ಬೆಂಗಳೂರು: ಬೆನ್ಜ್ ಕಾರು ಅಪಘಾತ, ಓರ್ವ ಸಾವು ಪ್ರಕರಣ; ಆರೋಪಿ ಬಂಧನ
ಈ ಘಟನೆ ಬಳಿಕ ಕಾರು ಚಾಲಕ ರಿತೇಶ್ ಗಾಯಾಳು ರಾಜೇಂದ್ರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಯಾವಾಗ ಬೈಕ್ ಚಾಲಕ ರಾಜೇಂದ್ರ ಸಾವನ್ನಪ್ಪುತ್ತಿದ್ದ ಸುದ್ದಿ ಕಿವಿಗೆ ಬಿತ್ತೋ, ಕೂಡಲೇ ಕಾರು ಚಾಲಕ ರಿತೇಶ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕೆಎಸ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬೆಂಗಳೂರು, ಅ.29: ಬೆಂಗಳೂರಿನ ಜೆ.ಪಿ ನಗರದ ಗೊಟ್ಟಿಗೆರೆ ರಸ್ತೆಯಲ್ಲಿ ನಡೆದಿದ್ದ ಭೀಕರ ಬೆನ್ಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಕೆ.ಎಸ್.ಲೇಔಟ್ ಸಂಚಾರ ಪೊಲೀಸರು ಬಂಧಿಸಿದ್ದಾರೆ. ನಿರ್ಲಕ್ಷ್ಯ ಚಾಲನೆ ಮಾಡಿ ಅಪಘಾತ ಎಸಗಿದ್ದ ರಿತೇಶ್ ಗೋಯಲ್ ಬಂಧಿತ ಆರೋಪಿ. ಇನ್ನು ಈ ಅಪಘಾತದಲ್ಲಿ ಬೈಕ್ ಸವಾರ ರಾಜೇಂದ್ರ (46) ಸಾವನ್ನಪ್ಪಿದ್ದ. ಹೌದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ರಾಜೇಂದ್ರನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆ್ಗೆ ಸಾಗಿಸಲು ಪ್ರಯತ್ನಿಸಿದ್ದರು. ಆದರೆ, ದುರಾದೃಷ್ಟವಶಾತ್ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು.
ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಕಾರು ಚಾಲಕ ರಿತೇಶ್
ಇನ್ನು ಈ ಘಟನೆ ಬಳಿಕ ಕಾರು ಚಾಲಕ ರಿತೇಶ್ ಗಾಯಾಳು ರಾಜೇಂದ್ರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಯಾವಾಗ ಬೈಕ್ ಚಾಲಕ ರಾಜೇಂದ್ರ ಸಾವನ್ನಪ್ಪುತ್ತಿದ್ದ ಸುದ್ದಿ ಕಿವಿಗೆ ಬಿತ್ತೋ, ಕೂಡಲೇ ಕಾರು ಚಾಲಕ ರಿತೇಶ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕೆಎಸ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ
ನಿನ್ನೆ ಸಂಜೆ 4.20 ರ ವೇಳೆಗೆ ಬೆನ್ಜ್ ಕಾರು ಹಾಗೂ ಬೈಕ್ ಸವಾರ ರಾಜೇಂದ್ರನಿಗೆ ಅಪಘಾತವಾದ ಘಟನೆ ನಡೆದಿತ್ತು. ಈ ವೇಳೆ ಕಾರಿನ ಬಾನೆಟ್ ಮೇಲೆ ಹಾರಿದ್ದ ರಾಜೇಂದ್ರನನ್ನು ಬರೊಬ್ಬರಿ 100 ಮೀಟರ್ ಎಳೆದೊಯ್ದಿದ್ದು, ನಂತರ ಮತ್ತೊರ್ವ ಬೈಕ್ ಚಾಲಕನಿಗೆ ಅಪಘಾತ ಮಾಡಿತ್ತು. ಆ ಬಳಿಕ ರಸ್ತೆ ಬದಿ ಪುಟ್ ಪಾತ್ ಮೇಲೆ ಹರಿದು ಎಲೆಕ್ಟ್ರಿಕ್ ಪೋಲ್ಗೆ ಬಡಿದಿತ್ತು. ಜೊತೆಗೆ ಅಪಘಾತದ ರಭಸಕ್ಕೆ ಎಲೆಕ್ಟ್ರಾನಿಕ್ ಕಂಬ ಮುರಿದು ಬಿದ್ದಿತ್ತು. ಭೀಕರ ಅಪಘಾತ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದರು. ಇನ್ನು ಈ ಭೀಕರ ಅಪಘಾತದ ದೃಶ್ಯ, ರಸ್ತೆ ಬದಿಯ ಸಿಸಿ ಕ್ಯಾಮಾರದಲ್ಲಿ ಸೆರೆ ಆಗಿದ್ದು, ಈ ಕುರಿತು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ