Varuna Assembly Election Results 2023: ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜ್ಯ ವಿಧಾಸನಭಾ ಚುನಾವಣೆಯಲ್ಲಿ ಅತ್ಯಂತ ಕುತುಹಲ ಮೂಡಿಸಿದ್ದ ಕ್ಷೇತ್ರಗಳಲ್ಲಿ ಒಂದಾದ ವರುಣಾದಲ್ಲಿ ನಿರೀಕ್ಷೆಯಂತೆ ಸಿದ್ದರಾಮಯ್ಯ ಸುಲಭ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ದೂರದ ವರುಣಾ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದ ಬಿಜೆಪಿಯ ವಿ ಸೋಮಣ್ಣಗೆ ಮುಖಭಂಗವಾಗಿದೆ. ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ಹೆಚ್ಚೂಕಡಿಮೆ 35 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆನ್ನಲಾಗಿದೆ.
ವರುಣಾ ಕ್ಷೇತ್ರ ಸಿದ್ದರಾಮಯ್ಯರಿಗೆ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರ ಮಗ ಯತೀಂದ್ರ ಗೆಲುವು ಸಾಧಿಸಿದ್ದರು. ಈಗ ಸಿದ್ದರಾಮಯ್ಯ ವರುಣಾಗೆ ವಾಪಸ್ ಬಂದಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ವಿ ಸೋಮಣ್ಣರನ್ನು ಕರೆತಂದ ಯೋಜನೆ ವರ್ಕೌಟ್ ಆಗಿಲ್ಲ. ಇನ್ನು, ಜೆಡಿಎಸ್ನ ಅಭ್ಯರ್ಥಿಗೆ ಈ ಚುನಾವಣೆಯಲ್ಲಿ 1,000 ಮತಗಳೂ ಸಿಕ್ಕಿಲ್ಲ.
ಇದೇ ವೇಳೆ, ವಿ ಸೋಮಣ್ಣಗೆ ಡಬಲ್ ಶಾಕ್ ಸಿಕ್ಕಿದೆ. ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋತಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಅವರು ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ