Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಯಾಮ ಮಾಡುವುದಕ್ಕೆ ಸೋಮಾರಿತನವೇ? ಉತ್ತಮ ಆರೋಗ್ಯಕ್ಕಾಗಿ ಈ ಸರಳ ಮಾರ್ಗವನ್ನು ಅನುಸರಿಸಿ

Health Tips: ವಿವಿಧ ಆರೋಗ್ಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ ಆರೋಗ್ಯಕರವಾಗಿರುವುದು ಬಹಳ ಅವಶ್ಯಕ. ಆರೋಗ್ಯವಾಗಿರುವುದು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ವ್ಯಾಯಾಮ ಮಾಡುವುದಕ್ಕೆ ಸೋಮಾರಿತನವೇ? ಉತ್ತಮ ಆರೋಗ್ಯಕ್ಕಾಗಿ ಈ ಸರಳ ಮಾರ್ಗವನ್ನು ಅನುಸರಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Jan 20, 2022 | 7:11 AM

ಆರೋಗ್ಯವಾಗಿರಲು ನಿಮಗೆ ಸಮಯ, ಶಕ್ತಿ ಮತ್ತು ತಾಳ್ಮೆ ಬೇಕು. ನಿಮ್ಮ ಜೀವನಶೈಲಿಯಲ್ಲಿ( Lifestyle) ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ, ನೀವು ಫಿಟ್ ಆಗಿ ಉಳಿಯಬಹುದು. ಕೇವಲ ಒಂದು ದಿನದಲ್ಲಿ ಯಾವುದೇ ವ್ಯತ್ಯಾಸವನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ನಿಯಮಿತವಾಗಿ ಈ ಆರೋಗ್ಯಕರ ಅಭ್ಯಾಸಗಳನ್ನು(Habits) ಅನುಸರಿಸಿದರೆ ನೀವು ಖಂಡಿತವಾಗಿಯೂ ವ್ಯತ್ಯಾಸವನ್ನು ನೋಡುತ್ತೀರಿ. ವಿವಿಧ ಆರೋಗ್ಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ ಆರೋಗ್ಯಕರವಾಗಿರುವುದು ಬಹಳ ಅವಶ್ಯಕ. ಆರೋಗ್ಯವಾಗಿರುವುದು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಜತೆಗೆ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ನೀವು ವ್ಯಾಯಾಮ(exercise) ಮಾಡಲು ತುಂಬಾ ಸೋಮಾರಿಯಾಗಿದ್ದರೆ, ರನ್ನಿಂಗ್​, ಸೈಕ್ಲಿಂಗ್ ಮತ್ತು ಆರೋಗ್ಯಕರ ಆಹಾರದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು.

ರನ್ನಿಂಗ್​

ರನ್ನಿಂಗ್ ನೀವು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ​ ಮಾಡಬಹುದಾದ ವ್ಯಾಯಾಮವಾಗಿದೆ. ಪ್ರತಿದಿನ ಓಡುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಇದು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾರ್ಡಿಯೋ ವ್ಯಾಯಾಮವಾಗಿರುವುದರಿಂದ, ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ರನ್ನಿಂಗ್​ ಲಾಭವನ್ನು ಪಡೆಯಲು ನೀವು ಒಂದು ಗಂಟೆ ದೀರ್ಘವಾಗಿ ರನ್​ ಮಾಡಬೇಕಾಗಿಲ್ಲ. ಕೇವಲ 15 ನಿಮಿಷಗಳ ರನ್ನಿಂಗ್​ ಅಥವಾ ಜಾಗಿಂಗ್ ಮಾಡಿ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಓಟವು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಬೇಕಾದ ವ್ಯಾಯಾಮವಾಗಿದೆ.

ಸೈಕ್ಲಿಂಗ್

ಸೈಕ್ಲಿಂಗ್ ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಮತ್ತೊಂದು ವ್ಯಾಯಾಮವಾಗಿದೆ. ಈ ಚಟುವಟಿಕೆಯನ್ನು ಆನಂದಿಸುವ ಮೂಲಕ ನೀವು ನಿಮ್ಮನ್ನು ಫಿಟ್ ಆಗಿ ಇರಿಸಬಹುದು. ನೀವು ಯಾವುದಾದರೂ ಕೆಲಸಕ್ಕಾಗಿ ಹೊರಗೆ ಹೋದಾಗ ನಿಮ್ಮ ಸೈಕಲ್‌ನಲ್ಲಿ ಹೋಗಿ. ಸೈಕ್ಲಿಂಗ್ ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ತುಂಬಾ ಒತ್ತಡವನ್ನು ಅನುಭವಿಸಿದರೆ, ನೀವು ಸ್ವಲ್ಪ ಸಮಯದವರೆಗೆ ಸೈಕ್ಲಿಂಗ್‌ಗೆ ಹೋಗಬಹುದು. ಈ ಚಟುವಟಿಕೆಯು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ

ಸಕ್ಕರೆಯ ಅತಿಯಾದ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೆಚ್ಚು ಸಕ್ಕರೆ ಸೇವನೆಯು ನಿಮ್ಮ ಆರೋಗ್ಯ, ಚರ್ಮ ಮತ್ತು ಕೂದಲಿಗೆ ಹಾನಿಕಾರಕವಾಗಿದೆ. ಆದ್ದರಿಂದ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.

ಧೂಮಪಾನ ತ್ಯಜಿಸು

ಧೂಮಪಾನವು ಒಳ್ಳೆಯ ಅಭ್ಯಾಸವಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದನ್ನು ತಿಳಿದ ಅನೇಕರು ಸಹ ಧೂಮಪಾನ ಮಾಡುತ್ತಾರೆ. ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಭ್ಯಾಸವನ್ನು ತೊಡೆದುಹಾಕುವುದು ಅವಶ್ಯಕ.

ಆರೋಗ್ಯಕರ ಆಹಾರ ಕ್ರಮ

ಆಹಾರದಲ್ಲಿ ಬಣ್ಣಬಣ್ಣದ ತರಕಾರಿಗಳನ್ನು ಸೇರಿಸಿ. ಇದಲ್ಲದೆ, ಋತುಮಾನದ ಹಣ್ಣುಗಳು ಮತ್ತು ಡ್ರೈ ಫ್ರುಟ್ಸ್​ನಂತಹ ಆಹಾರಗಳನ್ನು ಸೇವಿಸಿ. ಇದು ನಿಮ್ಮನ್ನು ಆರೋಗ್ಯವಾಗಿರಿಸಲು ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಕ್ತದಾನ ಮಾಡುವ ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

New Year 2022 Celebration: ನಿನ್ನೆಯ ಪಾರ್ಟಿ ಅಮಲು ಇನ್ನೂ ಕಡಿಮೆಯಾಗಲಿಲ್ಲವೇ? ಈ ವಿಧಾನ ಅನುಸರಿಸಿ ಮತ್ತೆ ಕೆಲಸಕ್ಕೆ ಮರಳಿ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ