AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಚುನಾವಣಾ ಸೋಲಿನ ಬಳಿಕ ಕಮಲ್​ನಾಥ್ ರಾಜೀನಾಮೆ ಒತ್ತಾಯಿಸಿತೇ ಕಾಂಗ್ರೆಸ್​?

ಮಧ್ಯಪ್ರದೇಶದಲ್ಲಿ ನಡೆದಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ, ಹಾಗೆಯೇ ಕಾಂಗ್ರೆಸ್​ ಸೋಲನ್ನುಂಡಿದೆ. ಹೀಗಾಗಿ ಮಧ್ಯಪ್ರದೇಶದ ಕಾಂಗ್ರೆಸ್​ ಅಧ್ಯಕ್ಷರಾಗಿರುವ ಕಮಲ್​ನಾಥ್ ಅವರ ರಾಜೀನಾಮೆಯನ್ನು ಕಾಂಗ್ರೆಸ್​ ಕೇಳಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಬಿಜೆಪಿಯು 230 ವಿಧಾನಸಭಾ ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದೆ. ಆದರೆ ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನು ಗೆದ್ದಿದೆ. 2018ಕ್ಕೆ ಹೋಲಿಸಿದರೆ ಕಾಂಗ್ರೆಸ್ 52 ಸ್ಥಾನಗಳನ್ನು ಕಳೆದುಕೊಂಡಿದೆ.

ಮಧ್ಯಪ್ರದೇಶ: ಚುನಾವಣಾ ಸೋಲಿನ ಬಳಿಕ ಕಮಲ್​ನಾಥ್ ರಾಜೀನಾಮೆ ಒತ್ತಾಯಿಸಿತೇ ಕಾಂಗ್ರೆಸ್​?
ಕಮಲ್​ನಾಥ್Image Credit source: ABP Live
ನಯನಾ ರಾಜೀವ್
|

Updated on: Dec 05, 2023 | 9:13 AM

Share

ಮಧ್ಯಪ್ರದೇಶ(Madhya Pradesh)ದಲ್ಲಿ ನಡೆದಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ, ಹಾಗೆಯೇ ಕಾಂಗ್ರೆಸ್​ ಸೋಲನ್ನುಂಡಿದೆ. ಹೀಗಾಗಿ ಮಧ್ಯಪ್ರದೇಶದ ಕಾಂಗ್ರೆಸ್​ ಅಧ್ಯಕ್ಷರಾಗಿರುವ ಕಮಲ್​ನಾಥ್(Kamal Nath) ಅವರ ರಾಜೀನಾಮೆಯನ್ನು ಕಾಂಗ್ರೆಸ್​ ಕೇಳಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಬಿಜೆಪಿಯು 230 ವಿಧಾನಸಭಾ ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದೆ. ಆದರೆ ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನು ಗೆದ್ದಿದೆ. 2018ಕ್ಕೆ ಹೋಲಿಸಿದರೆ ಕಾಂಗ್ರೆಸ್ 52 ಸ್ಥಾನಗಳನ್ನು ಕಳೆದುಕೊಂಡಿದೆ.

ಆದರೆ ಬಿಜೆಪಿ 57 ಸ್ಥಾನಗಳ ಲಾಭ ಪಡೆದಿದೆ. ಎಕ್ಸಿಟ್​ ಪೋಲ್​ನಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಹೇಳಲಾಗಿತ್ತು. ಕಮಲ್​ ನಾಥ್ ಛಿಂದ್ವಾರಾ ಕ್ಷೇತ್ರದಲ್ಲಿ ಗೆಲುವುಸ ಸಾಧಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿತ್ತು, ಆದರೆ ಮುಖ್ಯಮಂತ್ರಿಯಾದ ಕಮಲ್​ನಾಥ್​ ಅವರು ಪಕ್ಷವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ, ಬಿಜೆಪಿ ಮಧ್ಯದಲ್ಲಿ ಸರ್ಕಾರವನ್ನು ರಚಿಸಿತು.

ಇದಾದ ನಂತರ ಕಮಲ್​ನಾಥ್​ಗೆ ಪಕ್ಷದ ಜವಾಬ್ದಾರಿಯನ್ನು ನೀಡಲಾಗಿತ್ತು. ಮಧ್ಯಪ್ರದೇಶ ಚುನಾವಣೆಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಕಮಲ್​ನಾಥ್​ಗೆ ಕಾಂಗ್ರೆಸ್​ ನೀಡಿತ್ತು. ಇದೀಗ ಕಾಂಗ್ರೆಸ್​ ಪಕ್ಷದ ಸೋಲಿನ ಕಾರಣ ಕುರಿತು ಮಂಥನ ನಡೆಯುತ್ತಿದೆ.

ಮತ್ತಷ್ಟು ಓದಿ: Madhya Pradesh Election 2023 Results: ಮಧ್ಯಪ್ರದೇಶದಲ್ಲಿ ನಾಲ್ಕನೇ ಬಾರಿ ಬಿಜೆಪಿ ಅಧಿಕಾರಕ್ಕೆ, ಧೂಳಿಪಟವಾದ ಕಾಂಗ್ರೆಸ್​

ಶಿವರಾಜ್​ ಸಿಂಗ್ ಚೌಹಾಣ್​ ಭೇಟಿ ಮಾಡಿದ್ದ ಕಮಲ್​ನಾಥ್ ಸೋಲಿನ ನಂತರ ಕಮಲ್​ನಾಥ್ ಅವರು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಲು ಬಂದಿದ್ದರು, ಗೆಲುವಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದೆ ಎಂದು ತಿಳಿಸಿದ್ದರು. 2018ರಲ್ಲಿ ಕಾಂಗ್ರೆಸ್​ ಗೆದ್ದಾಗ ಶಿವರಾಜ್​ ಸಿಂಗ್ ಅವರು ಅಭಿನಂದಿಸಲು ಬಂದಿದ್ದರು.

ಸಭೆ ಕರೆದ ಕಮಲ್​ನಾಥ್ ಇಂದು ಭೋಪಾಲ್​ನಲ್ಲಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದಿದ್ದಾರೆ, ಆದರೆ ಇದಕ್ಕೂ ಮುನ್ನವೇ ಪಕ್ಷವು ರಾಜೀನಾಮೆ ಕೇಳಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಕಮಲ್​ನಾಥ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಸೋಲನ್ನು ಒಪ್ಪಿಕೊಂಡ ಕಮಲ್​ನಾಥ್ , ಸಾರ್ವಜನಿಕರು ತಮಗೆ ವಿರೋಧಪಕ್ಷದಲ್ಲಿ ಕೂರುವ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೇಳುವ ಹೈಕಮಾಂಡ್ ಕೇಳಿದೆ ಎನ್ನುವ ಸುದ್ದಿಯನ್ನು ಕಮಲ್​ನಾಥ್ ತಳ್ಳಿಹಾಕಿದ್ದಾರೆ. ಇದು ಕೇವಲ ವದಂತಿ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ