ಮಧ್ಯಪ್ರದೇಶ(Madhya Pradesh) ದ ನೂತನ ಸಚಿವರೊಬ್ಬರು ಕಾರು ಇಲ್ಲದೇ 350 ಕಿ.ಮೀ ಬೈಕ್ನಲ್ಲೇ ಕ್ರಮಿಸಿ ವಿಧಾನಸಭೆ ತಲುಪಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ರಾಜಧಾನಿ ಭೋಪಾಲ್‌ನಲ್ಲಿ ನೂತನವಾಗಿ ಚುನಾಯಿತ ಶಾಸಕರು ವಿಧಾನಸಭೆಗೆ ಆಗಮಿಸುವ ಪ್ರಕ್ರಿಯೆ ಆರಂಭವಾಗಿದೆ. ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಶಾಸಕರು ಆಗಮಿಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ಶಾಸಕರು ಕಾರಿನಲ್ಲಿ ಬಂದರೆ ಭಾರತ್ ಆದಿವಾಸಿ ಪಕ್ಷದ ಶಾಸಕ ಕಮಲೇಶ್ವರ್(Kamleshwar) ದೊಡಿಯಾರ್ ಬೈಕ್ನಲ್ಲಿಯೇ ಎಂಎಲ್ಎ ಎಂಬ ಸ್ಟಿಕರ್ ಅಂಟಿಸಿಕೊಂಡು 350 ಕಿ.ಮೀ ದೂರದಿಂದ ಆಗಮಿಸಿದ್ದರು. ಕಾರನ್ನು ಹೊಂದಿಸಲು ಪ್ರಯತ್ನಿಸಿದ್ದರು, ಆದರೆ ಸಿಗಲಿಲ್ಲ. ಹೀಗಾಗಿ ಬೈಕ್ನಲ್ಲೇ ಫೇಸ್ಬುಕ್ ಲೈವ್ ಮಾಡುತ್ತಾ ಬಂದಿದ್ದಾರೆ.
ರಾತ್ರಿ ವಿಧಾನಸೌಧ ಅತಿಥಿ ಗೃಹ ತಲುಪಿದರು. ಇದಾದ ಬಳಿಕ ಗುರುವಾರ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು.
ಕಮಲೇಶ್ವರ್ ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ, ಬಳಿಕ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದಾರೆ. ಅವರು ಬಡ ಕುಟುಂಬದಿಂದ ಬಂದವರು. ಇಡೀ ಕುಟುಂಬವು ಸೈಲಾನಾದ ರಾಧಾಕುನ್ವಾ ಗ್ರಾಮದಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದೆ.
ಮತ್ತಷ್ಟು ಓದಿ: ಮಧ್ಯಪ್ರದೇಶ: ಚುನಾವಣಾ ಸೋಲಿನ ಬಳಿಕ ಕಮಲ್ನಾಥ್ ರಾಜೀನಾಮೆ ಒತ್ತಾಯಿಸಿತೇ ಕಾಂಗ್ರೆಸ್?
ಕಮಲೇಶ್ವರ್ ಅವರ ಬಳಿ ಚುನಾವಣೆಗೆ ಸ್ಪರ್ಧಿಸಲು ಹಣವೂ ಇರಲಿಲ್ಲ, 12 ಲಕ್ಷ ರೂಪಾಯಿ ಸಾಲ ಮಾಡಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 33 ವರ್ಷದ ಕಮಲೇಶ್ವರ್ ಅವರ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಮೊಟ್ಟೆ ಮಾರಾಟ ಕೆಲಸವನ್ನೂ ಮಾಡುತ್ತಾರೆ.
ರತ್ಲಾಮ್ ಜಿಲ್ಲೆಯ ಸೈಲಾನಾ ವಿಧಾನಸಭಾ ಕ್ಷೇತ್ರದಿಂದ ಭಾರತ್ ಆದವಾಸಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದರು. ಆದರೆ ಕಮಲೇಶ್ವರ್ ಎಲ್ಲರನ್ನೂ ಸೋಲಿಸಿದರು. ಅವರು 71219 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಹರ್ಷ ವಿಜಯ್ ಗೆಹ್ಲೋಟ್ 66601 ಮತಗಳನ್ನು ಪಡೆದರೆ, ಬಿಜೆಪಿಯ ಸಂಗೀತಾ ಚಾರೆಲ್ ಕೇವಲ 41584 ಮತಗಳನ್ನು ಪಡೆದರು.
ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆದಿತ್ತು, ಡಿಸೆಂಬರ್ 3 ರಂದು ಫಲಿತಾಂಶ ಹೊರಬಿದ್ದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Fri, 8 December 23