Sign In

By signing in or creating an account, you agree with Associated Broadcasting Company's Terms & Conditions and Privacy Policy.

Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ

ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.

Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ
ಪಿತ್ತಜನಕಾಂಗ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on: Feb 27, 2022 | 4:29 PM

ದೇಹದ ಎಲ್ಲಾ ಅಂಗಗಳೂ ಅಚ್ಚುಕಟ್ಟಾಗಿ ಕಾರ್ಯನಿರ್ಹಿಸಿಬಿಟ್ಟರೆ ಆರೊಗ್ಯವಾಗಿರಬಹುದು. ಹೀಗಾಗಿ ಆರೋಗ್ಯ(Health) ವನ್ನು ಕಾಪಾಡಿಕೊಳ್ಳಲು ಜೀವನಶೈಲಿ ಮತ್ತು ಆಹಾರಾಭ್ಯಾಸ ಮುಖ್ಯವಾಗಿರುತ್ತದೆ.  ದೇಹದಲ್ಲಿ ಎಲ್ಲಾ ಅಂಗಗಳೂ ಮುಖ್ಯವೇ. ಅದರಲ್ಲಿ ಯಕೃತ್ ​ ಅಥವಾ ಲಿವರ್ (Liver)​ ಕೂಡ ಒಂದು. ದೇಹದಲ್ಲಿರುವ ಕೊಬ್ಬನ್ನು ಶೇಖರಿಸಿ ಚಯಾಪಯಗೊಳಿಸುವ ಪ್ರಮುಖ ಅಂಗ. ಕೊಬ್ಬು ಸುರಕ್ಷಿತ ಮಟ್ಟವನ್ನು ಮಿರಿದಾಗ ಯಕೃತ್ತಿನ ಕಾರ್ಯ ಚಟುವಟಿಕೆ ಹದಗೆಡುತ್ತದೆ. ಅದನ್ನೇ ಪಿತ್ತಜನಕಾಂಗದ ಕಾಯಿಲೆ ಎನ್ನುತ್ತಾರೆ. ಆರಂಭದಲ್ಲಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಕ್ರಮೇಣ ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು.

ಯಕೃತ್​ ಪ್ರತಿದಿನ 250 ಗ್ಯಾಲನ್​ ರಕ್ತವನ್ನು ಶೋಧಿಸುತ್ತದೆ. ಯಕೃತ್​ ಒಮ್ಮೆ ಹಾನಿಗೊಳಗಾದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗಬಹದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಯಕೃತ್ತಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಅತಿಯಾದ ತೂಕ ನಷ್ಟ: ಕೊಲೊರೆಕ್ಟಲ್​ ಕ್ಯಾನ್ಸರ್​ನಂತಹ ಕಾಯಿಲೆಗೆ ಯಕೃತ್​​ ತುತ್ತಾದಾಗ ದೇಹದಲ್ಲಿ ಅತಿಯಾದ ತೂಕ ನಷ್ಟವಾಗುತ್ತದೆ. ಏಕೆಂದರೆ ಜೀರ್ಣಕ್ರಿಯೆಯಲ್ಲಿ ಯಕೃತ್​ ಪ್ರಮುಖ ಪಾತ್ರವಹಿಸುತ್ತದೆ. ಇದು ಹಾನಿಯಾದಾಗ ಹಸಿವೆಯಾಗದೆ ಇರಬಹುದು, ಇದರಿಂದ ದೇಹದ ತೂಕ ನಷ್ಟವಾಗುತ್ತದೆ.

ಚರ್ಮ ಮತ್ತು ಕಣ್ಣು ಹಳದಿ: ಯಕೃತ್ತಿನ ಕಾಯಿಲೆ ಅಥವಾ ಯಕೃತ್​ ಹಾನಿಗೊಳಗಾದಾಗ ದೇಹದ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಪಿತ್ತಜನಕಾಂಗವು ಸರಿಯಾದ ಕ್ರಮದಲ್ಲಿ ಪಿತ್ತರಸವನ್ನು ತೊಡೆದುಹಾಕಲು ವಿಫಲವಾದಾಗ ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಕಿಬ್ಬೊಟ್ಟೆಯ ನೋವು: ಯಕೃತ್​ ಹಾನಿಗೊಳಗಾದ ಸಂದರ್ಭದಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಪಕ್ಕೆಲುಬು ಮತ್ತು ಬಲಭಾಗದ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ವೇಳೆಯಲ್ಲಿಯೂ ಕೆಲವೊಮ್ಮೆ ಸಮಸ್ಯೆಗಳು ಕಾಣಸಿಕೊಳ್:ಳಬಹುದು.

ದೀರ್ಘಕಾಲದ ಆಯಾಸ: ವ್ಯಾಯಾಮ ಮಾಡಿದ ನಂತರ ಆಯಾಸ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಯಕರತ್ತಿನ ಸಮಸ್ಯೆ ಇದ್ದಾಗ ದೀರ್ಘಕಾಲದ ಆಯಾಸ ಕಾಣಿಸಿಕೊಳ್ಳುತ್ತದೆ. ತೀವ್ರವಾದ ನೋವಿನಿಂದ ಸದಾ ಕಾಲ ಆಯಾಸ ಎನಿಸುತ್ತದೆ.  ದಿನವಿಡೀ ಆಯಾಸ ಎನಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.

ಇದನ್ನೂ  ಓದಿ:

ಆಯುರ್ವೇದದಲ್ಲಿದೆ ಥೈರಾಯಿಡ್​ಗೆ ಸರಳ ಪರಿಹಾರ: ಇಲ್ಲಿದೆ ಮಾಹಿತಿ