AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ವಿಟಮಿನ್​ಗಳ ಕೊರತೆಯಿಂದ ಆಗುವ ದೈಹಿಕ ಸಮಸ್ಯೆಗಳೇನು?

ಹಸಿವಿಗೊಂದು ಆಹಾರ ಅಂತ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುತ್ತಾರೆ. ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಆಹಾರದ ಬಗ್ಗೆ ಗಮನಕೊಡದೆ ಇರುವವರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ವಿವಿಧ ವಿಟಮಿನ್​ಗಳ ಕೊರತೆಯಿಂದ ಆಗುವ ದೈಹಿಕ ಸಮಸ್ಯೆಗಳೇನು?
ಸಾಂಕೇತಿಕ ಚಿತ್ರ
TV9 Web
| Edited By: |

Updated on: Feb 28, 2022 | 2:25 PM

Share

ಶರೀರ ಮತ್ತು ಮನಸ್ಸು ಆರೋಗ್ಯಕರವಾಗಿರಬೇಕಾದರೆ ಪೌಷ್ಟಿಕ ಆಹಾರ (Food) ತುಂಬಾ ಮುಖ್ಯವಾಗುತ್ತದೆ. ಈಗಿನ ಜೀವನ ಶೈಲಿಯಲ್ಲಿ (Life Style) ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಹಸಿವಿಗೊಂದು ಆಹಾರ ಅಂತ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುತ್ತಾರೆ. ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಆಹಾರದ ಬಗ್ಗೆ ಗಮನಕೊಡದೆ ಇರುವವರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆರೋಗ್ಯವಾಗಿರಲು ಮತ್ತು ಕೆಲ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಇದೇನೇ ಇರಲಿ, ವಿವಿಧ ವಿಟಮಿನ್ ಕೊರತೆಯಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತ ಸಮಸ್ಯೆಗಳನ್ನು ಇಲ್ಲಿ ತಿಳಿಸಲಾಗಿದೆ.

  1. ವಿಟಮಿನ್ A ಕೊರತೆಯಿಂದಾಗುವ ಸಮಸ್ಯೆಗಳಿವು: * ಕಡಿಮೆ ಬೆಳಕಿನಲ್ಲಿ ಕಣ್ಣಿನ ಸಮಸ್ಯೆ ಕಾಡುತ್ತದೆ. ಅಂದರೆ ಕಣ್ಣು ಕಾಣುವುದಿಲ್ಲ. * ಚರ್ಮ ತುರಿಕೆ ಆಗುತ್ತದೆ. * ಕಣ್ಣು ಒಣಗುವುದು.
  2. ವಿಟಮಿನ್ B2 ಮತ್ತು B6 ಕೊರತೆಯಿಂದಾಗುವ ಸಮಸ್ಯೆಗಳಿವು: * ಬಾಯಿಯಲ್ಲಿ ಹುಣ್ಣಾಗುತ್ತದೆ. * ಬಾಯಿಯ ಬದಿಯಲ್ಲಿ ಬಿರುಕಾಗುತ್ತದೆ. * ತಲೆಯಲ್ಲಿ ಹೊಟ್ಟಾಗುತ್ತದೆ. * ತಲೆಯಲ್ಲಿ ಅಲರ್ಜಿ ಆಗುತ್ತದೆ. * ತಲೆ ತುರಿಕೆ ಆಗುತ್ತದೆ.
  3. ವಿಟಮಿನ್ B7 ಕೊರತೆಯಿಂದಾಗುವ ಸಮಸ್ಯೆಗಳಿವು: * ಉಗುರುಗಳು ಸುಲಭವಾಗಿ ಮುರಿಯುತ್ತದೆ. * ಸುಸ್ತು ದೀರ್ಘಾವಧಿ ವರೆಗೆ ಇರುತ್ತದೆ. * ಸ್ನಾಯು ಸೆಳೆಯವಾಗುತ್ತದೆ. * ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವ ಸಂವೇದನೆ ಆಗುತ್ತದೆ.
  4. ವಿಟಮಿನ್ B12 ಕೊರತೆಯಿಂದಾಗುವ ಸಮಸ್ಯೆಗಳಿವು: * ಯಾವಾಗಲು ತಲೆ ನೋವಾಗುತ್ತದೆ. * ಚರ್ಮ ತೆಳುವಾಗುತ್ತದೆ. ಹಾಗೂ ಹಳದಿ ಆಗುವುದು. * ಬಾಯಿಯಲ್ಲಿ ಬಿರುಕುಗಳು ಮತ್ತು ಉರಿಯೂತ ಕಾಣಿಸುತ್ತದೆ. * ಆಯಾಸ ದೀರ್ಘಕಾಲದವರೆಗೂ ಇರುತ್ತದೆ.
  5. ವಿಟಮಿನ್ C ಕೊರತೆಯಿಂದಾಗುವ ಸಮಸ್ಯೆಗಳಿವು: * ಒಸಡುಗಳಲ್ಲಿ ರಕ್ತಸ್ರಾವ ಆಗುತ್ತದೆ. * ಗಾಯ ನಿಧಾನವಾಗಿ ಗುಣವಾಗುವುದು. * ಚರ್ಮ ಒಣಗುತ್ತದೆ. * ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. * ಹಿಮ್ಮಡಿಗಳು ಒಡೆಯುತ್ತದೆ.
  6. ವಿಟಮಿನ್ C ಕೊರತೆಯಿಂದಾಗುವ ಸಮಸ್ಯೆಗಳಿವು: * ತೋಳುಗಳು ಮತ್ತು ಕಾಲುಗಳಲ್ಲಿ ಸಂವೇದನೆ (sensation) ಕಡಿಮೆಯಾಗುತ್ತದೆ. * ಸ್ನಾಯುಗಳು ದುರ್ಬಲ ಆಗುತ್ತದೆ. * ದೃಷ್ಟಿ ಕಡಿಮೆ ಆಗುತ್ತದೆ.

ಇದನ್ನೂ ಓದಿ

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್