Chandrababu Naidu: ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಮಧ್ಯಂತರ ಜಾಮೀನು ಮಂಜೂರು
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಆಂಧ್ರ ಪ್ರದೇಶ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu)ಗೆ ಆಂಧ್ರ ಪ್ರದೇಶ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೌಶಲ್ಯಾಭಿವೃದ್ಧಿ ಯೋಜನೆ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು, ನಾಲ್ಕು ವಾರಗಳ ಜಾಮೀನನ್ನು ಮಂಜೂರು ಮಾಡಲಾಗಿದೆ, ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿರುವ ಕಾರಣ, ನವೆಂಬರ್ 24ರವರೆಗೆ ನಾಯ್ಡುಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಈ ಹಿಂದೆ ವಿಜಯವಾಡ ಎಸಿಬಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಿಗೆ ಪತ್ರ ಬರೆದು ಜೈಲು ಆವರಣ ಮತ್ತು ಸುತ್ತಮುತ್ತ ಭದ್ರತೆಯನ್ನು ಕೋರಿದ್ದರು. ಜೈಲಿನಲ್ಲಿ ತನಗೆ ಒದಗಿಸಲಾದ Z+ ಭದ್ರತೆಗೆ ಸಮನಾಗಿರುವಂತೆ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಕೇಳಿದ್ದರು.
ಕೌಶಲ್ಯ ಅಭಿವೃದ್ಧಿ ನಿಗಮದಿಂದ 300 ಕೋಟಿ ರೂ.ಗೂ ಹೆಚ್ಚು ನಷ್ಟಕ್ಕೆ ಕಾರಣವಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಿದೆ.
2017 ರಲ್ಲಿ, ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಮತ್ತು ಆದಾಯ ತೆರಿಗೆ ಇಲಾಖೆಯು ತನಿಖೆಯನ್ನು ಪ್ರಾರಂಭಿಸಿತು, ನಕಲಿ ಇನ್‌ವಾಯ್ಸ್ ಮತ್ತು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು 371 ಕೋಟಿ ರೂ.ಗಳಲ್ಲಿ ಕನಿಷ್ಠ 241 ಕೋಟಿ ರೂ. ಯೋಜನಾ ನಿರ್ವಹಣೆಯ ನೆಪದಲ್ಲಿ ಮರೆಮಾಚಲಾಗಿತ್ತು.
ಮತ್ತಷ್ಟು ಓದಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜಾಮೀನು ಅರ್ಜಿ ವಿಚಾರಣೆಯನ್ನು ಅ.19ಕ್ಕೆ ಮುಂದೂಡಿದ ಆಂಧ್ರ ಹೈಕೋರ್ಟ್
ಎಪಿಎಸ್‌ಎಸ್‌ಡಿಸಿ ನಡೆಸಿದ ಫೊರೆನ್ಸಿಕ್ ಆಡಿಟ್ ವರದಿಯು ಸುಮಾರು 241 ಕೋಟಿ ರೂಪಾಯಿ ಮೊತ್ತವನ್ನು ನಕಲಿ ಇನ್‌ವಾಯ್ಸ್‌ಗಳ ಮೂಲಕ ದುರುಪಯೋಗಪಡಿಸಿಕೊಂಡಿದ್ದು, ರಾಜ್ಯ ಸರ್ಕಾರಕ್ಕೆ ನಷ್ಟವನ್ನು ಉಂಟುಮಾಡಿದೆ ಎಂದು ಬಹಿರಂಗಪಡಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಸೀಮೆನ್ಸ್ ಸಾಫ್ಟ್‌ವೇರ್ ಇಂಡಿಯಾದ ಮಾಜಿ ಎಂಡಿ ಸೌಮ್ಯಾದ್ರಿ ಶೇಖರ್ ಬೋಸ್, ಡಿಸೈನ್‌ಟೆಕ್ ಸಿಸ್ಟಮ್ಸ್‌ನ ವಿಕಾಸ್ ವಿನಾಯಕ್ ಖಾನ್ವಿಲ್ಕರ್, ಮಾಜಿ ಹಣಕಾಸು ಸಲಹೆಗಾರ ಮುಕುಲ್ ಚಂದ್ರ ಅಗರ್ವಾಲ್ ಮತ್ತು ಸ್ಕಿಲ್ಲರ್ ಎಂಟರ್‌ಪ್ರೈಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧಿಕೃತ ಸಹಿದಾರ ಸುರೇಶ್ ಗೋಯಲ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Tue, 31 October 23