ಬೆಂಗಳೂರು: ಕಾರ್ನಿಂದ ಗುದ್ದಿ ವ್ಯಕ್ತಿಯ ಕೊಲೆ, ಅಪಘಾತವೆಂದು ಬಿಂಬಿಸಿ ಎಸ್ಕೆಪ್ ಆಗಲು ಯತ್ನಿಸಿದ್ದ ಆರೋಪಿಗಳು ಅರೆಸ್ಟ್
ಕೆಲ ದಿನಗಳ ಹಿಂದೆ ನಗರದಲ್ಲೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಕ್ಟೋಬರ್ 20 ರಂದು ಪಾಟರಿ ಸರ್ಕಲ್ನಲ್ಲಿ ಸ್ಕಾರ್ಪಿಯೋ ಕಾರ್ವೊಂದು ಬೈಕ್ಗೆ ಗುದ್ದಿದ ಪರಿಣಾಮ ಅಸ್ಗರ್ ಎಂಬುವರು ಮೃತಪಟ್ಟಿದ್ದರು. ಈ ಅಪಘಾತ ಆಕಸ್ಮಿಕವಲ್ಲ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರು ಅ.31: ಕೆಲ ದಿನಗಳ ಹಿಂದೆ ನಗರದಲ್ಲೆ ನಡೆದಿದ್ದ ಅಪಘಾತ (Arrest) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಕ್ಟೋಬರ್ 20 ರಂದು ಪಾಟರಿ ಸರ್ಕಲ್ನಲ್ಲಿ ಸ್ಕಾರ್ಪಿಯೋ ಕಾರ್ವೊಂದು (Car) ಬೈಕ್ಗೆ ಗುದ್ದಿದ ಪರಿಣಾಮ ಅಸ್ಗರ್ ಎಂಬುವರು ಮೃತಪಟ್ಟಿದ್ದರು. ಈ ಅಪಘಾತ ಆಕಸ್ಮಿಕವಲ್ಲ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಬ ಅಂಶ ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪುಲಕೇಶಿನಗರ ಠಾಣೆ ಪೊಲೀಸರು ಆರೋಪಿಗಳಾದ ಅಮ್ರಿನ್, ನಯಾಜ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಮೃತ ಅಸ್ಗರ್ ಹಾಗೂ ಆರೋಪಿಗಳು ಪರಿಚಯಸ್ಥರು. ಮೃತ ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಅಸ್ಗರ್ ಬಳಿ ಕಾರುವೊಂದನ್ನ ಖರೀದಿಸಿದ್ದರು. ಅಸ್ಗರ್ ಹಾಗೂ ಆರೋಪಿಗಳ ಮಧ್ಯೆ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಜಗಳ ನಡೆದಿತ್ತು. ಜಗಳದ ವೇಳೆ ಆರೋಪಿಗಳು ಅಸ್ಗರ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಅಸ್ಗರ್ ಜೆಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಜೆಸಿ ನಗರ ಪೊಲೀಸರು ಆರೋಪಿಗಳ ವಿರುದ್ಧ 307 ಕೇಸ್ ಹಾಕಿದ್ದರು.
ನಂತರ ಆರೋಪಿಗಳು, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಸ್ಗರ್ಗೆ ಹೇಳಿದ್ದರು. ಈ ವಿಚಾರವಾಗಿ ಮಾತಾಡೋಣ ಬಾ ಎಂದು ಆರೋಪಿಗಳು ಅಸ್ಗರ್ನನ್ನು ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದ ಅಸ್ಗರ್ಗೆ ಆರೋಪಿಗಳು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ದರು. ಆದರೆ ಅಸ್ಗರ್ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಅಂತ ಹೇಳಿ ಹೊರಟಿದ್ದರು. ಜೊತೆಗಿದ್ದ ಗೆಳೆಯನ ಡ್ರಾಪ್ ಮಾಡಲು ಅಸ್ಗರ್ ಪಾಟರಿ ರಸ್ತೆಗೆ ಬಂದಿದ್ದರು.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಕಾರು ಅಪಘಾತ, ಯುಟ್ಯೂಬರ್ ಸಾವು
ಅಸ್ಗರ್ನನ್ನೇ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಸ್ಕಾರ್ಪಿಯೋ ಕಾರ್ನಿಂದ ಬೈಕ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದರು. ಘಟನೆಯಲ್ಲಿ ಅಸ್ಗರ್ ಮೃತಪಟ್ಟಿದ್ದು, ಆತನ ಸ್ನೇಹಿತನಿಗೆ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ.
ಸಂಚಾರಿ ಪೊಲೀಸರು ಮೊದಲು ಅಪಘಾತ ಅಂತ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಅಸ್ಗರ್ ಗೆಳೆಯನ ಹೇಳಿಕೆ ವೇಳೆ ಕೊಲೆ ಮಾಡಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಪ್ರಕರಣ ಪುಲಕೇಶಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ. ಕೂಡಲೆ ತನಿಖೆಗೆ ಇಳಿದ ಪುಲಕೇಶಿ ನಗರ ಠಾಣೆ ಪೊಲೀಸರು ಪ್ರಕರಣ ಸಂಬಂಧ ಆರೋಪಿ ಅಮ್ರಿನ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ