ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ (Vokkaliga Association) ಫ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಂಡಿದ್ದ ಜಾಥಾವನ್ನು ರದ್ದು ಮಾಡಲಾಗಿದೆ ಎಂದು ಕಿಮ್ಸ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದರು. ಡಿಕೆ ಶಿವಕುಮಾರ್ ಅವರು ಈ ರೀತಿ ಮಾಡಬಾರದು. ಇದು ಪಕ್ಷ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ನನ್ನ ಗಮನಕ್ಕೆ ಬಾರದೆ ಯಾವುದೇ ಹೋರಾಟ ಮಾಡಬಾರದು. ಪಕ್ಷದಲ್ಲಿ ನಮ್ಮದೇ ಆದಂತಹ ತತ್ವ ಸಿದ್ದಾಂತಗಳು ಇರುತ್ತವೆ. ಅದಕ್ಕೆ ವಿರುದ್ದವಾಗಿ ನಡೆಯೋಕೆ ಸಾಧ್ಯ ಇಲ್ಲ ಅಂತ ಒಕ್ಕಲಿಗರ ಸಂಘಕ್ಕೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎಂದರು.
ಈ ಹಿನ್ನೆಲೆ ಹೋರಾಟ ರೂಪು ರೇಷೆಗಳನ್ನ ಒಕ್ಕಲಿಗರ ಸಂಘ ಕೈ ಬಿಟ್ಟಿದೆ. ಆದರೆ ನಿರ್ಮಾಲಾನಂದ ಹಾಗೂ ನಂಜಾವಧೂತ ಸ್ವಾಮೀಜಿಗಳ ತೀರ್ಮಾನದಂತೆ ಮಾಡುತ್ತೇವೆ. ಜಾಥಾ ಕೈ ಬಿಟ್ಟಿಲ್ಲ, ಆದರೆ ಮುಂದೂಡಿದ್ದೇವೆ ಅಷ್ಟೇ. ಮಾಡಬೇಡಿ ಅಂದ್ರು, ನಾವು ಮಾಡೇ ಮಾಡುತ್ತೇವೆ. ಸ್ವಾಮೀಜಿ ಹೇಳಲಿ ಅಂತ ಕಾಯುತ್ತಿದ್ದೇವೆ. ಅವರು ಹೇಳಿದ ಹಾಗೇ ನಾವು ಜಾಥಾ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಂದುವರಿದ ಸಿಎಂ ಫೈಟ್; ನನ್ನ ಬಳಿ 135 ಶಾಸಕರು ಇದ್ದಾರೆಂದ ಡಿಕೆ ಶಿವಕುಮಾರ್
ಇವತ್ತು ಸಂಜೆ ನಾವು ಸ್ವಾಮಿಜಿಗಳೊಂದಿಗೆ ಚರ್ಚೆ ನಡೆಸಲಿದ್ದೇವೆ. ನಾಳೆ ಸಂಜೆ ಅಥವಾ ನಾಡಿದ್ದು ಜಾಥಾ ನಡೆಸೆ ನಡೆಸುತ್ತೇವೆ. ಸಮಯದ ಬಗ್ಗೆ ತಿಳಿಸುತ್ತೇವೆ ಎಂದರು. ಫ್ರೀಡಂ ಪಾರ್ಕ್ ಬಳಿ ಸಮಾವೇಶ ಮಾಡಲು ಈ ಮುಂಚೆ ತಿರ್ಮಾನಿಸಲಾಗಿತ್ತು. ಜಾಥಾ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಭಾಗಿ ಆಗುತ್ತಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಸೋಲಿಗೆ ಕಟೀಲ್, ಬಿಎಲ್ ಸಂತೋಷ್ ಹೊಣೆಗಾರರಲ್ಲ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಕೊಡುಗೆ ದೊಡ್ಡದಿದೆ. ಅವಗರಿಗೆ ಅವಕಾಶ ಸಿಕ್ಕಿದೆ ಡಿಕೆ ಶಿವಕುಮಾರ್ ಅವರಿಗೆ ಸಿಗಲಿ. ನಮ್ಮ ಸಂಘದಿಂದ ಡಿಕೆ ಶಿವಕುಮಾರ್ ಪರ ಧ್ವನಿ ಎತ್ತುತ್ತೇವೆ. ಇವತ್ತು ಡಿಕೆ ಶಿವಕುಮಾರ್ ಇಡಿ ಬಲೆಯಲ್ಲಿ ಸಿಲುಕಿದ್ದಾರೆ, ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ