ಮಧ್ಯಪ್ರದೇಶ, ರಾಜಸ್ಥಾನಕ್ಕೆ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ

|

Updated on: Dec 11, 2023 | 9:24 AM

ಬಿಜೆಪಿ ಗೆಲುವು ಸಾಧಿಸಿರುವ ಮೂರು ರಾಜ್ಯಗಳ ಪೈಕಿ ಈಗಾಗಲೇ ಛತ್ತೀಸ್​ಗಢಕ್ಕೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹಾಗೆಯೇ ಇಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶಕ್ಕೂ ಮುಖ್ಯಮಂತ್ರಿಗಳ ಹೆಸರನ್ನು ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಬೆಳಗ್ಗೆ 11 ಗಂಟೆಗೆ ವೀಕ್ಷಕರು ಮಧ್ಯಪ್ರದೇಶಕ್ಕೆ ತಲುಪಲಿದ್ದಾರೆ. ಇಲ್ಲಿಯವರೆಗೆ ರಾಜಸ್ಥಾನದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಬಿಜೆಪಿ ನಾಯಕರಲ್ಲಿ ಮಾತ್ರ ಇತ್ತು, ಆದರೆ ಈಗ ಕಾಂಗ್ರೆಸ್ ನಾಯಕರೂ ಈ ರೇಸ್‌ಗೆ ಜಿಗಿಯುತ್ತಿರುವುದು ಕಂಡುಬಂದಿದೆ. ಕಿಶೋರಿ ಮೀನಾ ಅವರನ್ನು ಸಿಎಂ ಮಾಡುವಂತೆ ಕಾಂಗ್ರೆಸ್ ಶಾಸಕ ರಾಮಕೇಶ್ ಮೀನಾ ಬಿಜೆಪಿಗೆ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನಕ್ಕೆ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ
Image Credit source: Hindustan Times
Follow us on

ಬಿಜೆಪಿ(BJP) ಗೆಲುವು ಸಾಧಿಸಿರುವ ಮೂರು ರಾಜ್ಯಗಳ ಪೈಕಿ ಈಗಾಗಲೇ ಛತ್ತೀಸ್​ಗಢ(Chhattisgarh)ಕ್ಕೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹಾಗೆಯೇ ಇಂದು ರಾಜಸ್ಥಾನ(Rajasthan) ಹಾಗೂ ಮಧ್ಯಪ್ರದೇಶ(Madhya Pradesh)ಕ್ಕೂ ಮುಖ್ಯಮಂತ್ರಿಗಳ ಹೆಸರನ್ನು ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಬೆಳಗ್ಗೆ 11 ಗಂಟೆಗೆ ವೀಕ್ಷಕರು ಮಧ್ಯಪ್ರದೇಶಕ್ಕೆ ತಲುಪಲಿದ್ದಾರೆ. ಇಲ್ಲಿಯವರೆಗೆ ರಾಜಸ್ಥಾನದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಬಿಜೆಪಿ ನಾಯಕರಲ್ಲಿ ಮಾತ್ರ ಇತ್ತು, ಆದರೆ ಈಗ ಕಾಂಗ್ರೆಸ್ ನಾಯಕರೂ ಕೂಡ ಕೆಲವರ ಹೆಸರುಗಳನ್ನು ಸೂಚಿಸುತ್ತಿದ್ದಾರೆ, ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಮಧ್ಯಪ್ರದೇಶದ ನೂತನ ಸಿಎಂ ಆಯ್ಕೆ ಕುರಿತು ಬಿಜೆಪಿ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು, ಇದಾದ ಬಳಿಕ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇಂದು ಮಧ್ಯಾಹ್ನ 3.30ರ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದೆ. ಪಕ್ಷ ನೇಮಿಸಿರುವ ವೀಕ್ಷಕರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ (ಡಿಸೆಂಬರ್ 10) ಛತ್ತೀಸ್‌ಗಢದ ಸಿಎಂ ಆಗಿ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಘೋಷಿಸಿದೆ, ಆದರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಸಂಬಂಧಿಸಿದಂತೆ ಇನ್ನೂ ಸಸ್ಪೆನ್ಸ್ ಮುಂದುವರೆದಿದೆ. ಆದರೆ, ಉಭಯ ರಾಜ್ಯಗಳ ಮುಖ್ಯಸ್ಥರ ಆಯ್ಕೆಯ ಚರ್ಚೆ ಅಂತಿಮ ಹಂತಕ್ಕೆ ಬಂದಿದ್ದು, ಇಂದು (ಡಿಸೆಂಬರ್ 11) ಸಿಎಂ ಹೆಸರನ್ನು ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ ಎರಡೂ ರಾಜ್ಯಗಳಿಗೆ ನೇಮಕಗೊಂಡಿರುವ ಕೇಂದ್ರ ವೀಕ್ಷಕರು ಇಂದು ಎರಡೂ ರಾಜ್ಯಗಳಿಗೆ ತಲುಪಲಿದ್ದಾರೆ.

ಮಧ್ಯಪ್ರದೇಶದ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಹೊಸದಾಗಿ ಆಯ್ಕೆಯಾದ ಶಾಸಕರು ಇಂದು (ಡಿಸೆಂಬರ್ 11) ಸಭೆ ನಡೆಸಲಿದ್ದಾರೆ. ಸಂಜೆ ವೇಳೆಗೆ ಸಭೆ ನಡೆಯಬಹುದು ಎಂದು ರಾಜ್ಯ ನಾಯಕರು ಹೇಳುತ್ತಿದ್ದು, ಸಭೆಗೂ ಮುನ್ನ ಬಿಜೆಪಿ ತನ್ನ ಶಾಸಕರನ್ನು ಊಟಕ್ಕೆ ಆಹ್ವಾನಿಸಲಿದೆ.

ಮತ್ತಷ್ಟು ಓದಿ: ಯಾರಾಗುತ್ತಾರೆ ಮಧ್ಯ ಪ್ರದೇಶದ ಮುಖ್ಯಮಂತ್ರಿ? ಸಂಭಾವ್ಯ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಸಂಜೆ ನಡೆಯಲಿರುವ ಸಭೆಯಲ್ಲಿ ವೀಕ್ಷಕರಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಭಾಗವಹಿಸಲಿದ್ದಾರೆ. ಇಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರುಗಳು ಚರ್ಚೆಯಾಗುತ್ತಿವೆ.

ಇನ್ನು ರಾಜಸ್ಥಾನದಲ್ಲಿ ಬಿಜೆಪಿ ನೇಮಿಸಿದ ವೀಕ್ಷಕರು (ರಾಜನಾಥ್ ಸಿಂಗ್, ವಿನೋದ್ ತಾವ್ಡೆ ಮತ್ತು ಸರೋಜ್ ಪಾಂಡೆ) ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ, ಆದರೆ ಇಲ್ಲಿಯವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಹೆಸರನ್ನು ಘೋಷಿಸಲಾಗಿಲ್ಲ. ಆದರೆ, ಪಕ್ಷದ ಕೇಂದ್ರ ನಾಯಕತ್ವವು ಈ ಬಾರಿ ಈ ಸ್ಥಾನಕ್ಕೆ ಹೊಸ ಮುಖವನ್ನು ಆಯ್ಕೆ ಮಾಡಬಹುದು ಎಂದು ನಂಬಲಾಗಿದೆ. ಇಲ್ಲಿ ಬಿಜೆಪಿ ಮುಖ್ಯಮಂತ್ರಿ ಆಯ್ಕೆಗಾಗಿ ಶಾಸಕಾಂಗ ಪಕ್ಷದ ಸಭೆಯನ್ನು ಇನ್ನೂ ಘೋಷಿಸಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:24 am, Mon, 11 December 23