ಬಿ.ಸಿ ಪಾಟೀಲ್ ವಿರುದ್ಧ ಬಣಕಾರ್​ ಆಪರೇಷನ್​ ಹಸ್ತ ಸಕ್ಸಸ್​ ಬೆನ್ನಲ್ಲೇ ಶಿವರಾಮ್ ಹೆಬ್ಬಾರ್​ ವಿರುದ್ಧವೂ ಕಾಂಗ್ರೆಸ್​ ರಿವರ್ಸ್ ಆಪರೇಷನ್

| Updated By: ರಮೇಶ್ ಬಿ. ಜವಳಗೇರಾ

Updated on: Dec 14, 2022 | 6:17 PM

ಸಚಿವ ಬಿ.ಸಿ ಪಾಟೀಲ್ ವಿರುದ್ಧ ಬಣಕಾರ್​ ಆಪರೇಷನ್​ ಹಸ್ತ ಸಕ್ಸಸ್​ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಿವರಾಮ್ ಹೆಬ್ಬಾರ್​ ವಿರುದ್ಧವೂ ರಿವರ್ಸ್ ಆಪರೇಷನ್​ಗೆ ಕಾಂಗ್ರೆಸ್​ ಮುಂದಾಗಿದೆ.

ಬಿ.ಸಿ ಪಾಟೀಲ್ ವಿರುದ್ಧ ಬಣಕಾರ್​ ಆಪರೇಷನ್​ ಹಸ್ತ ಸಕ್ಸಸ್​ ಬೆನ್ನಲ್ಲೇ ಶಿವರಾಮ್ ಹೆಬ್ಬಾರ್​ ವಿರುದ್ಧವೂ ಕಾಂಗ್ರೆಸ್​ ರಿವರ್ಸ್ ಆಪರೇಷನ್
Shivaram Hebbar
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023)  ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ನಿಂದ ಆಪರೇಷನ್ ಹಸ್ತ (Congress Operation Hasta)  ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್​ನಿಂದ ಗೆದ್ದು ಆಪರೇಷನ್ ಕಮಲದಿಂದ ಬಿಜೆಪಿಗೆ ಹೋದವರ ವಿರುದ್ಧ ಕೈ ನಾಯಕರು ತೊಡೆತಟ್ಟಿದ್ದಾರೆ. ಇದರಕ್ಕೆ ಪೂರಕವೆಂಬಂತೆ ಬಿ.ಸಿ.ಪಾಟೀಲ್ ವಿರುದ್ಧ U.B.ಬಣಕಾರ್​ ಆಪರೇಷನ್​ ಹಸ್ತ ಸಕ್ಸಸ್​ ಬೆನ್ನಲ್ಲೇ ಇದೀಗ ಮತ್ತೋರ್ವ ಸಚಿವ ಅರೆಬೈಲ್ ಶಿವರಾಮ್ ಹೆಬ್ಬಾರ್​(Shivaram Hebbar) ವಿರುದ್ಧವೂ ರಿವರ್ಸ್ ಆಪರೇಷನ್​ಗೆ ಕಾಂಗ್ರೆಸ್ ಮುಂದಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ 2 ಕಾರಣ ಕೊಟ್ಟ ದತ್ತ, ದೇವೇಗೌಡ್ರ ಹತ್ತಿರ ಹೇಳಿಕೊಳ್ಳಲಾಗದೇ ತೊಳಲಾಟಕ್ಕೆ ಒಳಗಾದ ಮೇಷ್ಟ್ರು

ಹೌದು…ಮಾಜಿ ಶಾಸಕ V.S.ಪಾಟೀಲ್​ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ(ಡಿಸೆಂಬರ್ 15) ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಶಿವರಾಮ್ ವಿರುದ್ಧ ನಿಂತು ಸೋಲುಕಂಡಿದ್ದ ವಿ‌ಎಸ್ ಪಾಟೀಲ್ ಯಲ್ಲಾಪುರ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿದ್ದಾರೆ. ಇದರಿಂದ ಕಾಂಗ್ರೆಸ್​ ಶಿವರಾಮ್ ವಿರುದ್ಧ ಮತ್ತೆ ವಿ‌ಎಸ್ ಪಾಟೀಲ್ ಅವರನ್ನೇ ಕಣಕ್ಕಿಳಿಸಲು ಪ್ಲಾನ್ ಮಾಡಿದೆ.

ಯಲ್ಲಾಪುರ ಕ್ಷೇತ್ರದಿಂದ ವಿ.ಎಸ್.ಪಾಟೀಲ್ ಒಮ್ಮೆ ಶಾಸಕರಾಗಿದ್ದರು​. ಈ ಹಿಂದೆ ಕಾಂಗ್ರೆಸ್​ನಿಂದ ಶಿವರಾಂ ಹೆಬ್ಬಾರ್ ಸ್ಪರ್ಧೆ ಮಾಡಿದ್ದರೆ ಬಿಜೆಪಿಯಿಂದ ವಿ.ಎಸ್.ಪಾಟೀಲ್ ಎದುರಾಳಿಯಾಗಿದ್ದರು. ಇದೀಗ ಶಿವರಾಮ್ ಹೆಬ್ಬಾರ್ ಬಿಜೆಪಿ ಸೇರಿದ್ದರಿಂದ ವಿ.ಎಸ್.ಪಾಟೀಲ್ ಅವರಿಗೆ ಈ ಬಾರಿ ಚುನಾವಣೆ ಟಿಕೆಟ್ ಕೈತಪ್ಪಲಿದೆ. ಈ ಹಿನ್ನೆಲೆಯಲ್ಲಿ ​ವಿ.ಎಸ್.ಪಾಟೀಲ್ ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದು, ಮತ್ತೆ ಶಿವರಾಮ್​ ಹೆಬ್ಬಾರ್​ ವಿರುದ್ಧವೇ ಅಖಾಡಕ್ಕಿಳಿಯುವುದು ಪಕ್ಕಾ ಆಗಿದೆ. ಆದ್ರೆ, ಪಕ್ಷದ ಚಿಹ್ನೆ ಮಾತ್ರ ಬೇರೆಯಾಗಿರಲಿದೆ.

ಇದನ್ನೂ ಓದಿ: ಕಾರ್ಕಳ ಕ್ಷೇತ್ರ ಬಿಟ್ಟು ಹೋಗುವಂತೆ ಸಚಿವ ಸುನಿಲ್ ಕುಮಾರ್​ಗೆ ಮನವಿಯೊಂದಿಗೆ ಸವಾಲ್ ಹಾಕಿದ ಮುತಾಲಿಕ್

ಕಾಂಗ್ರೆಸ್​ನಿಂದ ಇದು 2ನೇ ಬೇಟೆ

ರಿವರ್ಸ್ ಆಪರೇಷನ್​ಗೆ ಮುಂದಾದ ಕಾಂಗ್ರೆಸ್​ನಿಂದ ಇದು 2ನೇ ಬೇಟೆಯಾಗಿದೆ. ಇತ್ತೀಚೆಗಷ್ಟೇ ಬಿ.ಸಿ.ಪಾಟೀಲ್ ಹಣೆಯಲು ಬಿಜೆಪಿ ಮಾಜಿ ಶಾಸಕ ಯುಬಿ ಬಣಕಾರ್ ಅವರ ಆಪರೇಷನ್ ಹಸ್ತ ಸಕ್ಸನ್ ಆಗಿತ್ತು. ಇದೀಗ ಶಿವರಾಮ್ ಹೆಬ್ಬಾರ್ ವಿರುದ್ಧ ಬಿಜೆಪಿಯ ವಿ.ಎಸ್.ಪಾಟೀಲ್ ಅವರನ್ನು ಸೆಳೆಯಲು ಕಾಂಗ್ರೆಸ್ ಯಶಸ್ವಿಯಾಗಿದ್ದು, ಈ ಮೂಲಕ ಕಾಂಗ್ರೆಸ್​ ಬಿಟ್ಟು ಹೋದ ನಾಯಕರನ್ನು ಕಟ್ಟಿಹಾಕಲು ಕಾಂಗ್ರೆಸ್ ಇನ್ನಷ್ಟು ಆಪರೇಷನ್ ಹಸ್ತ ಮುಂದುವರಿಸುವ ಸಾಧ್ಯತೆಗಳಿವೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:57 pm, Wed, 14 December 22