ಮತ್ತೊಮ್ಮೆ ಅಪಜಯ ಅನುಭವಿಸಲು ಸನ್ನದ್ದ ಕೂಟ I.N.D.I.A -ವಿಡಂಬನಾತ್ಮಕ ಕಾರ್ಟೂನ್​​ಗಳನ್ನು ಪೋಸ್ಟ್​ ಮಾಡಿದ BJP

|

Updated on: Oct 14, 2023 | 12:54 PM

BJP Cartoon: ಇಂದು ಶನಿವಾರ ಭಾರತ-ಪಾಕ್ ಪಂದ್ಯವಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಜಗಳವದು.. ಜನ ತಮ್ಮೆಲ್ಲ ಕೆಸಲಕಾರ್ಯಗಳನ್ನು ಬದಿಗೊತ್ತಿ ಮ್ಯಾಚ್ ನೋಡುತ್ತಾರೆ. ಈ ಕ್ರಿಕೆಟ್ ಜ್ವರವನ್ನು ಬಂಡವಾಗಿಸಿಕೊಂಡು... I.N.D.I.A. ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕ್ರಿಕೆಟ್ ಶೈಲಿಯಲ್ಲಿ BJP ಕಾರ್ಟೂನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮತ್ತೊಮ್ಮೆ ಅಪಜಯ ಅನುಭವಿಸಲು ಸನ್ನದ್ದ ಕೂಟ I.N.D.I.A -ವಿಡಂಬನಾತ್ಮಕ ಕಾರ್ಟೂನ್​​ಗಳನ್ನು ಪೋಸ್ಟ್​ ಮಾಡಿದ BJP
ಅಪಜಯ ಅನುಭವಿಸಲು ಸನ್ನದ್ದ ಕೂಟ I.N.D.I.A, ವಿಡಂಬನಾತ್ಮಕ ಕಾರ್ಟೂನ್​​ಗಳನ್ನು ಪೋಸ್ಟ್​ ಮಾಡಿದ BJP
Follow us on

ಹೊಸದಿಲ್ಲಿ, ಅಕ್ಟೋಬರ್ 14: ಇಂದು ಭಾರತ ತಂಡ ತನ್ನ ಬದ್ದವೈರಿ ಪಾಕಿಸ್ತಾನದ ವಿರುದ್ಧ ವಿಶ್ವ ಕಪ್​​ನ (ICC World Cup 2023) ಮಹತ್ವದ ಜಿದ್ದಾಜಿದ್ದಿ ಮ್ಯಾಚ್ ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium)​​ ಇನ್ನೇನು ಕೆಲವೇ ಗಂಟೆಗಳಲ್ಲಿ ಆಡಲಿದೆ. ಈ ಮಧ್ಯೆ, ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಇದಕ್ಕೆ ರಾಜಕೀಯ ಬಣ್ಣದ ಒಂದು ಪೋಸ್ಟ್​ ಅನ್ನು ಸಕಾಲಿಕವಾಗಿ ಹಂಚಿಕೊಂಡಿದೆ! ಗಮನಾರ್ಹವೆಂದರೆ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಮಯವೂ ಸಮೀಪಿಸುತ್ತಿದೆ. ದೇಶ ರಾಜಕಾರಣ ಮತ್ತಷ್ಟು ಬಿಸಿಯೇರುತ್ತಿದೆ. ಮೈತ್ರಿಕೂಟದ ಪ್ರಮುಖ ಪಕ್ಷಗಳ ನಡುವೆ ನೇರ ಮಾತಿನ ಸಮರದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬನಾತ್ಮಕ ಕಾರ್ಟೂನ್ (Cartoon) ಸಮರವೊಂದು (NDA vs I.N.D.I.A) ನಡೆದಿದೆ.

ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಸೆಮಿಫೈನಲ್‌ ಎಂದು ಪರಿಗಣಿಸಿರುವ ಪಂಚ ರಾಜ್ಯಗಳ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಬಿಜೆಪಿ (BJP) ನಾಯಕತ್ವ ಎನ್‌ಡಿಎ ಮೈತ್ರಿಕೂಟ (NDA) ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ಗುರಿಯಾಗಿಸಿಕೊಂಡು (INDIA Alliance) ಸಾಮಾಜಿಕ ಜಾಲತಾಣಗಳಲ್ಲಿ ವಾಸ್ತವಿಕ ಪೋಸ್ಟ್​ ಹಂಚಿಕೊಂಡಿದೆ. ಪ್ರಸ್ತುತ ಟೆಕ್ ಯುಗದಲ್ಲಿ, ನೀವು ಯಾವುದೇ ವಿಷಯವನ್ನು ಜನರಿಗೆ ತ್ವರಿತವಾಗಿ ತಲುಪಲು ಬಯಸಿದರೆ, ಅದನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವು ಸರಿಯಾದ ಮಾಧ್ಯಮವಾಗಿದೆ. ಅಷ್ಟೇ ಏಕೆ… ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಸಾಮಾಜಿಕ ಜಾಲತಾಣವನ್ನೇ ತಮ್ಮ ಸಾಧನವನ್ನಾಗಿಸಿಕೊಂಡಿವೆ. ಈ ವಿಚಾರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು.

ಹೌದು, ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗವು INDIA Alliance ಅನ್ನು ಗುರಿಯಾಗಿಸಿಕೊಂಡು ವಿಡಂಬನಾತ್ಮಕ ಕಾರ್ಟೂನ್‌ಗಳನ್ನು ಹಂಚಿಕೊಂಡಿದೆ. ಪ್ರಸ್ತುತ, ಐಸಿಸಿ ಕ್ರಿಕೆಟ್ ವಿಶ್ವಕಪ್ ಜ್ವರ ಪ್ರಪಂಚದಾದ್ಯಂತ ಹರಡಿದೆ. ಎಲ್ಲರೂ ಟಿವಿ ಮತ್ತು ಫೋನ್‌ಗಳಿಗೆ ಅಂಟಿಕೊಂಡಿದ್ದಾರೆ. ಇಂದು ಶನಿವಾರ ಭಾರತ-ಪಾಕ್ ಪಂದ್ಯವಿದೆ. ಅದೇನೆಂದರೆ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಜಗಳವದು.. ಜನ ತಮ್ಮೆಲ್ಲ ಕೆಸಲಕಾರ್ಯಗಳನ್ನು ಬದಿಗೊತ್ತಿ ಮ್ಯಾಚ್ ನೋಡುತ್ತಾರೆ. ಈ ಕ್ರಿಕೆಟ್ ಜ್ವರವನ್ನು ಬಂಡವಾಗಿಸಿಕೊಂಡು… INDIA ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕ್ರಿಕೆಟ್ ಶೈಲಿಯಲ್ಲಿ ಬಿಜೆಪಿ ಕಾರ್ಟೂನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಒಬ್ಬೊಬ್ಬ ನಾಯಕರನ್ನೂ ಒಂದೊಂದು ಶೈಲಿಯಲ್ಲಿ ಚಿತ್ರಿಸಿ, ಬಿಜೆಪಿ ಪಂಚ್ ಗಳನ್ನು ನೀಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಸಿಂಗ್, ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಬಿಜೆಪಿ ಕಮ್ಯುನಿಸ್ಟರನ್ನು ಗುರಿಯಾಗಿಸಿ ವ್ಯಂಗ್ಯವಾಡಿದೆ. I.N.D.I.A ಮತ್ತೊಮ್ಮೆ ಸೋಲಲು ಸಿದ್ಧವಾಗಿದೆ ಎಂದು ಪ್ರತಿ ನಾಯಕರ ಮೇಲೂ ವ್ಯಂಗ್ಯ ಪಂಚ್ ಗಳನ್ನು ಎಸೆದಿದೆ.

ಪ್ರತಿಪಕ್ಷಗಳ ಪ್ರತಿಯೊಬ್ಬ ನಾಯಕರ ಮೇಲೆ ಬಿಜೆಪಿ ಒಂದೊಂದು ವ್ಯಂಗ್ಯ ಹಾಕಿದೆ. ಆ ವ್ಯಂಗ್ಯೋಕ್ತಿಗಳು/ ವ್ಯಂಗ್ಯ ಚಿತ್ರಗಳು ಹೇಗಿವೆ ನೋಡೋಣ ಬನ್ನೀ.

➢ ರಾಹುಲ್ ಗಾಂಧಿ: ಅದೇ ಪಪ್ಪು, ಬ್ಯಾಟ್ ಅನ್ನು ಗಿಟಾರ್ ಎಂದು ಪರಿಗಣಿಸಿ, ಮತ್ತೆ ಜಗಳವಾಡಲು ಬಂದಿದ್ದಾರೆ.

➢ ಮಮತಾ ಬ್ಯಾನರ್ಜಿ: ಭ್ರಷ್ಟಾಚಾರ, ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಮಾಡುತ್ತಾ ಆಟವಾಡುವುದು.

➢ ಲಾಲು ಪ್ರಸಾದ್ ಯಾದವ್: ಗದ್ದೆಯಲ್ಲಿರುವ ಹುಲ್ಲು ಕೂಡ ಜೀರ್ಣಿಸಿಕೊಳ್ಳುವ ಶಕ್ತಿವಂತ.

➢ ಅರವಿಂದ್ ಕೇಜ್ರಿವಾಲ್: ಚೆಂಡನ್ನು ಹಿಡಿಯುವ ಬದಲು, ಗ್ಯಾಲರಿ ಕಡೆ/ ಬೌಂಡರಿ ಕಡೆ ಬಿಸಾಡುವವರು.

➢ ಭಗವಂತ್ ಮಾನ್ ಸಿಂಗ್: ಭಗವಂತನಾಣೆಗೂ ರಾಜಕೀಯ ಪಿಚ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಬೋರಲು ಬಿದ್ದು, ಅಳು ತೋಡಿಕೊಳ್ಳುವವರು.

➢ ಉದ್ಧವ್ ಠಾಕ್ರೆ: ತನ್ನ ಗೂಗ್ಲಿಗೆ ತಾನೇ ಬಲಿಯಾಗಿ ಅಪಹಾಸ್ಯಕ್ಕೆ ತುತ್ತಾದವರು.

➢ ಹೇಮಂತ್ ಸೊರೆನ್: ಸಾವಿರಾರು ಸ್ಕ್ಯಾಮ್​​ಗಳೊಂದಿಗೆ ಮತ್ತಷ್ಟು ಹೊಸ ದಾಖಲೆಗಳನ್ನು ಸೃಷ್ಟಿಸುವವರು.

➢ ಕಮ್ಯುನಿಸ್ಟ್ vs ತೃಣಮೂಲ: ಅವರಿಗವರೇ ಕತ್ತಿ ಇರಿದು ಕೊಳ್ಳುವವರು… ಇನ್ನು ಒಗ್ಗಟ್ಟು ಎಲ್ಲಿಯದು

➢ ಅಖಿಲೇಶ್ ಯಾದವ್: ಅಪರಾಧಿಗಳ ನಾಯಕ, ಫೀಲ್ಡಿಂಗ್ ಮಾಡುತ್ತಾ, ತನ್ನದೇ ತಂಡವನ್ನು ಸೋಲಿಸುವ ಮುಂದಾಳು

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Sat, 14 October 23