ಮಿತ್ರಪಕ್ಷ ಕಾಂಗ್ರೆಸ್​ ಜತೆಗಿನ ಮಾತುಕತೆ ವಿಫಲ, ಎಡಪಕ್ಷಗಳು 3 ರಾಜ್ಯಗಳಲ್ಲಿ ಸ್ವತಂತ್ರ ಸ್ಪರ್ಧೆ

ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜಸ್ಥಾನ, ಚತ್ತೀಸ್​ಗಢ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​, ಸಿಪಿಐ ಹಾಗೂ ಸಿಪಿಎಂ ನಡುವಿನ ಸೀಟು ಹಂಚಿಕೆ ಮಾತುಕತೆ ಅಂತ್ಯಗೊಂಡಿದೆ. ಎರಡು ಎಡ ಪಕ್ಷಗಳು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಸಿಪಿಎಂ ರಾಜಸ್ಥಾನದಲ್ಲಿ 17, ಚತ್ತೀಸ್​ಗಢದಲ್ಲಿ ಮೂರು ಮತ್ತು ಮಧ್ಯಪ್ರದೇಶದಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಸಿಪಿಐ ಚತ್ತೀಸ್​ಗಢದಲ್ಲಿ 16, ರಾಜಸ್ಥಾನದಲ್ಲಿ 12 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಹಾಗೂ ಮಧ್ಯಪ್ರದೇಶದ ಸುಮಾರು 9 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಮಿತ್ರಪಕ್ಷ ಕಾಂಗ್ರೆಸ್​ ಜತೆಗಿನ ಮಾತುಕತೆ ವಿಫಲ, ಎಡಪಕ್ಷಗಳು 3 ರಾಜ್ಯಗಳಲ್ಲಿ ಸ್ವತಂತ್ರ ಸ್ಪರ್ಧೆ
ಸೀತಾರಾಂ ಯೆಚೂರಿImage Credit source: Outlook
Follow us
ನಯನಾ ರಾಜೀವ್
|

Updated on: Oct 31, 2023 | 10:23 AM

ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜಸ್ಥಾನ, ಚತ್ತೀಸ್​ಗಢ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​, ಸಿಪಿಐ ಹಾಗೂ ಸಿಪಿಎಂ ನಡುವಿನ ಸೀಟು ಹಂಚಿಕೆ ಮಾತುಕತೆ ಅಂತ್ಯಗೊಂಡಿದೆ. ಎರಡು ಎಡ ಪಕ್ಷಗಳು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಸಿಪಿಎಂ ರಾಜಸ್ಥಾನದಲ್ಲಿ 17, ಚತ್ತೀಸ್​ಗಢದಲ್ಲಿ ಮೂರು ಮತ್ತು ಮಧ್ಯಪ್ರದೇಶದಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಸಿಪಿಐ ಚತ್ತೀಸ್​ಗಢದಲ್ಲಿ 16, ರಾಜಸ್ಥಾನದಲ್ಲಿ 12 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಹಾಗೂ ಮಧ್ಯಪ್ರದೇಶದ ಸುಮಾರು 9 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ತೆಲಂಗಾಣದಲ್ಲಿ ಎರಡೂ ಪಕ್ಷಗಳು ಕಾಂಗ್ರೆಸ್ ಜತೆ ಮಾತುಕತೆ ಮುಂದುವರೆದ ಹಂತದಲ್ಲಿ ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ. ದಕ್ಷಿಣ ರಾಜ್ಯದಲ್ಲಿ ಎರಡೂ ಪಕ್ಷಗಳು ತಲಾ ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಮಾತನಾಡಿ, ಮುಂಬರುವ ರಾಜ್ಯ ಚುನಾವಣೆಗೆ ಒಮ್ಮತಕ್ಕೆ ಬರಲು ಇಂಡಿಯಾ ಬಣದಲ್ಲಿನ ಪಕ್ಷಗಳ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ 20244 ಚುನಾವಣೆಗೆ ಸಹಕಾರಿಯಾಗುತ್ತಿತ್ತು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮತ್ತಷ್ಟು ಓದಿ: ತೆಲಂಗಾಣ ಚುನಾವಣೆ ಗೆಲ್ಲಲು ಹಿಂದುಳಿದ ವರ್ಗಕ್ಕೆ ಗಾಳ, ತನ್ನ 56% ಸೀಟ್​ಗಳನ್ನು ಒಬಿಸಿಗೆ ಮೀಸಲಿಟ್ಟ ಬಿಜೆಪಿ​

2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಣವನ್ನು ರಚಿಸಲಾಗಿದೆ ಎಂಬುದು ಇಂಡಿಯಾ ಬಣದಲ್ಲಿರುವ ಬಹುಸಂಖ್ಯಾತರ ಅಭಿಪ್ರಾಯವಾಗಿದೆ. ಅದು ಘೋಷಿತ ಉದ್ದೇಶವೂ ಆಗಿತ್ತು.

ಆದರೆ, ರಾಜ್ಯಗಳ ಚುನಾವಣೆಗಳಲ್ಲಿಯೂ ಹೆಚ್ಚಿನ ಸಮನ್ವಯತೆ ಇರಬೇಕಿತ್ತು, ಸಹಕಾರವು 2024ರ ಚುನಾವಣಾ ಪ್ರಕ್ರಿಯೆಗೆ ಸಹಾಯಕವಾಗುತ್ತಿತ್ತು ಎಂದು ಯೆಚೂರಿ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​ ಹಾಗೂ ಕಾಂಗ್ರೆಸ್​ ನಾಯಕ ಕಮಲ್​ನಾಥ್ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಕೆಲವು ದಿನಗಳ ನಂತರ ಸ್ವತಂತ್ರವಾಗಿ ಸ್ಪರ್ಧಿಸಲು ಎಡಪಕ್ಷಗಳು ನಿರ್ಧರಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ