ಬೆಳಗಾವಿವರೆಗೂ ವಂದೇ ಭಾರತ್ ರೈಲು ವಿಸ್ತರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಿದ್ದರಾಮಯ್ಯ ಪತ್ರ
ವಂದೇ ಭಾರತ್ ರೈಲು ಬೆಳಗಾವಿ ವರೆಗೂ ವಿಸ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡ ವರೆಗೆ ಇರುವ ವಂದೇ ಭಾರತ್ ರೈಲು ಸಂಪರ್ಕವನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 31): ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(vande bharat express) ಬೆಳಗಾವಿ ವರೆಗೂ ವಿಸ್ತರಿಸುವಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮನವಿ ಮಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ (Ashwini Vaishnaw) ಪತ್ರ ಬರೆದಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡ ವರೆಗೆ ಇರುವ ವಂದೇ ಭಾರತ್ ರೈಲು ಸಂಪರ್ಕವನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ವಂದೇ ಭಾರತ್ ರೈಲು ಸಂಪರ್ಕ ವಿಸ್ತರಣೆಯಿಂದ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯತನಕ ವಿಸ್ತರಣೆ ಮಾಡಿದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಪರ್ಕವನ್ನ ಹುಬ್ಬಳ್ಳಿ – ಧಾರವಾಡದಿಂದ ಬೆಳಗಾವಿ ತನಕ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಮೂಲಕಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಟಿಕೆಟ್ ದರ ಪರಿಷ್ಕರಣೆ: ಇಲ್ಲಿದೆ ಹೊಸ ದರ ವಿವರ
ಬೆಂಗಳೂರು-ಧಾರವಾಡ ದರ ಇಂತಿದೆ
ಬೆಂಗಳೂರು-ಧಾರವಾಡ 1185 ರೂ., ಬೆಂಗಳೂರು- ಹುಬ್ಬಳ್ಳಿ 1155 ರೂ., ಬೆಂಗಳೂರು- ದಾವಣಗೆರೆ 935 ರೂ., ಯಶವಂತಪುರ-ದಾವಣಗೆರೆ 920 ರೂ, ಯಶವಂತಪುರ-ಹುಬ್ಬಳ್ಳಿ 1155 ರೂ., ಯಶವಂತಪುರ-ಧಾರವಾಡ 1185 ರೂ., ದಾವಣಗೆರೆ-ಧಾರವಾಡ ರೂ.555, ದಾವಣಗೆರೆ-ಹುಬ್ಬಳ್ಳಿ 520 ರೂ, ಹುಬ್ಬಳ್ಳಿಯಿಂದ ಧಾರವಾಡಕ್ಕೆ 365 ರೂ. ನಿಗದಿಪಡಿಸಲಾಗಿದೆ.
ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ
ಇನ್ನು ರೂಲಿನ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಅದು ಇಂತಿದೆ. ಬೆಂಗಳೂರು- ಧಾರವಾಡ 2265 ರೂ., ಬೆಂಗಳೂರು- ಹುಬ್ಬಳ್ಳಿ 2200ರೂ., ಬೆಂಗಳೂರು-ದಾವಣಗೆರೆ 1760ರೂ., ಯಶವಂತಪುರ- ಧಾರವಾಡ .2265ರೂ, ಯಶವಂತಪುರ- ಹುಬ್ಬಳ್ಳಿ 2200ರೂ., ಯಶವಂತಪುರ- ದಾವಣಗೆರೆ 1730ರೂ., ದಾವಣಗೆರೆ- ಹುಬ್ಬಳ್ಳಿ 1005ರೂ., ದಾವಣಗೆರೆ- ಧಾರವಾಡ 1075ರೂ., ಹುಬ್ಬಳ್ಳಿ -ಧಾರವಾಡ 690ರೂ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ