Chikkaballapur Accident : ಮಂಜು ಮುಸುಕಿದ ಮಬ್ಬು ರಸ್ತೆಯಲ್ಲಿ ಭೀಕರ ಅಪಘಾತ, ಮೃತ ನತದೃಷ್ಟರ ವಿಳಾಸ-ವಿವರಗಳು ಇಲ್ಲಿವೆ

ಇಂದು ಬೆಳಗಿನ ಜಾವ ರಾಜಧಾನಿಗೆ ಅಂಟಿಕೊಂಡಂತಿರುವ ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಸರಿಯಾಗಿ 13 ಮಂದಿ ನತದೃಷ್ಟರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅವರ ಪೈಕಿ 12 ಮಂದಿ ಮೃತರ ವಿಳಾಸ-ವಿವರಗಳು ಹೀಗಿವೆ:

Chikkaballapur Accident : ಮಂಜು ಮುಸುಕಿದ ಮಬ್ಬು ರಸ್ತೆಯಲ್ಲಿ ಭೀಕರ ಅಪಘಾತ, ಮೃತ ನತದೃಷ್ಟರ ವಿಳಾಸ-ವಿವರಗಳು ಇಲ್ಲಿವೆ
ಮಂಜು ಮುಸುಕಿದ ಮಬ್ಬು ರಸ್ತೆಯಲ್ಲಿ ಭೀಕರ ಅಪಘಾತ: ಮೃತರ ವಿಳಾಸ-ವಿವರಗಳು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Oct 26, 2023 | 1:23 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 26: ಇನ್ನೂ ಸರಿಯಾಗಿ ಮಂಜು ಸುರಿಯುವ ಕಾಲ ಆರಂಭವಾಗಿಲ್ಲ. ಆಗಲೇ ಮಂಜು ಮುಸುಕಿದ ರಸ್ತೆಗಳಲ್ಲಿ ಭೀಕರ ಅಪಘಾತಗಳು ಘಟಿಸತೊಡಗಿವೆ. ಶರವೇಗದಲ್ಲಿ ಸಂಚರಿಸುವ ವಾಹನಗಳಿಗೆ ಮುಸುಕಿರುವ ಮಂಜಿನ ಎದುರು (Fog) ವಾಹನಗಳು ನಿಂತಿರುವುದಾಗಲಿ ಅಥವಾ ಎದುರಿನಿಂದ ಬರುವ ವಾಹನಗಗಳು ಅನೇಕ ವೇಳೆ ಚಾಲಕನ ಕಣ್ಣಿಗೆ ಬೀಳುವುದಿಲ್ಲ. ಸರಿಯಾಗಿ ಅದೆ ಸಮಯದಲ್ಲಿ ಯಡವಟ್ಟುಗಳು ಆಗುವುದು ಅಥವಾ ಅಪಘಾತಗಳು ಆಗುವುದು. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ ರಾಜಧಾನಿಗೆ ಅಂಟಿಕೊಂಡಂತಿರುವ ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಭೀಕರ ಅಪಘಾತವೊಂದು (Chikkaballapur Accident) ನಡೆದಿದೆ. ಸರಿಯಾಗಿ 13 ಮಂದಿ ನತದೃಷ್ಟರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅವರ ಪೈಕಿ 12 ಮಂದಿ ಮೃತರ ವಿಳಾಸ-ವಿವರಗಳು ಹೀಗಿವೆ:

1. ಶ್ರೀಮತಿ ಅರುಣ ಕೋಂ ನವೀನ್ ಕುಮಾರ್, 32 ವರ್ಷ, ವಾಸ: ದೊಡ್ಡಬಳ್ಳಾಪುರ ನಗರ

2. ನರಸಿಂಹಮೂರ್ತಿ ಬಿನ್ ಕೃಷ್ಣಪ್ಪ, 37 ವರ್ಷ, ಭಜಂತ್ರಿ ಜನಾಂಗ, ಸಲೂನ್ ಕೆಲಸ, ಕಾವಲ್ ಭೈರಸಂದ್ರ, ಬೆಂಗಳೂರು, ಸ್ವಂತ ಊರು, ಮಾರ್ಗಕುಂಟೆ, ಬಾಗೇಪಲ್ಲಿ ತಾಲ್ಲೂಕು.

3. ನರಸಿಂಹಪ್ಪ 40 ವರ್ಷ, ಮಾದಿಗ ಜನಾಂಗ, ಕಲಿಗೇರೆ ಗ್ರಾಮ, ಮಲ್ಲಪಲ್ಲಿ ಪಂಚಾಯಿತಿ, ಗೋರಂಟ್ಲ ಮಂಡಲಂ, ಆಂದ್ರಪ್ರದೇಶ.

4. ರುತ್ವಿಕ್ ಬಿನ್ ಅರುಣ, 6 ವರ್ಷ, ವಾಸ: ದೊಡ್ಡಬಳ್ಳಾಪುರ ನಗರ

5. ಪೆರಿಮಿಳಿ ಪವನ್ ಕುಮಾರ್ ಬಿನ್ ಪೆರಿಮಿಳಿ ನಾಗಭೂಷನ, 32 ವರ್ಷ, ವಾಸ:01/86 ಗೋರಂಟ್ಲಪಲ್ಲಿ, ಕೊತ್ತಚೆರುವು, ಆನಂತಪುರ, ಆಂದ್ರಪ್ರದೇಶ.

6. ಸುಬ್ಬಮ್ಮ@ ವೆಂಕಟಲಕ್ಷ್ಮಮ್ಮ ಕೋಂ ವೆಂಕಟನಾರಾಯಣ, ಮಗ್ಗ ಕೆಲಸ ನಂ:-66(D), 14 ನೇ ಮುಖ್ಯ ರಸ್ತೆ, ವೃಷಭಾವತಿ ನಗರ, ಕಾಮಾಕ್ಷಿ ಪಾಳ್ಯ, ಬಸವೇಶ್ವರ ನಗರ, ಬೆಂಗಳೂರು.

7. ಶಾಂತಮ್ಮ ಕೋಂ ಶಂಕರಪ್ಪ, 37 ವರ್ಷ, ಗಾರ್ಮೇಂಟ್ಸ್ ಕೆಲಸ (ದೊಂಗಸಂದ್ರ), ಗೊಲ್ಲ ಜನಾಂಗ, ವಾಸ:- ಗೌನಿಪೆಂಟ ಗ್ರಾಮ, ಪೆನುಗೊಂಡ ತಾಲ್ಲೂಕು, ಪುಟ್ಟಪರ್ತಿ ಜಿಲ್ಲೆ, ಆಂದ್ರಪ್ರದೇಶ

8. ರಾಜವರ್ಧನ್ ಬಿನ್ ಶಂಕರಪ್ಪ, 15 ವರ್ಷ, ಗೊಲ್ಲ ಜನಾಂಗ, ವಾಸ:- ಗೌನಿಪೆಂಟ ಗ್ರಾಮ, ಪೆನುಗೊಂಡ ತಾಲ್ಲೂಕು, ಪುಟ್ಟಪರ್ತಿ ಜಿಲ್ಲೆ, ಆಂದ್ರಪ್ರದೇಶ

9. ನಾರಾಯಣಪ್ಪ, 50 ವರ್ಷ, ಎಸ್.ಸಿ ಜನಾಂಗ, ಮರಕೋರಪಲ್ಲಿ ಗ್ರಾಮ, (ಆಂದ್ರಪ್ರದೇಶ), ಕೂಲಿ ಕೆಲಸ, ಯಲಹಂಕ, ಬೆಂಗಳೂರು.

10. ಎ ವೆಂಕಟರಮಣ ಬನ್ ಲೇಟ್ ನಾರಾಯಣಪ್ಪ, 51 ವರ್ಷ, ದೇವಾಂಗ ಜನಾಂಗ, ಮಗ್ಗ ಕೆಲಸ:- ಕಾಮಾಕ್ಷಿ ಪಾಳ್ಯ, ಬಸವೇಶ್ವರ ನಗರ, ಬೆಂಗಳೂರು ನಗರ. ಸ್ವಂತ ವಾಸ:-ನವಾಬ ಕೋಟಾ, ಒಡಿಸಿ ಮಂಡಲಂ, ಸತ್ಯಸಾಯಿ ಜಿಲ್ಲೆ

11. ಬೆಲ್ಲಾಲ ವೆಂಕಟಾದ್ರಿ ಬಿನ್ ನಾಗಪ್ಪ, 32 ವರ್ಷ, ವಾಲ್ಮೀಕಿ ಜನಾಂಗ, ಪೈಂಟಿಂಗ್ ಕೆಲಸ, ವಾಸ:- ಹೊಂಗಸಂದ್ರ, ಬೆಂಗಳೂರು, ಸ್ವಂತ ಸ್ಥಳ:- ವಾನವೋಲು ಗ್ರಾಮ, ಗೋರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಸತ್ಯಸಾಯಿ ಜಿಲ್ಲೆ, ಆಂದ್ರಪ್ರದೇಶ.

12. ಬೆಲ್ಲಾಲ ಲಕ್ಷ್ಮಿ ಕೋಂ ಬೆಲ್ಲಾಲ ವೆಂಕಟಾದ್ರಿ, 20 ವರ್ಷ, ವಾಲ್ಮೀಕಿ ಜನಾಂಗ, ಗಾರ್ಮೆಂಟ್ಸ್ ಕೆಲಸ, (ಬೆಂಗಳೂರಿನ ಹೊಂಗಸಂದ್ರದಲ್ಲಿ), ಸ್ವಂತ ಸ್ಥಳ:-ವಾನವೋಲು ಗ್ರಾಮ, ಗೋರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಸತ್ಯಸಾಯಿ ಜಿಲ್ಲೆ, ಆಂದ್ರಪ್ರದೇಶ.

13. ಒಬ್ಬ ಮೃತರ ವಿಳಾಸ ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಪಘಾತ: ಶಾಸಕ ಪ್ರದೀಪ್ ಈಶ್ವರ್ ಭಾವುಕ, ಮೃತ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಇನ್ನು, ಮೃತಪಟ್ಟ ಅಷ್ಟೂ ಮಂದಿಯ ಶವಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಶವಗಾರದ ಬಳಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ರವರು ಭೇಟಿ ನೀಡಿ ಪರಿಶೀಲಿಸಿ ಮೃತರ ಸಂಬಂಧಿಕರಿಗೆ ಸಾಂತ್ವನ ತಿಳಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:22 pm, Thu, 26 October 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್