Karnataka Assembly Polls 2023 Highlights: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರುವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತಿದೆ. ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೋಳಿ ಈ ಹಿಂದೆ ಸಿಡಿ ಪ್ರಕರಣದಲ್ಲಿ ಸಿಲುಕಿದ್ದರು. ಈ ಕುರಿತು ನಿನ್ನೆ (ಜ.30) ರಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಡಿ ಷಡ್ಯಂತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ, 100ಕ್ಕೂ ಹೆಚ್ಚು ನಾಯಕರ ಮತ್ತು ಅಧಿಕಾರಿಗಳ ಸಿಡಿ ತಯಾರಿಸಿದ್ದಾರೆ. ಕೂಡಲೆ ಈ ಪ್ರಕರಣವನ್ನು ಸಿಬಿಐ ತನಿಕೆಗೆ ನೀಡಬೇಕು ಒತ್ತಾಯಿಸಿದರು. ಇದಷ್ಟೇ ಅಲ್ಲದೆ ನನ್ನ (ರಮೇಶ ಜಾರಕಿಹೋಳಿ) ಮತ್ತು ಡಿಕೆ ಶಿವಕುಮಾರ್ ಸಂಬಂಧ ಹಾಳಾಗೋಕೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯ ಕಾರಣ ಎಂದು ಟೀಕಿಸಿದ್ದರು. ಇನ್ನು ಕಾಂಗ್ರೆಸ್ನ ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದು, ರಾಜ್ಯ ನಾಯಕರು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಜೆಡಿಎಸ್ನ ಹಾಸನ ಟಿಕೆಟ್ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
ತುಮಕೂರು: ಅಟ್ಟಿಕಾ ಬಾಬು ಕಾಲ್ ಮಾಡಿ ತುಮಕೂರಿನಲ್ಲಿ ಮನೆ ಮಾಡಿದಿನಿ ದಯಮಾಡಿ ಮನೆಗೆ ಬಂದು ಹೋಗಿ ಅಂತ ಆಹ್ವಾನ ಮಾಡಿದ್ದರು. ಹಾಗಾಗಿ ಬಂದು ಟೀ ಕುಡಿದು ಹೋಗುತ್ತಿದ್ದೇನೆ. ಇದರಲ್ಲಿ ವಿಶೇಷ ಏನಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ತುಮಕೂರು ನಗರ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಟ್ಟಿಕಾ ಬಾಬುಗೆ ಟಿಕೆಟ್ ಕೊಡುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷ ಹೈಕಮಂಡ್ ಪಕ್ಷ, ತಿರ್ಮಾನ ಮಾಡ್ಬೇಕಿರುವುದು ಹೈಕಮಂಡ್. ಹೈಕಮಂಡ್ ತಿರ್ಮಾನಕ್ಕೆ ನಾವೆಲ್ಲಾ ಬದ್ದರಾಗಿರುತ್ತೇವೆ. ಇಲ್ಲಿ ಯಾವುದೇ ರಾಜಕೀಯದ ಚರ್ಚೆ ಆಗಿಲ್ಲ. ನಾನು ಬಾಬಣ್ಣ ಇಬ್ರು ಸ್ವತಃ ಅಣ್ಣತಮ್ಮಂದಿರು ಇದ್ದಂಗೆ. ಇದು ನನ್ನ ಮನೆ ಇದ್ದಂಗೆ ಬಂದು ಟೀ ಕುಡಿದು ಹೋಗ್ತಿದಿನಿ ಅಷ್ಟೇ. ನಾನು ಇವಾಗ ತುಮಕೂರು ಮಾಹಿತಿ ತಗೊಂಡಿದಿನಿ. ನನ್ನ ಮಾಹಿತಿಯನ್ನ ಹೈಕಮಂಡ್ಗೆ ಕೊಡುತ್ತೇನೆ. ನಿರ್ಧಾರ ಹೈಕಮಂಡ್ ಮಾಡ್ಬೇಕು ನಾನಲ್ಲ ಎಂದರು.
ಸಿಡಿ ಪ್ರಕರಣದ ಆರೋಪ ಪ್ರತ್ಯಾರೋಪ ಮುಂದುವರೆದರೆ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಗಳಿಗೆ ಡ್ಯಾಮೇಜ್ ಆಗುತ್ತದೆ. ಮೂರೂ ಕುಟುಂಬಗಳು ದೊಡ್ಡದಿವೆ. ಸಿಡಿ ಪ್ರಕರಣವನ್ನು ಇಲ್ಲಿಗೆ ಬಿಡಿ, ಮುಂದುವರಿಸಬೇಡಿ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರಲಿದೆ. ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುವುದನ್ನು ಮೂವರು ನಿಲ್ಲಿಸಬೇಕು. ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ, ಇನ್ನೂ ಎತ್ತರಕ್ಕೆ ಬೆಳೆಯಬೇಕು. ನಾವೆಲ್ಲರು ಸೇರಿ ರಾಜಕೀಯವಾಗಿ ಹೋರಾಟ ಮಾಡೋಣ ಬನ್ನಿ. ಜನರಿಗೆ ಯಾರ ಮೇಲೆ ಪ್ರೀತಿ ಇದೆಯೋ ಅವರಿಗೆ ವೋಟ್ ಹಾಕುತ್ತಾರೆ ಎಂದರು.
ರಾಮನಗರ: ರಾಷ್ಟ್ರಪತಿ ಮಾಡುತ್ತೇನೆ ಎಂದರೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ.ರವಿ, ಮನುಷ್ಯನ ಹೆಣಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ, ಹೆಣ ತಗೊಂಡು ರಾಜಕಾರಣ ಮಾಡಲು ಆಗಲ್ಲ. ಹೆಣ ಎದ್ದು ಬಂದು ಓಟು ಹಾಕುತ್ತಾ? ಹಣವನ್ನ ಯಾರು ಕೂಡ ಮನೆಯಲ್ಲಿ ಮೂರು ದಿನ ಇಟ್ಟುಕೊಳ್ಳುವುದಿಲ್ಲ. ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ
ಅವರು ಹೆಣವಾಗಿ ಬರುವುದು ಬೇಡ. ಅವರಿಲ್ಲದೇ ಬಿಜೆಪಿ ಕೇಂದ್ರದಲ್ಲಿ ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೂಡ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಹತಾಶೆಯಿಂದ ಹೆಣದ ರಾಜಕಾರಣ ಮಾತನಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಸಿ.ಟಿ.ರವಿ, ಸಿಡಿ ಕೇಸ್ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರಬೇಕು ಎಂದರು. ಸರ್ಕಾರದ ಸಾಧನೆಯನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ. ನಾವು ಈಗ ಮವೋಲಿಸಬೇಕಿರುವುದು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಎಂದರು.
ರಾಮನಗರ: ಜಿಲ್ಲೆಯ ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ರಾಮದೇವರಬೆಟ್ಟ ಎಂದು ನಾವು ಇಟ್ಟ ಹೆಸರಾ? ರಾಮನಗರ ಎಂದು ಹೆಸರು ಬರಲು ಹಿನ್ನೆಲೆ ಏನು? ಇದನ್ನ ಉಳಿಸಬೇಕಾ? ಬೇಡವಾ? ನಮ್ಮ ಮೇಲೆ ಆರೋಪ ಮಾಡುವವರು ರಾಮಮಂದಿರಾ ನಿರ್ಮಾಣಕ್ಕೆ ಯಾಕೆ ವಿರೋಧ ಮಾಡಿದರು? ಶುದ್ದ ಹಿಂದೂಗಳು ಆದರೆ ರಾಮಮಂದಿರಾ ನಿರ್ಮಾಣಕ್ಕೆ ವಿರೋಧ ಮಾಡಲ್ಲ. ಇವರುಗಳು ಯಾಕೆ ವಿರೋಧ ಮಾಡಿದರು? ಮಂದಿರ ಕಟ್ಟಬೇಡಿ ಎಂದು ಯಾರಾದರೂ ಕಟ್ಟಿಹಾಕಿದ್ದಾರಾ? ಮಂದಿರ ಕಟ್ಟಿ ತೋರಿಸಬೇಕಿತ್ತು, ಯಾರು ಬೇಡ ಎಂದಿದ್ದಾರೆ ಎಂದು ಪ್ರಶ್ನಿಸಿದರು.
ರಾಮನಗರ: ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲ ಖಾನ್ ಎಂದು ಕರೆಯುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅವರ ನೀತಿಗೆ, ಅವರ ನಡುವಳಿಕೆಗೆ ರಾಜ್ಯದ ಜನ ಇಟ್ಟ ಹೆಸರು. ನಾನಲ್ಲ. ಹುಲಿಯಾ ಎಂದು ಅವರ ತಂದೆ ತಾಯಿ ಇಟ್ಟಿದ್ದರಾ? ನನ್ನನ್ನ ಹಿಂದೂ ಹುಲಿ ಸಿಟಿ ರವಿ ಎನ್ನುತ್ತಾರೆ, ನಮ್ಮ ಅಪ್ಪ ಇಟ್ಟ ಹೆಸರಾ? ಪ್ರೀತಿಯಿಂದ ಜನಕೊಟ್ಟ ಅಬಿಧಾನ. ಎಸ್ಡಿಪಿಐಗೆ ಸಿದ್ದರಾಮಯ್ಯ ಬೆಂಬಲ ಕೊಟ್ಟರು, ಎಸ್ಡಿಪಿಐ ಯಾರ ಮೇಲೆ ಕತ್ತಿ ಹಿಡಿದಿದ್ದು? ಪಿಎಫ್ಐ ಕತ್ತಿ ಹಿಡಿದಿದ್ದು ತನ್ವಿರ್ ಸೇಠ್ ಮೇಲೆ. ನಮ್ಮ ಶಾಸಕನ ಮೇಲೆ ಅಲ್ಲ. ಡಿಜಿ ಹಳ್ಳಿ, ಕೆಜಿ ಹಳ್ಳಿ ಗ್ಯಾಂಗ್ ಮತ್ತೆ ಆಕ್ವೀಟ್ ಆಗಬೇಕಾ? ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿ ಶಾಸಕ ಅಲ್ಲ, ಅವರದ್ದೇ ಪಾರ್ಟಿಯಾ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ್ದ ಗ್ಯಾಂಗ್. ಅವರಿಗೆ ಬೆಂಬಲ ಕೊಡುವ ನೀತಿ, ಕಾಂಗ್ರೆಸ್ ಪಕ್ಷದ ನೀತಿ ಎಂದರು.
ರಾಮನಗರ: ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯನವರಿಗೆ ಸುಳ್ಳು ಹೇಳುವುದು ಹುಟ್ಟು ಗುಣ, ಹಳೇ ಕಾಯಿಲೆ. ಅವರಿಗೆ ಬೇಕಾದಾಗ ಅಹಿಂದ ರಾಜಕಾರಣ ಮಾಡಿದರು. ಅಧಿಕಾರಕ್ಕೆ ಬಂದಾಗ ಅಹಿಂದವನ್ನ ದೂರಕ್ಕೆ ಇಟ್ಟುಬಿಟ್ಟರು. ಅವರು ಅಧಿಕಾರದಲ್ಲಿ ಇದ್ದಾಗ ಒಂದು ಆರೋಪ ಕೇಳಿ ಬರುತ್ತಿತ್ತು. ಜಿಲೆಬಿ ಕಂಡರೇ ಆಗದಿರುವ ಆರೋಪ ಇತ್ತು
ಜಿಲೆಬಿ ಅಂದರೆ ತಿನ್ನುವ ಜಿಲೆಬಿ ಅಲ್ಲ, ಗೌಡ, ಲಿಂಗಾಯತ, ಬ್ರಾಹ್ಮಣ ಕಂಡರೇ ಆಗದಿರುವ ರಾಜಕಾರಣ ಮಾಡಿದ್ದರು. ಅಧಿಕಾರದಲ್ಲಿ ಇದ್ದಾಗ ಅವರ ಮೇಲೆ ಆರೋಪ ಇತ್ತು. ಇದು ಜನರನ್ನ ಪ್ರೀತಿಸುವ ರಾಜಕಾರಣಾನಾ? ಹಿಂದೂ ಆದವರು ರಾಮಮಂದಿರಾ ಕಟ್ಟಲು ವಿರೋಧ ಮಾಡುತ್ತಾರಾ? ಹಿಂದೂ ಆದವರು ಟಿಪ್ಪು ಜಯಂತಿ ಆಚರಿಸಲು ಹೋಗಲ್ಲ. ನಾಲ್ವಡಿ ಕೃಷ್ಣರಾಜ ಜಯಂತಿ ಆಚರಿಸುತ್ತಾರೆ. ಸಿದ್ದರಾಮಯ್ಯನವರದ್ದು ಅನುಕೂಲಕ್ಕೆ ತಕ್ಕಂತ ನಡುವಳಿಕೆ. ಕುಂಕುಮ ಕಂಡರೇ ಆಗದಿರುವವರು ಯಾವ ಸೀಮೆ ಹಿಂದೂ? ಕೇಸರಿ ಕಂಡರೇ ಅಲರ್ಜಿ ಬೆಳೆಸಿಕೊಂಡಿರುವವರು ಎಲ್ಲರನ್ನು ಪ್ರೀತಿಸುವ ಜನನಾ? ಭಾರತದ ರಾಷ್ಟಧ್ವಜದಲ್ಲೇ ಕೇಸರಿ ಇದೆ. ಹಾಗಂತ ಕೇಸರಿ ದೂರ ಇಟ್ಟುಬಿಡುತ್ತಾರಾ? ಸ್ವಾಮೀಜಿಗಳು ಧರಿಸುವ ಬಟ್ಟೆಯೇ ಕೇಸರಿ. ಸ್ವಾಮೀಜಿಗಳ ಆಶಿರ್ವಾದ ಬೇಕು, ಆದರೆ ಕೇಸರಿ ಕಂಡರೇ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಅನ್ನೋದು ಬೆಳಗಾವಿ ಜನರಿಗೆ ಗೊತ್ತಿದೆ. 2000 ಇಸವಿಯಿಂದಲೂ ಹೆಸರು ಇದೆ, ಎಷ್ಟು ಜನ ಸಿಡಿಯಲ್ಲಿ ಸಿಕ್ಕು ಮುದುಡಿಯ ಹೋಗಿದ್ದಾದರೋ ಆ ಜನ ಇಟ್ಟ ಹೆಸರದು. ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಅಂತಾನೂ ಹೇಳುತ್ತಾರೆ ಎಂದು ಎಂಎಲ್ಸಿ ಲಖನ್ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ ಬಗ್ಗೆ ಹೇಳುತ್ತಿಲ್ಲ, ಆದರೆ ಕೆಪಿಸಿಸಿ ಅಂದರೆ ಕರ್ನಾಟಕ ಪ್ರಚಾರ ಸಿಡಿ ಕಮೀಟಿ ಅಂತಾರೆ. ಈಗ ಮತ್ತೆ ಅವರು (ಸಿಡಿ) ಉದ್ಯೋಗ ಹೆಚ್ಚು ಮಾಡಿದ್ದಾರೆ. ಇವರ ಕೈಯಲ್ಲಿ ರಾಜ್ಯ ಸಿಕ್ಕರೆ ಮುಗಿದೇ ಹೋಯಿತು ದೇವರ ಬಲ್ಲಾ. ಎಂದರು.
ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದ ಎಂಎಲ್ಸಿ ಲಖನ್ ಜಾರಕಿಹೊಳಿ (Lakhan Jarakiholi), ಲಂಚ ಮಂಚ ಅಂತಾ ಈ ಮಹಾರಾಜ ಹೇಳುತ್ತಾನೆ. ಇವನು ಲುಂಗಿ ಬಿಚ್ಚೋದು ಎಲ್ಲ ನಮಗೆ ಗೊತ್ತು. ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ಚುತ್ತಾರೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಗೊತ್ತಿದೆ. ಬೆಳಗಾವಿ ಸರ್ಕ್ಯೂಟ್ ಹೌಸ್ನಿಂದ ಗಾಡಿ ಎಲ್ಲಿಗೆ ಹೋಗುತ್ತದೆ ಗೊತ್ತಿದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ, ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಂಎಲ್ಸಿ ಲಖನ್ ಜಾರಕಿಹೊಳಿ, ಲಂಚ ಮಂಚ ಅಂತಾ ಈ ಮಹಾರಾಜ ಹೇಳುತ್ತಾನೆ. ಇವನ ಲಂಚ ಮಂಚ ಇವನು ಲುಂಗಿ ಬಿಚ್ಚೋದು ಎಲ್ಲ ನಮಗೆ ಗೊತ್ತು. ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ತಾರೆ ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಗೊತ್ತಿದೆ. ಬೆಳಗಾವಿ ಸರ್ಕ್ಯೂಟ್ ಹೌಸ್ನಿಂದ ಗಾಡಿ ಎಲ್ಲಿಗೆ ಹೋಗುತ್ತೆ ಗೊತ್ತಿದೆ ಎಂದರು. ಇನ್ನು ಈ ಆರೋಪ ಸಂಬಂಧ ದಾಖಲೆ ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಟೈಮ್ ಬಂದರೆ ಅದನ್ನೂ ಮಾಡುತ್ತೇವೆ ಅನ್ನೋ ಮೂಲಕ ಪರೋಕ್ಷವಾಗಿ ಡಿಕೆಶಿ ಸಿಡಿ ಇದೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐಗೆ ನೀಡುವ ವಿಚಾರವಾಗಿ ಗೋಗಾಕ್ನಲ್ಲಿ ಟಿವಿ9 ಜೊತೆ ಮಾತನಾಡಿದ ಎಂಎಲ್ಸಿ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತರ ಆಗಿದೆ, ಇದರ ಹಿಂದೆ ದೊಡ್ಡ ಜಾಲ ಇದೆ. ಈ ಜಾಲದ ಫ್ಯಾಕ್ಟರಿ ಇರೋದೆ ಬೆಳಗಾವಿಯಲ್ಲಿ, ಇಲ್ಲಿಂದ ಡಿಸ್ಪ್ಯಾಚ್ ಆಗೋದು ಅಲ್ಲಿ. ರಾಜ್ಯಾದ್ಯಂತ ವಿಸ್ತಾರವಾಗಿ ಮಹಾರಾಷ್ಟ್ರ, ಕೇರಳ, ದಿಲ್ಲಿಯಲ್ಲಿದೆ. ಅದಕ್ಕಾಗಿ ಸಿಬಿಐಗೆ ಕೊಡಬೇಕೆಂದು ನಾನು ಮುಖ್ಯಮಂತ್ರಿಗೆ ಆಗ್ರಹ ಮಾಡುತ್ತೇನೆ. ಇದನ್ನ ಸಿಬಿಐಗೆ ಕೊಟ್ಟರೆ ಎಲ್ಲವೂ ಹೊರಗೆ ಬರುತ್ತೆ. ಸಿಡಿ ಪ್ರಕರಣದಲ್ಲಿ ನೂರಾರು ಜನ ಅಲ್ಲಾ ಸಾವಿರಾರು ಜನರು ಸಿಕ್ಕಿದ್ದಾರೆ. 2000 ಇಸವಿಯಿಂದ ಆರಂಭವಾಗಿದೆ, ಬ್ಲ್ಯಾಕ್ ಮೇಲ್ ಮಾಡೋದು ಮಾಡ್ತಾರೆ. ರಮೇಶ್ ಜಾರಕಿಹೊಳಿ ಸಿಡಿ ಹುಡುಗಿಯರನ್ನೇ ಬಿಟ್ಟು ಮಾಡಿದರು. ಅದೇ ಫ್ಯಾಕ್ಟರಿ ಅವರದ್ದು ಈಗ ಟಿವಿಗಳ ಮುಂದೆ ಜಿಗಿ ಜಿಗಿದು ಮಾತಾಡುತ್ತಾರೆ ಎಂದರು.
ವಿಜಯಪುರ: ಕಾಂಗ್ರೆಸ್ ಬಿಟ್ಟವರು ವಾಪಸ್ ಬಂದರೆ ರಾಯರೆಡ್ಡಿ ಅವರ ವಿರೋಧ ಎದುರಿಸಬೇಕಾದ ಅನಿವಾರ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೇಕು ಬೇಡ ಎನ್ನುವ ಅಭಿಪ್ರಾಯ ಹೇಳಬಹುದು. ಆದರೆ ಅಂತಿಮವಾಗಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆವರು ಪಕ್ಷಕ್ಕೆ ಅನಿವಾರ್ಯವಾ ಹೇಗೆ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ವಯಕ್ತಿಕವಾಗಿ ಬೇಕು, ಬೇಡ ಅನ್ನೋದನ್ನ ಹೇಳಬಹುದಷ್ಟೆ. ವಲಸೆ ಹೋದವರ ಅವಶ್ಯಕತೆ ಪಕ್ಷಕ್ಕಿದ್ದರೆ ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ ಎಂದರು. ಉಮೇಶ ಕತ್ತಿ ಕುಟುಂಬ ಕಾಂಗ್ರೆಸ್ ಬರುತ್ತದೆ ಎನ್ನುವ ವದಂತಿ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಸಿದ್ಧಾಂತಗಳನ್ನ ಒಪ್ಪಿ ಪಕ್ಷಕ್ಕೆ ಬಂದರೆ ಸ್ವಾಗತ ಎಂದರು. ಯಮಕನಮರಡಿ ಕ್ಷೇತ್ರ ಬದಲಾವಣೆ ಇಲ್ಲ ಮಾಡುವುದಿಲ್ಲ, ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸತೀಶ್ ಹೇಳಿದ್ದಾರೆ.
ಮಂಡ್ಯ: ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಬೆಂಬಲಿಗರ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರಲೇ ಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಬಹುತೇಕ ಬೆಂಬಲಿಗರಿಂದ ರಾಜ್ಯ ರಾಜಕೀಯಕ್ಕೆ ಬರಲೇ ಬೇಕೆಂಬ ಒತ್ತಾಯ ಕೇಳಿಬಂದಿದೆ. ಏಳು ವಿಧಾನಸಭಾ ಕ್ಷೇತ್ರದಿಂದ ಸಭೆಗೆ ಆಗಮಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕುರಿತು ತಮ್ಮದೆ ಅಭಿಪ್ರಾಯ ವ್ಯಕ್ತಪಡಿಸಿದರು. ಅರ್ಧದಷ್ಟು ಬೆಂಬಲಿಗರು ಕೈ ಪರ ಒಲವು ತೋರಿದರೆ ಇನ್ನುಳಿದ ಬೆಂಬಲಿಗರು ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಮದ್ದೂರು ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಸುಮಲತಾ ವಿರುದ್ದ ಶಾಸಕ ಪುಟ್ಟರಾಜು ಹೇಳಿಕೆ ವಿಚಾರವಾಗಿ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ದ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಕೊಪ್ಪಳ: ಎಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ. ಯಾರನ್ನೋ ಸೋಲಿಸಲು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಕ್ಷ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಆನೆಗುಂದಿಯಲ್ಲಿ ಮಾತನಾಡಿದ ಅವರು, ಸಹೋದರ ಇರಲಿ ಯಾರೆ ಇರಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕುತ್ತೇನೆ. ರಾಜಕೀಯದಲ್ಲಿ ನಾನೆಂದು ಸಂಬಂಧಗಳನ್ನ ದುರುಪಯೋಗ ಮಾಡಿಕೊಂಡಿಲ್ಲ. ನಂಗೆ ವ್ಯಕ್ತಿ ಮುಖ್ಯ ಅಲ್ಲ. ನಮ್ಮ ನಿರ್ಧಾರ ಅಚಲ, ನಾನು ಈಗಾಗಲೇ ಹೇಳಿದ್ದಿನಿ. ನಾನು ಯಾವ ಪಕ್ಷದ ನಾಯಕರ ಬಗ್ಗೆಯೂ ಮಾತನಾಡುವದಿಲ್ಲ. 12 ವರ್ಷ ವನವಾಸ, ಹಿಂಸೆ ಅನುಭವಿಸಿ ಉದಯವಾಗಿರೋ ಪಕ್ಷ ಇದು. ಯಾಕೆ ಬೇರೆಯವರ ಬಗ್ಗೆ ಮಾತನಾಡಬೇಕು. ಇನ್ನೊಂದು ವಾರದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆ ರೆಡಿಯಾಗುತ್ತದೆ. ಎಲ್ಲೆಲ್ಲಿ ಕ್ಯಾಂಡಿಡೇಟ್ ಹಾಕಬೇಕು ಎನ್ನೋದನ್ನ ಸದ್ಯದಲ್ಲಿಯೇ ತೀರ್ಮಾನ ಮಾಡುತ್ತೇವೆ ಎಂದರು.
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಇಲ್ಲಿನ ಕಾಂಗ್ರೆಸ್ ನಾಯಕರು ಆಹ್ವಾನ ಮಾಡಿದ್ದಾರೆ. ಸಚಿವ ಮಾಧುಸ್ವಾಮಿ ವಿರುದ್ಧವೇ ಕಣಕ್ಕಿಳಿಯುವಂತೆ ಆಹ್ವಾನ ನೀಡಿದ್ದು, ಸಿದ್ದರಾಮಯ್ಯ ಅವರು ಸ್ಪರ್ಧೆಗೆ ಒಪ್ಪಿದರೆ ನಾವೆಲ್ಲ ಒಂದಾಗಿ ಗೆಲ್ಲಿಸುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ನಿನ್ನೆ ಸಚಿವರು ಮಾತನಾಡುತ್ತಾ, ನಾನು ಸಿದ್ದರಾಮಯ್ಯ ಅವರಂತಹ ನಾಯಕರ ಜೊತೆ ಪೈಪೋಟಿ ಮಾಡಬೇಕು. ಹಾಲು ಕುಡಿಯುವ ಮಕ್ಕಳ ಜೊತೆ ಚುನಾವಣೆ ಎದುರಿಸುವ ದುಸ್ಥಿತಿ ನಮಗೆ ಬಂದಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಲಘುವಾಗಿ ಟೀಕೆ ಮಾಡಿದ್ದರು. ಇದರ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುವಂತೆ ಕೈ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ಸ್ಪರ್ಧಿಸಲ್ಲ ಎಂದರೆ ತಾಲೂಕಿನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಕೊಪ್ಪಳ: ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಹೆದರಿಸುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ, ಯಾರಿಗೂ ಬಗ್ಗಲ್ಲ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಕ್ಷ ಸಂಸ್ಥಾಪಕ ಜನಾರ್ದನರೆಡ್ಡಿ ಹೇಳಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮಾತನಾಡಿದ ಅವರು, ಗಂಡುಮೆಟ್ಟಿದ ನಾಡಿನಲ್ಲಿ ಹುಟ್ಟಿದವನು ನಾನು. ಯಾರು ಏನು ಬೇಕಾದರೂ ಹೇಳಲಿ, ನೀವು ತಲೆಕೆಡಿಸಿಕೊಳ್ಳಬೇಡಿ. ನಾನು ನನ್ನ ಗುರಿಯನ್ನೇ ಮುಟ್ಟೇ ಮುಟ್ಟುತ್ತೇನೆ. ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ಯೋಜನೆ ಸಿದ್ಧಪಡಿಸಿದ್ದೇನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೇನೆ. ರಾಜ್ಯದ 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಕೊಪ್ಪಳ: ಬಳ್ಳಾರಿ ಕ್ಷೇತ್ರದಿಂದ ನನ್ನ (ಜನಾರ್ದನ ರೆಡ್ಡಿ) ಪತ್ನಿ ಅರುಣಾಲಕ್ಷ್ಮೀ ಅಭ್ಯರ್ಥಿ ಅಂತ ಘೋಷಣೆ ಮಾಡುತ್ತಿದ್ದೆನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಪತ್ನಿಯನ್ನು ಕಣಕ್ಕೆ ಇಳಿಸಿದ್ದಾರೆ. ತನ್ನ ಸ್ವಂತ ಪಾರ್ಟಿ ಮೂಲಕ ಸಹೋದರಿನಿಗೆ ಸವಾಲ್ ಹಾಕಿದ್ದಾರೆ. ಜನಾರ್ಧನ ರೆಡ್ಡಿ ಇಂದು (ಜ.31) ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣರಥಯಾತ್ರೆಗೆ ಚಾಲನೆ ನೀಡಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಪರವಾಗಿ ನಾವು ಸ್ಪಷ್ಟತೆ ಕೊಡುತ್ತಿದ್ದೇವೆ, ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉಳಿದ ನಾಯಕರ ಶಾಮೀಲಾಗಿ ರಮೇಶ್ ಜಾರಕಿಹೊಳಿ ಅವರು ಆರೋಪ ಮಾಡಿದ್ದಾರೆ. ಎಸ್.ಐಟಿಗೆ ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಸೆಕ್ಸ್ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿಗೆ ಇನ್ನೂ ಕ್ಲಿನ್ ಚಿಟ್ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿಯ ಪ್ರಕರಣ ಇನ್ನೂ ಬಾಕಿ ಇದೆ ಎಂದು ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹಾಗೂ ಪ್ರಧಾನ ಕಾರ್ಯದರ್ಶಿ ಜಿಸಿ ರಾಜು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಮೇಶ್ ಇದುವರೆಗೆ ಒಂದೇ ಒಂದು ಠಾಣೆಯಲ್ಲೂ ದೂರು ದಾಖಲಿಸಿಲ್ಲ. ಸಿಬಿಐಗೆ ಖಾಸಗಿ ಪ್ರಕರಣ ನೀಡಿರುವುದು ಅಪರೂಪ. ಆದರೆ ಸಿಬಿಐ ಅನ್ನು ತಮ್ಮ ಪಕ್ಷದ ಸಲುವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಸಿಬಿಐಗೆ ಕೊಡುವ ಷಡ್ಯಂತ್ರ ಬಿಜೆಪಿಯವರು ಮಾಡಿರಬಹುದು. ಜನಾರ್ಧನ ರೆಡ್ಡಿ ಕೂಡ ಹಿಂದೆ ಸಿಡಿ ಬಿಡತ್ತಿನಿ ಅಂತ ಪ್ರಚಾರ ಮಾಡಿದರು ಎಂದು ವಾಗ್ದಾಳಿ ಮಾಡಿದ್ದಾರೆ.
ಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ಬದುಕನ್ನು ಶುದ್ದವಾಗಿ ಇಟ್ಟುಕೊಳ್ಳಬೇಕಿತ್ತು. ಬಿಜೆಪಿಯ ರೂಪವನ್ನು ಜನರಿಗೆ ತಿಳಿಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವರು ಆಡಿದ ಪದ ಅವರ ಪಕ್ಷದ ನೀತಿಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ವೈಯಕ್ತಿಕ ಹಗೆತನದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ವಿಕ್ಟಿಮ್ ಸಾಮಾನ್ಯವಾಗಿ ದೂರನ್ನು ಕೊಡುತ್ತಾರೆ. ಈ ಸೆಕ್ಸ್ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ತಮ್ಮ ಪ್ರಭಾವ ಬಳಸಿ ಎಸ್ ಐಟಿ ರಚನೆ ಮಾಡಿಸುತ್ತಾರೆ. ಸುಳ್ಳನ್ನು ತಲೆ ಮೇಲೆ ಹೊಡೆದಂತೆ ಹೇಳುವ ಪ್ರವೃತ್ತಿ ಬಿಜೆಪಿಯವರದ್ದು ಎಂದು ಕಿಡಿಕಾರಿದರು.
1988 ರಲ್ಲಿ ಬೆಂಗಳೂರಿನ 98 ಹೌಸಿಂಗ್ ಸೊಸೈಟಿಗಳ ತನಿಖೆಗೆ ಸಂಬಂಧಿಸಿ ಆದೇಶ ಮಾಡಲಾಗಿತ್ತು. ಶಾಂತಿನಗರ ಹೌಸಿಂಗ್ ಸೊಸೈಟಿಯ ಬಗ್ಗೆಯೂ ತನಿಖಾಧಿಕಾರಿ ವರದಿ ನೀಡಿದ್ದಾರೆ. ಅವತ್ತು ಡಿಕೆಶಿವಕುಮಾರ್ ಇನ್ನೂ ಶಾಸಕರೇ ಆಗಿರಲಿಲ್ಲ. ಸಹಕಾರ ಸಚಿವರಾಗಿ ಜಾರಕಿಹೊಳಿ ಭಾಗಿಯಾಗಿಲ್ಲ ಅಂದ್ರೆ ಅವತ್ತೇ ಯಾಕೆ ಪ್ರಕರಣ ಹೊರಗೆ ತರದೆ ಮುಚ್ಚಿಟ್ರಿ? ಎಂದು ಪ್ರಶ್ನಿಸಿದರು.
ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೆ. ರಾಜ್ಯಾದ್ಯಂತ ಬಿಜೆಪಿಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಹೀಗಾಗಿ ನೂರಕ್ಕೆ ನೂರರಷ್ಪು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೋದಿಯಂತಹ ನಾಯಕ ಸಿಕ್ಕಿರುವುದು ನಮ್ಮ ಪುಣ್ಯ. ಮೋದಿ ನೇತೃತ್ವದಲ್ಲಿ ರಾಜ್ಯ ದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಜನರು ಮಾಡಬೇಕೆಂದು ಮನವಿ ಮಾಡಿದರು.
ರಮೇಶ ಜಾರಕಿಹೊಳಿ ಸಿಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅದು ಅವರಿಗೆ ಸಂಬಂಧ ಪಟ್ಟಿರುವ ವಿಚಾರ. ನನಗೆ ಸಿಡಿ ವಿಚಾರ ಕುರಿತು ಪೂರ್ಣ ಮಾಹಿತಿ ಇಲ್ಲ ಎಂದರು.
ಬಳ್ಳಾರಿ: ಕಾಂಗ್ರೆಸ್ ಬೆಂಬಲ ನೀಡದಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಸೋತರು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಜಿಲ್ಲೆಯ ಸಂಡೂರು ತಾಲೂಕಿನ ಕುರೆಕೊಪ್ಪದಲ್ಲಿ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರು ಸಿದ್ದರಾಮಯ್ಯರನ್ನು ಉಪ ಮುಖ್ಯಮಂತ್ರಿ ಮಾಡಿದ್ದರು. ಮುಖ್ಯಮಂತ್ರಿ ಆಗೋಕೆ ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋಗಿದ್ದಾರೆ ಎಂದು ಹೇಳಿದರು.
30 ವರ್ಷದಿಂದ ನಮಗೆ ಕುಟುಂಬ ರಾಜಕಾರಣದ ಲೇಬಲ್ ಕೊಟ್ಟಿದ್ದಾರೆ. ವರುಣಾದಲ್ಲಿ ಪುತ್ರನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಹೊರಗೆ ಹೋಗುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲು ಬರುವುದಿಲ್ಲ. ಹೀಗಾಗಿ ಪುತ್ರನನ್ನು ತರುತ್ತಿದ್ದಾರೆ. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪಗೂ ಅವರ ಮಕ್ಕಳ ಬಗ್ಗೆಯೇ ಚಿಂತೆ ಎಂದು ಹೇಳಿದರು.
ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. 2028ರಲ್ಲಿ 2 ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದ ಜನ ತಿರಸ್ಕಾರ ಮಾಡುತ್ತಾರೆ. 2018ರಲ್ಲಿ ಕಾಂಗ್ರೆಸ್ ಷರತ್ತು ಹಾಕಿ ಅಧಿಕಾರ ನೀಡಿತ್ತು. ಸ್ವತಂತ್ರವಾಗಿ ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ನನಗೆ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದರೆ ಬಡತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಎರಡೂ ಪಕ್ಷದ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿ ಅನುಭವ ಇದೆ. ಈಗಿರೋದು 2006ರ ಬಿಜೆಪಿ ಅಲ್ಲ, ರಾಷ್ಟ್ರ ನಾಯಕರ ಶಕ್ತಿ ಇರುವ ಬಿಜೆಪಿ. 2018ರಲ್ಲಿ ಕಾಂಗ್ರೆಸ್ ಜತೆ ಹೋಗಿದ್ದಕ್ಕೆ ಗುಲಾಮನಾಗಿರುವ ಹಾಗೆ ಆಯ್ತು. ಸಿದ್ದರಾಮಯ್ಯ ಅಧಿಕಾರ ಹೋದರೂ ನನಗೆ ಮನೆ ಬಿಟ್ಟು ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್ನವರು ಕುತ್ತಿಗೆ ಕೊಯ್ದರು ಎಂದು ವಾಗ್ದಾಳಿ ಮಾಡಿದ್ದಾರೆ.
ಮೈಸೂರು: 1988ರಲ್ಲಿ ರಮೇಶ್ ಜಾರಿಕಿಹೊಳಿ ಹಾಗೂ ಸಂಗಡಿಗರು ಅಬಕಾರಿ ಇನ್ಸಪೆಕ್ಟರ್ ಇಂಗಳೆಗೆಯವರನ್ನು ಎಕೆ 47ನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. 1985ರಲ್ಲಿ ಡಿಕೆ ಶಿವಕುಮಾರ್ ಹರಿದ ಚಪ್ಪಲಿ ಹಾಕಿದ್ದರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು 1994ರಲ್ಲಿ ಗೋಕಾಕ್ ಸರ್ಕಾರಿ ಮಿಲ್‌ನಲ್ಲಿ ಹತ್ಯಾಕಾಂಡ ನಡೆದಿತ್ತು. ಶಾಸಕ ರಮೇಶ್ ಜಾರಕಿಹೊಳಿ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ, ಮಾರಾಟಕ್ಕೆ ಜಾರಕಿಹೊಳಿ ಕುಟುಂಬದ ಅನುಮತಿ ಪಡೆಯಬೇಕಿತ್ತು. ಅನುಮತಿ ಪಡೆಯದಿದ್ದರೇ ಅಟ್ರಾಸಿಟಿ ರೇಪ್ ಪ್ರಕರಣ ದಾಖಲಿಸುತ್ತಾರೆ. ಹೀಗೆ ಸುಮಾರು 300 ಸಾಮಾನ್ಯ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಳ್ಳ ಭಟ್ಟಿ ಸರಾಯಿ ಮಾರುತ್ತಿದ್ದರು. 1985ರಲ್ಲಿ ಜಾರಕಿಹೊಳಿ ಎರಡು ಕಾಲಿಗೆ ಬೇರೆ ಬೇರೆ ಚಪ್ಪಲಿ ಹಾಕಿಕೊಂಡಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಬಯಸುವುದಿಲ್ಲ. ಅದಕ್ಕೆ ಉತ್ತರ ಕೊಡಬೇಕಾಗಿದ್ದು ಅಧ್ಯಕ್ಷರು ಅವರೇ ಉತ್ತರ ಕೊಡುತ್ತಾರೆ. ಅದನ್ನು ಬಿಟ್ಟು ಬೇರೇ ಏನಾದರೂ ಕೇಳಿ. ಹೊಡೆಯೋದು ಬಿಡೋದು ಜನರು ಹೊರತು ಬೇರೆ ಯಾರೂ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಾವು 12 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ. ಮುಂಬೈ ಕರ್ನಾಟಕದಲ್ಲಿ ನಾವು ಮೇಜರ್ ಸೀಟು ಗೆಲ್ಲುತ್ತೇವೆ. ಕಾಂಗ್ರೆಸ್ಗೆ 130-140 ಸೀಟು ಬಂದೇ ಬರುತ್ತದೆ. 130-140 ಸೀಟಿಗಿಂತ ಕಾಂಗ್ರೆಸ್ ಕಡಿಮೆ ಬರುವುದಿಲ್ಲ. ಬಿಜೆಪಿಯವರು 65 ರಿಂದ 70 ಸೀಟು ದಾಟುವುದಿಲ್ಲ ಎಂದು ಹೇಳಿದರು.
ಪಂಚಮಸಾಲಿ ಸಮುದಾಯ ಮಾತ್ರವಲ್ಲ ಎಲ್ಲ ಸಮುದಾಯಗಳಿಗೂ ಮಾನ್ಯತೆ ನೀಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಕ್ಕೂ ನ್ಯಾಯ ಕೊಡಿಸುವ ಕೆಲಸ ಆಗುತ್ತದೆ. ಸ್ಕ್ರೀನಿಂಗ್ ಕಮಿಟಿ ಹಾಗೂ ಚುನಾವಣಾ ಸಮಿತಿ ಚರ್ಚೆ ಬಳಿಕ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಅವರೂ ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ.
ಶಿವಮೊಗ್ಗ: ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ದಲಿ ಸೋತರು. ಬಾದಾಮಿಗೆ ಹೋದರು, ಬಾಡರ್ನಲ್ಲಿ ಗೆದ್ದರು. ಇನ್ನೂ ಅಲ್ಲಿ ಗೆಲ್ಲುವುದಿಲ್ಲ ಎನ್ನುವುದು ಗೊತ್ತಾಯಿತು. ಕೋಲಾರದಲ್ಲಿ ಮನೆ ಹುಡುಕುತ್ತಿದ್ದಾರೆ. ಹುಡುಕಲಿ ನನ್ನದು ಅಭ್ಯಂತರ ಇಲ್ಲ. ಇದರಿಂದ ಅವರು ಹತಾಶೆ ಆಗಿರುವುದು ಕಂಡು ಬರುತ್ತಿದೆ. ಅಲೆಮಾರಿಯಂತೆ ಕ್ಷೇತ್ರಕ್ಕಾಗಿ ಓಡಾಟ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಾದಾಮಿ ದೂರ ಆಗುವುದಿದ್ದರೆ ಮತ್ತೆ ಚಾಮುಂಡೇಶ್ವರಿಗೆ ವಾಪಸ್ ಹೋಗಿ. ಅದು ನಿಮ್ಮದೆ ಕ್ಷೇತ್ರ. ಅನೇಕ ಬಾರಿ ಅಲ್ಲಿಂದ ಗೆದಿದ್ದೀರಿ. ಅಲ್ಲಿ ಯಾಕೆ ಹೋಗುತ್ತಿಲ್ಲ? ಯಾಕೆ ಕೋಲಾರ ಹುಡುಕಿಕೊಂಡು ಹೊರಟಿದ್ದೀರಿ ? ಆ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು. ಈ ವ್ಯಕ್ತಿ ನಂಬಿಕಸ್ತನಲ್ಲ ಎಂದು. ಈ ಹಿನ್ನಲೆಯಲ್ಲಿ ಸೋಲುವ ಭಯದಿಂದ ಸಿದ್ದು ಕ್ಷೇತ್ರದ ಹುಡುಕಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೇವಲ ಸಿದ್ದರಾಮಯ್ಯಗೆ ಮಾತ್ರವಲ್ಲ ಇನ್ನು ಅನೇಕ ಕಾಂಗ್ರೆಸ್ ನಾಯಕರಿಗೆ ಈ ಸಮಸ್ಯೆ ಇದೆ. ಒಂದು ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡು ಆ ಜನರ ಸಮಸ್ಯೆಗೆ ಸ್ಪಂದಿಸುವುದು ಅವರ ಕರ್ತವ್ಯವಾಗಿದೆ. ನಾನು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋತಿದ್ದೆ. ನಾನು ಕೂಡು ಬೇರೆ ಕ್ಷೇತ್ರ ಹುಡುಕಿಕೊಂಡು ಹೋಗಲು ಬರುತ್ತಿತ್ತು . ಆದರೆ ನಾನು ಹಾಗೆ ಮಾಡದೇ ಇಲ್ಲಿಯ ಜನರನ್ನು ಸಂತೃಪ್ತಿ ಪಡಿಸಿ, ಮತ್ತೆ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದಿರುವೆ. ಇದು ಬಿಜೆಪಿ ಪಕ್ಷದ ವಿಶೇಷ ಆಗಿದೆ ಎಂದರು.
ಸಂಸದೆ ಸುಮಲತಾ ಅಂಬರೀಶ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಬರುವ ದಿನಗಳಲ್ಲಿ ದೇಶದಲ್ಲಿ ಬಿಜೆಪಿ ಪಕ್ಷ ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇದು ಸತ್ಯ. ಈ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ರಾಜ್ಯದಲ್ಲಿ ಬರುತ್ತೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರ ಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಯಾರ ಯಾರನ್ನೂ ಮುಗಿಸೋಕೆ ಆಗಲ್ಲ. ಅದನ್ನು ಜಾರಕಿಹೊಳಿ ಹೇಳಬಾರದು. ಜನ ಮುಖ್ಯ, ಜನ ಏನಾದರೂ ಮಾಡಬಹುದು, ಆದರೆ ನಾವೇನು ಮಾಡೋಕೆ ಆಗಲ್ಲ. ಜಾರಕಿಹೊಳಿ ಕುಟುಂಬಕ್ಕೂ ಈ ರೀತಿ ಮಾಡೋದು ಗೌರವ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಹೇಳಿದ್ದಾರೆ. ನಾವೆಲ್ಲ ಒಟ್ಟಿಗೆ ಇದ್ದವರು,ರಮೇಶ್ ಹಾಗೆ ಮಾತಾಡಬಾರದು. ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದ್ವಿ. ಇವರೆಲ್ಲ ಯಡವಟ್ಟು ಗಿರಾಕಿ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯೋದು ಯೋಜನೆನಾ? ಬರೀ ಈ ಸರ್ಕಾರದಲ್ಲಿ ದುಡ್ಡು ದುಡ್ಡು. ಇದು ಸರ್ಕಾರನಾ?
ಯಡಿಯೂರಪ್ಪ ನಮ್ಮ ಮ್ಯಾಜಿಕ್ 150 ಅಂತಾರೆ, ಸಿದ್ದರಾಮಯ್ಯ ಡಿಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್, ಕುಮಾರಸ್ವಾಮಿ 123 ಅಂತಾರೆ. ಯಾರಪ್ಪ ನೀವು, ನೀವೆ ಡಬ್ಬ ತುಂಬಕೊಂಡ ಬಿಡುತ್ತೀರಾ? ಚುನಾವಣೆನೇ ಪ್ರಜಾಪ್ರಭುತ್ವದ ಆತ್ಮ. ಆದರೆ ಬಿಜೆಪಿ ಅಯೋಗ್ಯ ಸರ್ಕಾರ ಆತ್ಮವನ್ನೆ ಕಸಿಯುತ್ತಿದೆ. ಮತದಾರ ಹೆಸರನ್ನೆ ಡಿಲೀಟ್ ಮಾಡಿ ಅವರ ಆತ್ಮ ಕಸಿಯುತ್ತಿದೆ ಎಂದು ಸ್ವಪಕ್ಷದ ವಿರುದ್ಧ ಆರೋಪ ಮಾಡಿದರು.
ಕೊಪ್ಪಳ: ಮಾಜಿ ಸಚಿವ ಜನಾರ್ಧನ ರೆಡ್ಡಿ ಬಿಜೆಪಿಯಿಂದ ಹೊರಬಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದು, ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ರೆಡ್ಡಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದು ಕಲ್ಯಾಣ ರಥಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ಇಂದು (ಜ.31) ಕಲ್ಯಾಣರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆದಕ್ಕೂ ಮೊದಲು ರೆಡ್ಡಿ ದಂಪತಿಗಳಿಂದ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ನಡೆಯಲಿದೆ.
Published On - 9:46 am, Tue, 31 January 23