Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿ ನೀರಾವರಿಯಲ್ಲಿ 1,500 ಕೋಟಿ ರೂ. ಕೊಳ್ಳೆ: ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ

ಸಿಎಂ ಬೊಮ್ಮಾಯಿ ಗುತ್ತಿಗೆದಾರನ ಜೊತೆ ಸೇರಿ ಸಂಪೂರ್ಣವಾಗಿ 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾನೆ ಎಂದು ನೆಹರು ಓಲೇಕಾರ ಆರೋಪ ಮಾಡಿದ್ದಾರೆ.

ಹನಿ ನೀರಾವರಿಯಲ್ಲಿ 1,500 ಕೋಟಿ ರೂ. ಕೊಳ್ಳೆ: ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ
ಬಸವರಾಜ ಬೊಮ್ಮಾಯಿ, ನೆಹರು ಓಲೇಕಾರ
Follow us
ಆಯೇಷಾ ಬಾನು
|

Updated on: Apr 13, 2023 | 10:53 AM

ಬೆಂಗಳೂರು: ಬಿಜೆಪಿ ನಿನ್ನೆ ರಾತ್ರಿ(ಏಪ್ರಿಲ್ 12) ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಅಭ್ಯರ್ಥಿಗಳ 2ನೇ ಪಟ್ಟಿ ಘೋಷಿಸಿದೆ. ಆದ್ರೆ ಟಿಕೆಟ್ ಕೈ ತಪ್ಪಿದ ಅಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದು ರಾಜೀನಾಮೆ ಪರ್ವ ಶುರುವಾಗಿದೆ. ಮತ್ತೊಂದೆಡೆ ಟಿಕೆಟ್ ಕೈ ತಪ್ಪಿದಕ್ಕೆ ಶಾಸಕ ನೆಹರು ಓಲೇಕಾರ(Neharu Olekar) ಕೆಂಡಾಮಂಡಲವಾಗಿದ್ದು ಸಿಎಂ ಬೊಮ್ಮಾಯಿ(Basavaraj Bommai) ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಗೂ 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಟಿಕೆಟ್ ತಪ್ಪಲು ಸಿಎಂ ಬಸವರಾಜ್ ಬೊಮ್ಮಾಯಿ ಕಾರಣ. ವೈಯಕ್ತಿಕವಾಗಿ ದ್ವೇಷ ಸಾಧಿಸ್ಕೊಂತ ಬಂದಿದ್ದರು. ನನ್ನ ಬೆಳವಣಿಗೆಯನ್ನು ಸಹಿಸದೆ ಟಿಕೆಟ್ ತಪ್ಪಿಸಿದ್ದಾರೆ. ಟಿಕೆಟ್ ಕೊಟ್ಟಿರುವ ಅಭ್ಯರ್ಥಿ ಎಂದು ಕೂಡ ಸಾರ್ವಜನಿಕರ ಜೊತೆ ಬೆರತಿಲ್ಲ. ಎಂದೂ ಪಕ್ಷದ ಧ್ವಜ ಹಿಡಿದು ಕೆಲಸ ಮಾಡಿದವನಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅವರು ಆ ವ್ಯಕ್ತಿಯನ್ನ ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾದ್ಯಕ್ಷ ಸಿದ್ದರಾಜ್ ಮತ್ತು ಬೊಮ್ಮಾಯಿ ಇಬ್ರು ನೇರ ಕಾರಣ. ನಾನು ಬೆಳೆದೆ ಎಂದ್ರೆ ಅವರಿಗೆ ಜಿಲ್ಲೆಯಲ್ಲಿ ಸಮಸ್ಯೆ ಆಗಬಹುದೆಂದು ಟಿಕೆಟ್ ತಪ್ಪಿಸಿದ್ರು. ದಮ್ ತಾಕತ್ ಬಗ್ಗೆ ಮೊನ್ನೆ ಟಿವಿಯಲ್ಲಿ ಮಾತನಾಡಿದನ್ನ ನೋಡಿದ್ದೇನೆ. ಬೊಮ್ಮಾಯಿಗೆ ದಮ್ ತಾಕತ್ ಎಷ್ಟ್ ಇದೆ ಅನ್ನೊದನ್ನ ಈ ಬಾರಿ ತೋರಿಸಬೇಕು. ಈ ಬಾರಿ ನಾವು ಕೂಡ ನಮ್ಮ ದಮ್ ತಾಕತ್ ತೋರಿಸ್ತಿವಿ. ಅವನು (ಬೊಮ್ಮಾಯಿ) ಮಾಡಿದ ಕಳಪೆ ಕೆಲಸಗಳನ್ನ ಬಹಿರಂಗ ಮಾಡ್ತೆನಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Abhishek Ambareesh: ಮಂಡ್ಯದಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ ನಟ ಅಭಿಷೇಕ್ ಅಂಬರೀಷ್

ಸಿಎಂ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ

ಸಿಎಂ ಬೊಮ್ಮಾಯಿ ಗುತ್ತಿಗೆದಾರನ ಜೊತೆ ಸೇರಿ ಸಂಪೂರ್ಣವಾಗಿ 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾನೆ. ಒಂದೇ ವರ್ಷದಲ್ಲಿ ಹಾಳಾಗುವ ಮಟೆರಿಯಲ್ ಹಾಕಿ ಕೊಳ್ಳೆ ಹೊಡೆದಿದ್ದಾನೆ. ಶಿಗ್ಗಾಂವಿ ಕ್ಷೇತ್ರಕ್ಕೆ ಸಿಮಿತವಾಗಿ ಮಾಡಿದ ತುಂತುರ ಹನಿ ನೀರಾವರಿ ಯೋಜನೆ ಅದು. ನಮ್ಮ ಕ್ಷೇತ್ರದ ಅಭಿವೃದ್ದಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಲೈಟ್ ಹಾಕಲು ದುಡ್ಡು ಕೊಡಲಿಲ್ಲ, ಡ್ರಾಮಾ ಸೆಂಟರ್ ಮಾಡಲು ದುಡ್ಡು ಕೊಡಲಿಲ್ಲ. ಆಯುಷ್ ಕಾಲೇಜ್ ಮಾಡಲು ಒಪ್ಪಿಗೆ ಕೊಡಲಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಕಲ್ಲು ಹಾಕುವ ಕೆಲಸ ಮಾಡಿದ. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲೂ ಒಳ್ಳೆಯ ದೀಪಾಲಂಕರ ಮಾಡಲಾಗಿದೆ. ಆದ್ರೆ ನಮ್ಮ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಒಳ್ಳೆಯ ಬೀದಿ ದೀಪಗಳನ್ನು ಹಾಕಲು ಒಂದು ರೂಪಾಯಿ ಕೊಡಲಿಲ್ಲ. ಅವನಂತ ಕಳಪೆ ಮುಖ್ಯಮಂತ್ರಿ ಯಾರೂ ಇಲ್ಲ. ಅವನೊಬ್ಬ ಬರ್ಬಾದ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿ ಜಿಲ್ಲೆಯನ್ನು ನೋಡುವುದರ ಬದಲು ಕೇವಲ ಶಿಗ್ಗಾಂವಿ ನೋಡಿದ. ಶಿಗ್ಗಾಂವಿಯನ್ನೆ ಜಿಲ್ಲೆ ಅಂತಾ ಅಂದುಕೊಂಡಿದ್ದ. ನಾಳೆ ಬೆಂಬಲಿಗರ ಸಭೆ ಕರೆದಿದ್ದೆನೆ, ಸಭೆಯಲ್ಲಿ ಮುಂದಿನ ನಡೆ ತಿರ್ಮಾನಿಸುತ್ತೇನೆ ಎಂದು ನೆಹರು ಓಲೇಕಾರ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು