ಆನ್​ಲೈನ್​ ಮೂಲಕವೇ ಉಚಿತವಾಗಿ ಕನ್ನಡ ಕಲಿಯಿರಿ: ಹೇಗೆ ಅಂತೀರಾ? ಇಲ್ಲಿದೆ ನೋಡಿ

ಆನ್​ಲೈನ್​ ವೇದಿಕೆ ಮುಖಾಂತರ ಕನ್ನಡವನ್ನು ಉಚಿತವಾಗಿ, ನಿಮ್ಮ ಆದ್ಯತೆಯ ಭಾಷೆಯ ಮೂಲಕ ಕಲಿಯಬಹುದಾಗಿದೆ. ಕನ್ನಡ ಕಲಿಸುವ ಆನ್​​ಲೈನ್​ ತರಗತಿಯು ನವೆಂಬರ್​ 1 ಕನ್ನಡ ರಾಜ್ಯೋತ್ಸವ ದಿನದಂದೇ ಆರಂಭವಾಗುತ್ತದೆ. ಈ ತರಗತಿಗೆ ಜಗತ್ತಿನ ಯಾವುದೇ ಮೂಲೆಯ ಜನರು ಸೇರಿಕೊಳ್ಳಬಹುದಾಗಿದೆ.

ಆನ್​ಲೈನ್​ ಮೂಲಕವೇ ಉಚಿತವಾಗಿ ಕನ್ನಡ ಕಲಿಯಿರಿ: ಹೇಗೆ ಅಂತೀರಾ? ಇಲ್ಲಿದೆ ನೋಡಿ
ಕನ್ನಡ
Follow us
|

Updated on: Oct 31, 2023 | 11:24 AM

ಬೆಂಗಳೂರು ಅ.31: ಬೇರೆ ರಾಜ್ಯದಿಂದ ಕರ್ನಾಟಕಕ್ಕೆ (Karnataka) ವಲಸೆ ಬಂದು ಅದೆಷ್ಟೋ ಜನರು ಜೀವನ ಕಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ನೆಲಸಿ ಸುಮಾರು ವರ್ಷಗಳಾದರೂ ಕನ್ನಡವನ್ನು ಕಲಿತಿರುವುದಿಲ್ಲ. ಇನ್ನು ಕೆಲವರಿಗೆ ಕನ್ನಡ (Kannada) ಕಲಿಯಬೇಕೆಂದು ಹಂಬಲವಿದ್ದರೂ, ಕಲಿಸುವವರು ಇರುವುದಿಲ್ಲ. ಇದರಿಂದ ಕನ್ನಡವನ್ನು ಹೇಗೆ ಕಲಿಯುವುದು ಎಂಬ ಚಿಂತೆ ಕಾಡುತ್ತಿರುತ್ತದೆ. ಆದರೆ ಇನ್ಮುಂದೆ ಈ ಚಿಂತೆ ನಿಮಗೆ ಬೇಡ. ಏಕೆಂದರೆ ಉಚಿತವಾಗಿ ಆನ್​ಲೈನ್​ (Online) ಮೂಲಕ ಕನ್ನಡ ಕಲಿಸಲು ವೇದಿಕೆ ಸಿದ್ದವಾಗಿದೆ. ಹೌದು ಕನ್ನಡ ಆನ್‌ಲೈನ್ ಟ್ಯೂಷನ್ಸ್ ಮತ್ತು ಸರ್ಜಾಪುರ ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ ಜಂಟಿಯಾಗಿ “Talk Kannada Boldy” (ಸ್ಪಷ್ಟವಾಗಿ ಕನ್ನಡ ಮಾತನಾಡಿ) ಎಂಬ ಶಿರ್ಶಿಕೆ​ ಅಡಿಯಲ್ಲಿ ಕನ್ನಡ ಕಲಿಸಲು ಮುಂದಾಗಿದೆ.

ಆನ್​ಲೈನ್​ ವೇದಿಕೆ ಮುಖಾಂತರ ಕನ್ನಡವನ್ನು ಉಚಿತವಾಗಿ, ನಿಮ್ಮ ಆದ್ಯತೆಯ ಭಾಷೆಯ ಮೂಲಕ ಕಲಿಯಬಹುದಾಗಿದೆ. ಕನ್ನಡ ಕಲಿಸುವ ಆನ್​​ಲೈನ್​ ತರಗತಿಯು ನವೆಂಬರ್​ 1 ಕನ್ನಡ ರಾಜ್ಯೋತ್ಸವ ದಿನದಂದೇ ಆರಂಭವಾಗುತ್ತದೆ. ಈ ತರಗತಿಗೆ ಜಗತ್ತಿನ ಯಾವುದೇ ಮೂಲೆಯ ಜನರು ಸೇರಿಕೊಳ್ಳಬಹುದಾಗಿದೆ. ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಮತ್ತು ಐದು ಚಾನಲ್‌ಗಳಲ್ಲಿ ಯಾವುದಾದರೂ ಒಂದು ವೇದಿಕೆ ಮೂಲಕ ಸೇರಿಕೊಳ್ಳಬಹುದು.

ಇದನ್ನೂ ಓದಿ: ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ

ಕಾರ್ಯಕ್ರಮ ಸಂಯೋಜಕ ಜಗದೀಶ ಕೊಟ್ಟೂರಶೆಟ್ಟರ ಮಾತನಾಡಿ, ”ಶಾಲೆಯಲ್ಲಿ ಕನ್ನಡ ಓದಲು ಕಲಿತರೂ, ಅನ್ಯಭಾಷಿಕರು ತಪ್ಪು ಮಾಡುವ ಭಯದಿಂದ ಕನ್ನಡದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಶಾಲಾ ವಿದ್ಯಾರ್ಥಿಗಳು ಸಹ ಭಾಷೆಯನ್ನು ಓದಲು ಕಲಿಯುತ್ತಾರೆ ಆದರೆ ಅವರಿಗೆ ವಾಕ್ಯಗಳನ್ನು ರಚಿಸಲು ಸಾಧ್ಯವಾಗುತ್ತಿಲ್ಲ. ಈ ತರಗತಿಗಳ ಮೂಲಕ ನಾವು ಇದನ್ನು ಬದಲಾಯಿಸಲು ಬಯಸಿದ್ದೇವೆ ಎಂದು ತಿಳಿಸಿದರು.

ಅನುಭವಿ ತರಬೇತುದಾರರು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಮಲಯಾಳಂ ಯಾವುದೇ ಇತರ ಭಾಷೆಗಳ ಮೂಲಕ ಕನ್ನಡವನ್ನು ಸುಲಭವಾಗಿ ಕಲಿಸುತ್ತಾರೆ. ತರಬೇತುದಾರರು ಹೆಚ್ಚು ಅನುಭವಿ ಶಿಕ್ಷಕರಾಗಿದ್ದು, ಕನ್ನಡ ಮತ್ತು ಆಯ್ದ ಭಾಷೆಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ. ನವೆಂಬರ್ 1 ರಂದು ಪ್ರಾರಂಭವಾದ ನಂತರ, ಪ್ರತಿ ಭಾನುವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ತರಗತಿ ನಡೆಸಲಾಗುತ್ತದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ವಿವರಗಳಿಗಾಗಿ, kannadaonlinetuitions.com ಗೆ ಭೇಟಿ ನೀಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ