ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ; ಮನೆಯೊಂದರಲ್ಲಿ ಸ್ಫೋಟ, ಇಬ್ಬರು ದುರ್ಮರಣ

| Updated By: Lakshmi Hegde

Updated on: Feb 27, 2022 | 10:03 AM

ಈ ಸ್ಫೋಟವುಂಟಾಗಲು ಕಾರಣ ಸಣ್ಣ ಫಿರಂಗಿ (ಮಾರ್ಟರ್​) ಎಂದು ಹೇಳಲಾಗಿದ್ದು, ಮೃತರನ್ನು ಮಾಂಗ್​​ಮಿನ್​ಲಾಲ್​ ಮತ್ತು 22 ವರ್ಷದ ಲ್ಯಾಂಗಿನ್ಸಾಂಗ್​ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಗಂಭೀರ ಗಾಯಗೊಂಡು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಣಿಪುರ ವಿಧಾನಸಭೆ ಚುನಾವಣೆಗೆ ಇನ್ನೊಂದೇ ದಿನ ಬಾಕಿ; ಮನೆಯೊಂದರಲ್ಲಿ ಸ್ಫೋಟ, ಇಬ್ಬರು ದುರ್ಮರಣ
ಪ್ರಾತಿನಿಧಿಕ ಚಿತ್ರ
Follow us on

ಮಣಿಪುರ ವಿಧಾನಸಭೆ ಚುನಾವಣೆಗೆ (Manipur Assembly Election) ಇನ್ನೊಂದೇ ದಿನ ಬಾಕಿ ಇದೆ. ಇಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಫೆ.20 ಮತ್ತು ಎರಡನೇ ಹಂತ ಮಾರ್ಚ್​5ಕ್ಕೆ ಇದ್ದು, ಮತ ಎಣಿಕೆ ಮಾರ್ಚ್​ 10ರಂದು ನಡೆಯುವುದು. ಈ ಮಧ್ಯೆ ಇಲ್ಲಿನ ಚುರಾಚಾಂದ್​ಪುರ ಜಿಲ್ಲೆಯ ಗಾಂಗ್ಪಿಮೌಲ್​​ ಎಂಬ ಹಳ್ಳಿಯ ಮನೆಯೊಂದರಲ್ಲಿ ಸ್ಫೋಟವುಂಟಾಗಿದ್ದು, 6ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ.

ಈ ಸ್ಫೋಟವುಂಟಾಗಲು ಕಾರಣ ಸಣ್ಣ ಫಿರಂಗಿ (ಮಾರ್ಟರ್​) ಎಂದು ಹೇಳಲಾಗಿದ್ದು, ಮೃತರನ್ನು ಮಾಂಗ್​​ಮಿನ್​ಲಾಲ್​ ಮತ್ತು 22 ವರ್ಷದ ಲ್ಯಾಂಗಿನ್ಸಾಂಗ್​ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಗಂಭೀರ ಗಾಯಗೊಂಡು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆ ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು, ಇನ್ನಿತರ ಭದ್ರತಾ ಪಡೆ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.  ಸ್ಫೋಟದ ಸಂಬಂಧ ತನಿಖೆ ಶುರು ಮಾಡಿಕೊಂಡಿದ್ದಾರೆ.

ಜನವರಿ 8ರಂದು ಮಣಿಪುರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅದಾದ ಎರಡನೇ ದಿನದಲ್ಲಿ ಇಂಫಾಲ್​​ನ ಪಶ್ಚಿಮ ಜಿಲ್ಲೆಯ ಸಮುರೌನಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ಅವರ ಸೋದರ ಸಂಬಂಧಿಯನ್ನು ಹತ್ಯೆ ಮಾಡಲಾಗಿತ್ತು.  ಅದಾದ ಬಳಿಕ ಈ ಸ್ಫೋಟ ನಡೆದಿದೆ. ಮನೆಯಲ್ಲಿ ಮಾರ್ಟರ್​ ಯಾಕಿತ್ತು? ಸ್ಫೋಟ ಉಂಟಾಗಿದ್ದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್​

Published On - 9:54 am, Sun, 27 February 22