Manipur Assembly Polls: ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಇಂದು; 173 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

1721ಮತಕೇಂದ್ರಗಳಲ್ಲಿ 381 ಮತಗಟ್ಟೆಗಳ ಉಸ್ತುವಾರಿ ಸಂಪೂರ್ಣ ಮಹಿಳೆಯರದ್ದೇ ಆಗಿದೆ. ಅಂದರೆ ಅಲ್ಲಿ ಎಲ್ಲ ಅಧಿಕಾರಿಗಳೂ ಮಹಿಳೆಯರೇ ಆಗಿದ್ದಾರೆ. ಇನ್ನು ಸೈಕೋಟ್​​ ಎಂಬ ಮತಗಟ್ಟೆಯನ್ನು ವಿಕಲಚೇತನರೇ ನಿರ್ವಹಣೆ ಮಾಡುತ್ತಿದ್ದಾರೆ.

Manipur Assembly Polls: ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಇಂದು; 173 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
ಮಣಿಪುರ ಮತಗಟ್ಟೆ ಅಧಿಕಾರಿಗಳು
Follow us
| Updated By: Lakshmi Hegde

Updated on: Feb 28, 2022 | 8:08 AM

ಇಂದು ಮಣಿಪುರ ವಿಧಾನಸಭಾ ಚುನಾವಣೆ (Manipur Assembly Election 2022)ಮೊದಲ ಹಂತದ ಮತದಾನ ನಡೆಯುತ್ತಿದೆ. ಪೂರ್ವ ಇಂಫಾಲ್​​​, ಪಶ್ಚಿಮ ಇಂಫಾಲ್​, ಬಿಷ್ಣುಪುರ, ಚುರ್​ಚಾಂದ್​​ಪುರ, ಕಾಂಗೋಪ್ಕಿ ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ರಾಜ್ಯದಲ್ಲಿ ಒಟ್ಟಾರೆ 60 ವಿಧಾನಸಭಾ ಕ್ಷೇತ್ರಗಳಿದ್ದು, ಉಳಿದ ಕ್ಷೇತ್ರಗಳಲ್ಲಿ ಮಾರ್ಚ್​ 5ರಂದು ಮತದಾನವಿದೆ. ಮಾರ್ಚ್​ 10ಕ್ಕೆ ಮತ ಎಣಿಕೆ ನಡೆಯಲಿದೆ.

ಇಂದು 12,09,439 ಮತದಾರರು ಮತ ಹಾಕಲಿದ್ದು, ಅದರಲ್ಲಿ 5,80,607 ಪುರುಷರು, 6,28,657 ಮಹಿಳೆಯರು, 125 ತೃತೀಯಲಿಂಗಿಗಳು ಇದ್ದಾರೆ. 38 ಕ್ಷೇತ್ರಗಳಿಂದ 1721 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಣಿಪುರ ಮುಖ್ಯ ಚುನಾವಣಾಧಿಕಾರಿ ರಾಜೇಶ್​ ಅಗರ್​ವಾಲ್​ ತಿಳಿಸಿದ್ದಾರೆ. ಮತದಾನ ಬೆಳಗ್ಗೆ 7ಗಂಟೆಯಿಂದ ಶುರುವಾಗಿದ್ದು ಸಂಜೆ 4ರವರೆಗೆ ನಡೆಯಲಿದೆ. ಕೊರೊನಾ ಸೋಂಕು ತಗುಲಿ ಕ್ವಾರಂಟೈನ್​​ನಲ್ಲಿ ಇರುವವರೂ ಮತಗಟ್ಟೆಗೆ ಬಂದು ಮತ ಹಾಕಬಹುದು. ಆದರೆ ಇವರಿಗೆ ಮಧ್ಯಾಹ್ನ 3ರಿಂದ 4ಗಂಟೆವರೆಗೆ ಅವಕಾಶ ನೀಡಲಾಗಿದೆ.

1721ಮತಕೇಂದ್ರಗಳಲ್ಲಿ 381 ಮತಗಟ್ಟೆಗಳ ಉಸ್ತುವಾರಿ ಸಂಪೂರ್ಣ ಮಹಿಳೆಯರದ್ದೇ ಆಗಿದೆ. ಅಂದರೆ ಅಲ್ಲಿ ಎಲ್ಲ ಅಧಿಕಾರಿಗಳೂ ಮಹಿಳೆಯರೇ ಆಗಿದ್ದಾರೆ. ಇನ್ನು ಸೈಕೋಟ್​​ ಎಂಬ ಮತಗಟ್ಟೆಯನ್ನು ವಿಕಲಚೇತನರೇ ನಿರ್ವಹಣೆ ಮಾಡುತ್ತಿದ್ದಾರೆ. ಇಂದು ಚುನಾವಣೆ ಎದುರಿಸುತ್ತಿರುವ ಪ್ರಮುಖರ ಪೈಕಿ ಮಣಿಪುರ ಸಿಎಂ ಎನ್​.ಬಿರೆನ್​ ಸಿಂಗ್​ (ಹೈಜಾಂಗ್​), ವಿಧಾನಸಭೆ ಸ್ಪೀಕರ್​ ವೈ. ಖೇಮ್​ಚಾಂದ್​ ಸಿಂಗ್​ (ಸಿಂಗ್​​ಜಾಮೇಯ್​) ಉಪ ಮುಖ್ಯಮಂತ್ರಿ ಯಮ್ನಮ್​ ಜಾಯ್​​ಕುಮಾರ್​ ಸಿಂಗ್ (ಉರಿಪೊಕ್​), ಕಾಂಗ್ರೆಸ್​ ಮಣಿಪುರ ರಾಜ್ಯ ಮುಖ್ಯಸ್ಥ ಎನ್​. ಲೋಕೇಶ್​ (ನಾಂಬೋಲ್​​) ಇದ್ದಾರೆ. ಮಣಿಪುರ ಚುನಾವಣೆ ನಿಮಿತ್ತ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ.

ಪ್ರಧಾನಿ ಮೋದಿ ಟ್ವೀಟ್​

ಸಾಮಾನ್ಯವಾಗಿ ಎಲ್ಲ ಚುನಾವಣೆಗೂ ಪೂರ್ವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಣಿಪುರ ವಿಧಾನಸಭೆ ಚುನಾವಣೆಗೂ ಪೂರ್ವ ಟ್ವೀಟ್​ ಮಾಡಿ, ಹೆಚ್ಚೆಚ್ಚು ಜನರು ಮತ ಚಲಾಯಿಸಲು ಕರೆ ನೀಡಿದ್ದಾರೆ. ಅದರಲ್ಲೂ ಯುವಜನರು ಮತ್ತು ಮೊದಲ ಬಾರಿಗೆ ಮತ ಹಾಕುತ್ತಿರುವವರು ತಪ್ಪದೆ ಮತಚಲಾಯಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ