ನನಗೆ ಮೋದಿ ಮುಖ್ಯ, ಶಾಸಕ ಸ್ಥಾನವಲ್ಲ, ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ: ಬಿಜೆಪಿ ಶಾಸಕ ರಾಮದಾಸ್

|

Updated on: Apr 18, 2023 | 10:10 PM

ಮೈಸೂರು ಜಿಲ್ಲೆಯ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಶ್ರೀವತ್ಸ ಅವರ ಪಾಲಾಗಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಮೋದಿ ಪರಮಾಪ್ತ ಎಸ್​ಎ ರಾಮದಾಸ್ ಅವರು ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

ನನಗೆ ಮೋದಿ ಮುಖ್ಯ, ಶಾಸಕ ಸ್ಥಾನವಲ್ಲ, ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ: ಬಿಜೆಪಿ ಶಾಸಕ ರಾಮದಾಸ್
ಎಸ್ಎ ರಾಮದಾಸ್
Follow us on

ಮೈಸೂರು: ಟಿಕೆಟ್ ನಿರೀಕ್ಷೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಮಾಪ್ತರೂ ಆಗಿರುವ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್​ಎ ರಾಮದಾಸ್ (SA Ramdas) ಅವರು ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಇಂತಹ ಕಠಿಣ ಪರಿಸ್ಥಿತಿ ಬಂದಾಗ ಹೇಗೆ ನಡೆದು ಕೊಳ್ಳುತ್ತಾರೆ ಅಂತ ಜನ ಕಾದು ನೋಡುತ್ತಾರೆ. ನಿರಂತರವಾಗಿ ಬಿಜೆಪಿ (BJP) ಸಂಘಟನೆಯ ತೊಡಗಿಸಿಕೊಂಡಿದ್ದೆ, ನನ್ನ ಎಲ್ಲಾ ಚುನಾವಣೆಗಳಲ್ಲೂ ಜಾಸ್ತಿ ಸ್ಪರ್ಧೆಯ ಅಭ್ಯರ್ಥಿಗಳು ಇದ್ದರು. ಮಂತ್ರಿಯಾಗಿ ಅವಕಾಶ ಕೊಡದೇ ಇದ್ದರು ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆಯಲ್ಲಿ ಕೆ.ಆರ್. ಕ್ಷೇತ್ರ (KR Constituency) ಒಂಬರ್ ಒನ್ ಆಗಿದೆ ಎಂದರು.

ಟಿಕೆಟ್ ಸಿಗುವ ನಿರೀಕ್ಷೆ ನನಗೂ ಇತ್ತು, ಹೀಗಾಗಿಯೇ ಬೂತ್ ಮಟ್ಟದಿಂದ ಎಲ್ಲಾ ತಯಾರಿ ಮಾಡಿದ್ದೆ. ಮಾತ್ರವಲ್ಲದೆ, ಈ ಬಾರಿ 50 ಸಾವಿರ ಮತಗಳಿಂದ ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು. ಆದರೆ ಟಿಕೆಟ್ ಕೈ ತಪ್ಪಿದೆ. ಬಳಿಕ ಪಕ್ಷೇತರನಾಗಿ ಸ್ಪರ್ಧಿಸಲು ಒತ್ತಡ ಇತ್ತು. ಪಕ್ಷೇತರನಾಗಿ ನಿಂತರು 13 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಅಂತಾ ಗೊತ್ತಾಗಿತ್ತು. ಎಂಥಾ ಕಠಿಣ ಸ್ಥಿತಿ ಬಂದಾಗಲು ಪಕ್ಷದ ವಿರುದ್ದ ಮಾತಾಡಿರಲಿಲ್ಲ. ನನ್ನ ಜೀವನದ ಪ್ರಶ್ನೆ ಇತ್ತು ಇದರಲ್ಲಿ. ಪಕ್ಷೇತರನಾಗಿ ಗೆದ್ದರು ಬಿಜೆಪಿಗೆ ವಾಪಸ್ಸು ಬರಬಹುದು ಎಂಬ ಲೆಕ್ಕವನ್ನು ಹಾಕಿದ್ದೆ. ಆದರೆ ಮೋದಿ ಅವರ ಜೊತೆಗಿನ ಸಂಬಂಧ ಕಳೆದುಕೊಳ್ಳಬೇಕಾಬಹುದು ಎಂದರು.

ಇದನ್ನೂ ಓದಿ: ಡಾ. ಚಂದ್ರು‌ ಲಮಾಣಿ ಈವರೆಗೂ ಸರ್ಕಾರಿ ನೌಕರನೇ; ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ‌ ಮುಂದುವರಿದ ಸಂಕಷ್ಟ

ಮೈಸೂರು ಭಾಗದಲ್ಲಿ ಬಹಳ ಶಾಸಕರು ಬಿಜೆಪಿಯಲ್ಲಿ ನೊಂದು ಬಿಟ್ಟು ಹೋದರು. ನನಗೆ ಋಣ ಇಷ್ಟೆ ಇತ್ತೇನೋ? ನನ್ನ ನೋವನ್ನು ನಾನೇ ನುಂಗಿದ್ದೇನೆ. ವೈಯಕ್ತಿಕವಾಗಿ ಎಷ್ಟೆ ನಷ್ಟವಾಗಿದ್ದರೂ ದೇಶಕ್ಕೆ ನಷ್ಟವಾಗಬಾರದು ಎಂದು ನಿರ್ಧರಿಸಿದೆ. ಟಿಕೆಟ್ ಕೈ ತಪ್ಪಿದ್ದರು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಪಕ್ಷದ ಅಭ್ಯರ್ಥಿ ಶ್ರೀವತ್ಸ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇನೆ. ಪಕ್ಷದ ಅಭ್ಯರ್ಥಿ ಪರವಾಗಿ ಮತ ಯಾಚಿಸುತ್ತೇನೆ. ನನಗೆ ಶಾಸಕ ಸ್ಥಾನ ಮುಖ್ಯವಲ್ಲ ದೇಶದ ಪ್ರಧಾನಿ ಮುಖ್ಯ ಎಂದರು.

ವಿಧಾನಸಭೆ ತಾನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Tue, 18 April 23