Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ

ನಮ್ಮ ಆಹಾರದಲ್ಲಿ ಪೌಷ್ಟಿಕಾಶ, ವಿಟಮಿನ್, ಜೀವಸತ್ವಗಳು ಇರುವುದು ಅತಿ ಮುಖ್ಯ. ಸದ್ಯ ನಾವಿಂದು ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ
ಜೂಸ್ ಥೆರಪಿ
Follow us
TV9 Web
| Updated By: ಆಯೇಷಾ ಬಾನು

Updated on: Feb 28, 2022 | 7:30 AM

ದಿನ ನಿತ್ಯದ ಜಂಜಾಟ, ಬದಲಾಗುತ್ತಿರುವ ಜೀವನ ಶೈಲಿಗಳಿಂದಾಗಿ(Lifestyle) ಮನುಷ್ಯನ ದೇಹದಲ್ಲಿ ಎಂದೂ ಕೇಳಿರದಂತಹ ಅದೆಷ್ಟೋ ಆರೋಗ್ಯ ಸಮಸ್ಯೆಗಳು(Health Issues) ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ ಅವನ ಆಹಾರ ಅಭ್ಯಾಸ ಅತಿ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ವೇಳೆ ಮಹಾರಾಜನಂತೆ ಊಟ ಮಾಡಬೇಕು. ಮಧ್ಯಾಹ್ನ ಮದ್ಯಮರ ಊಟ ಹಾಗೂ ರಾತ್ರಿಯ ವೇಳೆ ಭಿಕ್ಷುಕರಂತೆ ಊಟ ಮಾಡುವುದು ಯೋಗ್ಯವೆಂದು ಹಿರಿಯರು ಹೇಳುತ್ತಾರೆ. ನಮ್ಮ ಆಹಾರದಲ್ಲಿ ಪೌಷ್ಟಿಕಾಶ, ವಿಟಮಿನ್, ಜೀವಸತ್ವಗಳು ಇರುವುದು ಅತಿ ಮುಖ್ಯ. ಸದ್ಯ ನಾವಿಂದು ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

ಯಾವ ಕಾಯಿಲೆಗೆ ಯಾವ ಜೂಸ್ 1. ನೆನಪಿನ ಶಕ್ತಿ -ಕ್ಯಾರೆಟ್ ಜೂಸ್ 2. ರಕ್ತಹೀನತೆ -ಬೀಟ್ ರೂಟ್ ಜೂಸ್ 3. ಪಿತ್ತ -ಕ್ಯಾಬೇಜ್ ಜೂಸ್ 4. ಸಕ್ಕರೆ ಕಾಯಿಲೆ -ಬೀನ್ಸ್ ಅಥವಾ ನವಿಲುಕೋಸ್ ಜೂಸ್ 5. ಕಿಡ್ನಿ ಸ್ಟೋನ್ -ಬೂದ ಕುಂಬಳಕಾಯಿ ಜೂಸ್ 6. ತೂಕ ಕಡಿಮೆ ಮಾಡಲು -ಸವತೆಕಾಯಿ ಜೂಸ್ 7. ಮಲಬದ್ಧತೆ -ಆಲೂಗಡ್ಡೆ, ಮೂಲಂಗಿ ಅಥವಾ ಪೇರಲೆ ಹಣ್ಣಿನ ಜೂಸ್ 8. ಹೊಟ್ಟೆ ನೋವು -ನವಿಲು ಕೋಸು ಅಥವಾ ಬೂದಗುಂಬಳ ಕಾಯಿ ಜೂಸ್ 9. ಜ್ವರ -ಒಂದು ಕಪ್ ಬಿಸಿ ಬೀರಿನಲ್ಲಿ ಅರ್ಧ ನಿಂಬೆ ಹಣ್ಣು ಹಿಂಡಿ ಒಂದು ಟೀ ಚಮಚ ಜೇನು ತುಪ್ಪ ಹಾಕಿ ದಿನಕ್ಕೆ 3 ಸಲ ಕುಡಿಯಬೇಕು. 10. ತಲೆ ನೋವು -ಹಸಿ ಶುಂಠಿಯನ್ನು ಹಲ್ಲಿನಿಂದ ಕಚ್ಚಿ ಅದರ ರಸವನ್ನು ನುಂಗಬೇಕು 11. ಕ್ಯಾನ್ಸರ್ -ಪ್ರತಿದಿನ ಗೋಧಿ ಸಸಿ ಮತ್ತು ಕ್ಯಾರೆಟ್ ಜೂಸ್ ಕುಡಿಯಬೇಕು 12. ಹೆಚ್ಚಿನ ಉಷ್ಣಾಂಶ -ಸವತೆಕಾಯಿ ಜೂಸ್ 13. ಕಫ, ಕೆಮ್ಮು, ಧಮ್ಮು -ಎರಡು ಕ್ಯಾರೆಟ್ + 10 ಕರಿ ತುಳಸಿ ಎಲೆ +6 ಬೆಳುಳ್ಳಿ +ಅರಿಶಿಣ 14. ಮೂಲವ್ಯಾಧಿ -ಸವತೆಕಾಯಿ + ಮೂಲಂಗಿ ಜೂಸ್ 15. ಶೀತ, ನೆಗಡಿ -ಬಿಸಿ ನೀರಿನಲ್ಲಿ ಹಸಿ ಶುಂಠಿ ಜೂಸ್ 16. ಕಣ್ಣಿನ ಸಮಸ್ಯೆಗೆ – ಕ್ಯಾರೆಟ್ ಜೂಸ್ 17. ಸೌಂದರ್ಯಕ್ಕಾಗಿ -ಸವತೆಕಾಯಿ ಜೂಸ್ 18. ರಕ್ತ ಶುದ್ಧೀಕರಣ -ಬೀಟ್ ರೂಟ್ ಅಥವಾ ಹಾಗಲಕಾಯಿ ಜೂಸ್ 19. ಋತುಚಕ್ರ ಸಮಸ್ಯೆ – ಕ್ಯಾರೆಟ್ ಜೂಸ್ ಮತ್ತು ಬೀಟ್ ರೂಟ್ ಜೂಸ್ 20. ಮೂರ್ಛೆ ರೋಗ -ಬಾಳೆದಿಂಡಿನ ಜೂಸ್ + ಎಳನೀರು

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ; ಇಲ್ಲಿದೆ ತಜ್ಞರ ಸಲಹೆ

ಅರಿಶಿಣ ಹಾಲಿನಲ್ಲಿ ಅಡಗಿದೆ ಆರೋಗ್ಯ ಪ್ರಯೋಜನಗಳು