IT Raids: ಬೆಂಗಳೂರಿನ ವಿವಿಧ ಏರಿಯಾಗಳಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ದಾಳಿ
IT Raids On Abharan Jewellers: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಮಂಗಳೂರಿನಲ್ಲಿರುವ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಶಿವಭಾಗ್ ಚಿನ್ನದಂಗಡಿಗಳ ಮೇಲೆ ಐಟಿ ಅಧಿಕಾರಿಗಳು ಮಾಡಿದ್ದರೆ, ಇತ್ತ ಬೆಂಗಳುರಿನ ಹಲವು ಏರಿಯಾಗಳಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ದಾಳಿಯಾಗಿದೆ.

ಬೆಂಗಳೂರು, (ಅಕ್ಟೋಬರ್ 31): ಉಡುಪಿ ಹಾಗೂ ಮಂಗಳೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಸಹ ಚಿನ್ನಾಭರಣ ಮಳಿಗೆಗಳಿಗೆ ಐಟಿ ಅಧಿಕಾರಿಗಳು (IT Raids( ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆ, ಮಹಾಲಕ್ಷ್ಮಿ ಲೇಔಟ್, ಗಿರಿನಗರ, ಬನಶಂಕರಿಯಲ್ಲಿರುವ ಆಭರಣ ಜ್ಯೂವೆಲರ್ಸ್(abharan jewellers) ಮಳಿಗೆಗಳ ಮೇಲೆ ಐಟಿ ದಾಳಿಯಾಗಿದೆ. ಒಟ್ಟು 30 ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳ ತಂಡ, ಬೆಂಗಳೂರಿನಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: IT Raids: ಕರಾವಳಿ ಭಾಗದಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ
ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಮಂಗಳೂರಿನಲ್ಲಿರುವ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಶಿವಭಾಗ್ ಚಿನ್ನದಂಗಡಿಗಳ ಮೇಲೆ ಐಟಿ ಅಧಿಕಾರಿಗಳು ಮಾಡಿದ್ದರೆ, ಇತ್ತ ಬೆಂಗಳುರಿನ ಹಲವು ಏರಿಯಾಗಳಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ದಾಳಿಯಾಗಿದೆ.
ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಐಟಿ ರೇಡ್ ಆಗುತ್ತಲೇ ಇದೆ. ಚಿನ್ನಂದಗಡಿಗಳ ಮೇಲೆಯಯೇ ದಾಳಿಯಾಗುತ್ತಲೇ ಇದೆ. ಆದ್ರೆ, ಕಳೆದ ಬಾರಿಯ ದಾಳಿ ವೇಳೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ನಗದು ಹಣ ಸಿಕ್ಕಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ