IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025 Mumbai Indians: ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 8 ಪಂದ್ಯಗಳನ್ನಾಡಿದ್ದು, ಈ ವೇಳೆ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ 8 ಅಂಕಗಳನ್ನು ಕಲೆಹಾಕಿರುವ ಮುಂಬೈ ಇಂಡಿಯನ್ಸ್ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇದೀಗ 9ನೇ ಪಂದ್ಯಕ್ಕಾಗಿ ಮುಂಬೈ ಪಡೆ ಹೈದರಾಬಾದ್ನತ್ತ ಪ್ರಯಾಣ ಬೆಳೆಸಿದೆ.
IPL 2025: ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ತಡವಾಗಿ ಬಂದ ಆಟಗಾರರಿಗೆ ಶಿಕ್ಷೆ ನೀಡುವ ಸಂಪ್ರದಾಯವಿದೆ. ಅಂದರೆ ನಿಗದಿತ ಸಮಯದ ವೇಳೆ ಬಸ್ಗೆ ಬರದಿದ್ದರೆ ಅಥವಾ ಅಭ್ಯಾಸದ ವೇಳೆ ತಡವಾಗಿ ಆಗಮಿಸಿದರೆ ಅಂತಹ ಆಟಗಾರರಿಗೆ MI- ಸೂಪರ್‌ಹೀರೋ ಥೀಮ್‌ನ ಡ್ರೆಸ್ ಹಾಕಿಸಲಾಗುತ್ತದೆ.
ಅದರಂತೆ ಈ ಬಾರಿಯ ಐಪಿಎಲ್ ವೇಳೆ ಮೂವರು ಆಟಗಾರರು ತಡವಾಗಿ ಬಂದು MI- ಸೂಪರ್‌ಹೀರೋ ಡ್ರೆಸ್ ಶಿಕ್ಷೆಗೆ ಒಳಗಾಗಿದ್ದಾರೆ. ಅದರಂತೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರರಾದ ತಿಲಕ್ ವರ್ಮಾ, ವಿಲ್ ಜ್ಯಾಕ್ಸ್ ಮತ್ತು ರಾಜ್ ಅಂಗದ್ ಬಾವಾ MI- ಸೂಪರ್‌ಹೀರೋ ಥೀಮ್‌ನ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ತಡವಾಗಿ ಬಂದ ಮೂವರು ಸೂಪರ್‌ಹೀರೋಗಳ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿರುವ ಮುಂಬೈ ಇಂಡಿಯನ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏಪ್ರಿಲ್ 23 ರಂದು ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾನಷಲ್ ಸ್ಟೇಡಿಯಂನಲ್ಲಿ ನಡೆಯಲಿದೆ.