ಯು.ಟಿ ಖಾದರ್ ಅವರು ಉಳ್ಳಾಲದಲ್ಲಿ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವ, ವಿರೋಧ ಪಕ್ಷದ ಉಪನಾಯಕ ಕೂಡ ಹೌದು, ಧರ್ಮ ಭೇದವಿಲ್ಲದೆ ಕೆಲಸ ಮಾಡಿದ್ದಾರೆ ಎಂಬ ಮಾತು ಕೂಡ ಇದೆ. ಆದರೆ ಹಿಜಾಬ್ ವಿಚಾರವಾಗಿ ಮೌನವಾಗಿರುವುದು ಸ್ವಲ್ಪ ಮಟ್ಟಿಗೆ ಉಳ್ಳಾಲದ ಜನರಲ್ಲಿ ಗೊಂದಲ ಮೂಡಿಸಿದೆ, ಇದರ ಜತೆಗೆ ಯು.ಟಿ ಖಾದರ್ ಈ ಬಾರಿಯು ಕಾಂಗ್ರೆಸ್ನಿಂದ ಮತ್ತೆ ಸ್ಪರ್ಧಿಸಿದ್ದಾರೆ, ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದ್ದು. ಇದನ್ನೂ ಕೂಡ ಸೂಕ್ಷ್ಮ ಪ್ರದೇಶ ಎನ್ನಬಹುದು, ಯುಟಿ ಖಾದರ್ ಅಥವಾ ಕಾಂಗ್ರೆಸ್ ಬಿಟ್ಟು ಯಾರು ಗೆದಿಲ್ಲ, ಆದರೆ ಈ ಬಾರಿ ಬಿಜೆಪಿಯಿಂದ ಪ್ರಬಲ ವ್ಯಕ್ತಿ ಮತ್ತು ಜೆಡಿಎಸ್ನಿಂದ ಅಭ್ಯರ್ಥಿ ಕೂಡ ಹೆಚ್ಚು ಪೈಪೋಟಿ ನೀಡಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಈ ಹಿಂದೆ ಕಾಂಗ್ರೆಸ್ನಿಂದ ಟಿಕೇಟ್ ಆಕ್ಷಾಂಕಿಯಾಗಿದ್ದರು, ಇದೀಗ ಮತದಾರ ಯಾರ ಕೈಎತ್ತುತ್ತಾನೆ ನೋಡಬೇಕಿದೆ.
ಇನ್ನೂ ಜೆಡಿಎಸ್ ಅಭ್ಯರ್ಥಿ ಮೊಯಿನುದ್ದೀನ್ ಬಾವಾ ಈ ಬಾರಿ ಉಳ್ಳಾಲದ ಪ್ರಬಲ ಸ್ಪರ್ಧಿ ಎನ್ನಬಹುದು, ಉಳ್ಳಾಲದ ಜೆಡಿಎಸ್ನ ಮೊದಲ ಅಭ್ಯರ್ಥಿಯಿಂದ ಒತ್ತಾಯಪೂರಕವಾಗಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಕಾಂಗ್ರೆಸ್ ವಿರುದ್ಧ ಸೆಡೆದು ನಿಂತ ಮೊಯಿನುದ್ದೀನ್ ಬಾವಾ ಉಳ್ಳಾಲದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ, ಯು.ಟಿ ಖಾದರಗೆ ಒಂದು ರೀತಿಯಲ್ಲಿ ಸೋಲಿನ ರುಚಿ ತೋರಿಸುವುದರಲ್ಲಿದ್ದಾರೆ. ಆದರೆ ಕೊನೆಗೆ ಯಾರು ಗೆಲ್ಲಬಹುದು ಎಂದು ಇನ್ನೂ ಕೆಲವೇ ಕ್ಷಣದಲ್ಲಿ ತಿಳಿಯುತ್ತದೆ.
ಇನ್ನೂ ಬಿಜೆಪಿಯಲ್ಲಿ ಅಭ್ಯರ್ಥಿಯಾಗಿ ಸತೀಶ್ ಕುಂಪಲ ಸ್ಪರ್ಧಿಸುತ್ತಿದ್ದಾರೆ, ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದ ಇತಿಹಾಸ ಇಲ್ಲ, ಆದರೆ ಈ ಬಾರಿ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡಲು ಜೆಡಿಎಸ್ ಇದೆ, ಆದರೆ ಯು.ಟಿ ಖಾದರ್ಗೆ ಮುಂದೆ ಕುಂಪಲ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ.
ಇನ್ನೂ ಬಹಳ ಪೈಪೋಟಿ ನೀಡುತ್ತಿರುವುದು ಎಸ್ಡಿಪಿಐ ರಿಯಾಜ್ ಫರಂಗಿಪೇಟೆ. ಉಳ್ಳಾಲದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ್ಯ ಇರುವ ಕಾರಣ, ಇಲ್ಲಿ ಮತಗಳು ಹಂಚಿ ಹೋಗಬಹುದು, ಇಲ್ಲಿ ಎಸ್ಡಿಪಿಐ ಕೂಡ ತುಂಬಾ ಪ್ರಬಲವಾಗಿದೆ, ಬಿಜೆಪಿ, ಜೆಡಿಎಸ್ಗಿಂತಲೂ ಎಸ್ಡಿಪಿಐ ರಿಯಾಜ್ ಫರಂಗಿಪೇಟೆ ಹೆಚ್ಚು ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಹೇಳಲಾಗಿದೆ, ಆದರೆ ಈ ಬಾರಿ ಮತದಾರ ಯಾರ ಕೈಹಿಡಿಯುತ್ತಾನೆ ಎಂದು ಕಾದು ನೋಡಬೇಕಿದೆ,
ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್,ಬಿಜೆಪಿ, ಎಸ್ಡಿಪಿಐ, ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ, ಎಸ್ಡಿಪಿಐ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.