ಬಿಜೆಪಿಯ ಮತ್ತೋರ್ವ ಶಾಸಕ ರಾಜೀನಾಮೆ ಘೋಷಣೆ, ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

|

Updated on: Apr 15, 2023 | 10:40 PM

ಟಿಕೆಟ್ ಸಿಗದ ನಾಯಕರು ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಲ್ಲರದೇ ರಾಜೀನಾಮೆ ಘೋಷಿಸಿದ್ದಾರೆ. ಈ ಪರಂಪರೆಯು ಇದೀಗ ಹಾವೇರಿಗೆ ತಟ್ಟಿದೆ.

ಬಿಜೆಪಿಯ ಮತ್ತೋರ್ವ ಶಾಸಕ ರಾಜೀನಾಮೆ ಘೋಷಣೆ, ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
neharu olekar
Follow us on

ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಈ ಬಾರಿ ಬಿಜೆಪಿ ಹಲವು ಶಾಸಕರಿಗೆ ಕೊಕ್ ನೀಡಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ನಾನಾ ತಂತ್ರಗಳೊಂದಿಗೆ ಬಿಜೆಪಿ ಹೈಕಮಾಂಡ್​ ಅಚ್ಚರಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಹೊಸ ಪ್ರಯೋಗಕ್ಕೆ ಮುಂದಾಗಿದೆ. ಆದ್ರೆ, ಟಿಕೆಟ್​ ಕೈತಪ್ಪಿದ್ದರಿಂದ ಸಾಲು ಸಾಲು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಹಲವು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಸಿಎಂ ತವರು ಜಿಲ್ಲೆಯ ವಿಕೆಟ್ ಪತನವಾಗಿದೆ. ಹಾವೇರಿ ಶಾಸಕ ನೆಹರು ಓಲೇಕಾರ್ ಸಹ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಈ ಬಗ್ಗೆ ಇಂದು(ಏಪ್ರಿಲ್ 15) ಅಧಿಕೃತ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಹನಿ ನೀರಾವರಿಯಲ್ಲಿ 1,500 ಕೋಟಿ ರೂ. ಕೊಳ್ಳೆ: ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ

ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೆಹರು ಓಲೇಕಾರ್, ನಾಳೆ(ಏಪ್ರಿಲ್ 16) ಶಿರಸಿಗೆ ತೆರಳಿ ಸ್ಪೀಕರ್ ಕಾಗೇರಿಗೆ ರಾಜೀನಾಮೆ ಪತ್ರ ಸಲ್ಲಿಸುವೆ. ಬಳಿಕ ಶಿರಸಿಯಿಂದ ಬೆಂಗಳೂರಿಗೆ ತೆರಳಿ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಂತರ ನಾಳೆ ಸಂಜೆ ಜೆಡಿಎಸ್‌ ಪಕ್ಷಕ್ಕೆ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ. ಟಿಕೆಟ್ ತಪ್ಪಿಸಲು ಹಲವರ ಮುಂದೆ ನನ್ನ ಬಗ್ಗೆ ಸಿಎಂ ಮಾತಾಡಿದ್ದಾರೆ. ನನ್ನ ಟಿಕೆಟ್ ತಪ್ಪಿಸಲು ಅನೇಕ ಜನರ ಮುಂದೆ ನನ್ನ ಬಗ್ಗೆಯೂ ಮಾತನಾಡಿದ್ದಾರೆ. ಅದೆಲ್ಲವನ್ನೂ ತಿಳಿದುಕೊಂಡು ನಾನು ಮಾತನಾಡಿದ್ದೆನೆ. ನನ್ನ ಟಿಕೆಟ್ ತಪ್ಪಿಸಲು ಅನೇಕ ಜನರ ಮುಂದೆ ನನ್ನ ಬಗ್ಗೆಯೂ ಮಾತನಾಡಿದ್ದಾರೆ. 1500 ಕೋಟಿ ರೂಪಾಯಿ ಹಗರಣ ದಾಖಲಾತಿ ಬಿಡುಗಡೆ ಮಾಡುತ್ತೇನೆ. ಎಷ್ಟು ವೆಚ್ಚ ಮಾಡಿದ್ದಾರೆ ಏನು ಎಂಬುವುದನ್ನು ಮಾಧ್ಯಮದವರನ್ನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಹೇಳಿದರು.