AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುರ್ವೇದದಲ್ಲಿದೆ ಥೈರಾಯಿಡ್​ಗೆ ಸರಳ ಪರಿಹಾರ: ಇಲ್ಲಿದೆ ಮಾಹಿತಿ

ಆಯುರ್ವೇದದಲ್ಲಿ ಥೈರಾಯಿಡ್​ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸರಳವಾಗಿ ಜೀವನಶೈಲಿಯ ಕೆಲವು ಅಬ್ಯಾಸಗಳಿಂದ ಥೈರಾಯಿಡ್​ ಅನ್ನು ನಿಯಂತ್ರಿಸಬಹುದಾಗಿದೆ ಇಲ್ಲಿದೆ ನೋಡಿ ಮೂರು ಸರಳ ಸೂತ್ರ.

ಆಯುರ್ವೇದದಲ್ಲಿದೆ ಥೈರಾಯಿಡ್​ಗೆ ಸರಳ ಪರಿಹಾರ: ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 27, 2022 | 1:14 PM

ಜೀವಕ್ರಿಯೆಗಳಿಗೆ ಅತಿ ಮುಖ್ಯವಾದ ಗ್ರಂಥಿ ಥೈರಾಯಿಡ್​ ಗ್ರಂಥಿ (Thyroid). ಹೀಗಾಗಿ ಥೈರಾಯಿಡ್​ ಸಮಸ್ಯೆ ಕಾಣಿಸಕೊಂಡರೆ ನಿರ್ಲಕ್ಷಿಸುವುದು ಒಳಿತಲ್ಲ. ಥೈರಾಯ್ಡ್ ಗ್ರಂಥಿಯು ಚಿಟ್ಟೆ-ಆಕಾರದ ಗ್ರಂಥಿಯಾಗಿದ್ದು ಅದು ಕತ್ತಿನ ಕೆಳಗಿನ ಮುಂಭಾಗದಲ್ಲಿದೆ. ಇದು ಚಯಾಪಚಯ, ಬೆಳವಣಿಗೆ ಮತ್ತು ಬೆಳವಣಿಗೆ ಮತ್ತು ದೇಹದ ಉಷ್ಣತೆಯ ಮೇಲೆ ಪ್ರಭಾವ ಬೀರುತ್ತದೆ. ಆರಂಭದ ಹಂತದಲ್ಲಿ ಥೈರಾಯಿಡ್​ ಸಮಸ್ಯೆ ಇರುವುದು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಆರೋಗ್ಯದಲ್ಲಿ ಚೂರು ಏರು ಪೇರಾದರೂ ಗಮನಹರಿಸುವುದು ಅಗತ್ಯವಾಗಿದೆ.  ಥೈರಾಯ್ಡ್ ಅಸಮತೋಲನಗೊಂಡರೆ, ನಿಮ್ಮ ದೇಹದ ಎಲ್ಲಾ ಕಾರ್ಯಗಳು ಪರಿಣಾಮ ಬೀರುತ್ತವೆ. ಚಯಾಪಚಯಕ್ರಿಯೆ, ದೇಹದ ಉಷ್ಣತೆ,  ತೂಕ ಹೆಚ್ಚಾಗುವುದು ಅಥವಾ ನಷ್ಟವಾಗುವುದು, ಮುಟ್ಟಿನ ದಿನಗಳಲ್ಲಿ ಏರಪೇರು, ಕೂದಲಿನ ಆರೋಗ್ಯ, ಮನಸ್ಥಿತಿ ಸೇರಿದಂತೆ ಹೃದಯ ಬಡಿತದಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ.

ಆಯುರ್ವೇದದಲ್ಲಿ(Ayurveda)ಥೈರಾಯಿಡ್​ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ ಡಾ ದೀಕ್ಷಾ ಭಾವಸರ್. ಈ ಕುರಿತು ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ. ಸರಳವಾಗಿ ಜೀವನಶೈಲಿಯ ಕೆಲವು ಅಬ್ಯಾಸಗಳಿಂದ ಥೈರಾಯಿಡ್​ ಅನ್ನು ನಿಯಂತ್ರಿಸಬಹುದಾಗಿದೆ ಇಲ್ಲಿದೆ ನೋಡಿ ಮೂರು ಸರಳ ಸೂತ್ರ

  1. ನಿಮ್ಮ ತೋರುಬೆರಳು ಮತ್ತು ಹೆಬ್ಬೆರಳಿನ ನಡುವೆ ಸಂಪರ್ಕಿಸುವ ಬಿಂದುವನ್ನು ಹುಡುಕಿ. ನಿಮ್ಮ ಎರಡೂ ಕೈಗಳಿಗೆ ನಿಧಾನವಾಗಿ ಒತ್ತಿರಿ. ನೀವು ಪ್ರತಿದಿನ ಈ ಅಭ್ಯಾಸವನ್ನು ರೂಢಿಸಿಕೊಂಡರೆ ಥೈರಾಯಿಡ್​ ಸಮಸ್ಯೆ ಕ್ರಮೇಣ ಹತೋಟಿಗೆ ಬರುತ್ತದೆ
  2. ಉಜ್ಜಯಿ ಪ್ರಾಣಾಯಾಮ ಮತ್ತು ಅನುಲೋಮ್ ವಿಲೋಮ್ ಪ್ರಾಣಾಯಾಮ ಥೈರಾಯಿಡ್​ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  3. ಸರಿಯಾದ ಪ್ರಮಾಣದ ನಿದ್ದೆ ಥೈರಾಯಿಡ್​ ಸಮಸ್ಯೆಗೆ ಪರಿಹಾರ ನೀಡುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯೂ ಸರಿಯಾಗುತ್ತದೆ

ಥೈರಾಯಿಡ್​ ಗ್ರಂಥಿ ದೇಹದ ವಿವಿಧ ಭಾಗಗಳ ಮೇಲೆ, ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿದೆ ಆ ಬಗ್ಗೆ ಮಾಹಿತಿ

ಚಯಾಪಚಯ ಕ್ರಿಯೆ: ಥೈರಾಯಿಡ್​ ಗ್ರಂಥಿಯು ಚಯಾಪಚಯ ಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬಿರುತ್ತದೆ. ಥೈರಾಯಿಡ್​ ಗ್ರಂಥಿಯು ನೀವು ತಿನ್ನುವ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಪೋಷಕಾಂಶಗಳನ್ನು ದೇಹ ಹೋರಿಕೊಂಡು ಶಕ್ತಿಯ ಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.

ಕೂದಲಿನ  ಬೆಳವಣಿಗೆ: ಕೂದಲಿನ ಬೆಳವಣಿಗೆಗೆ ನೆರವಾಘುವ ಕಬ್ಬಿಣ, ಕ್ಯಾಲ್ಸಿಯಂ, ಮುಂತಾದ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳು ಥೈರಾಯಿಡ್​ ಸಹಾಯ ಮಅಡುತ್ತದೆ.

ದೇಹದ ತೂಕ: ಥೈರಾಯಿಡ್​ ದೇಹದ ತೂಕವನ್ನು ಸಮತೂಲನದಲ್ಲಿಡಲು ಸಹಾಯ ಮಾಡುತ್ತದೆ. ನಿಮಗೆ ಥೈರಾಯಿಡ್​ ಸಮಸ್ಯೆ ಎದುರಾಗಿದ್ದರೆ ದೇಹದಲ್ಲಿ ತೂಕ ನಷ್ಟ ಅಥವಾ ಅತಿಯಾದ ತೂಕ  ಹೆಚ್ಚಾಗಲು ಕಾರಣವಾಗುತ್ತದೆ.

ಋತುಚಕ್ರ: ಅನಿಯಮಿತ ಮುಟ್ಟಿನ ದಿನಗಳನ್ನು ನೀವು ಅನುಭವಿಸುತ್ತಿದ್ದರೆ ಅದಕ್ಕೆ ಥೈರಾಯಿಡ್​ ಅಸಮತೋಲನವೂ ಕಾರಣವಾಗುತ್ತದೆ. ಹೀಗಾಗಿ ಥೈರಾಯುಡ್​ಅನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.

ದೇಹದ ಉಷ್ಣತೆ ಮತ್ತು ಮಾನಸಿಕ ಆರೋಗ್ಯ: ಅಸಮತೋಲಿತ ಥೈರಾಯಿಡ್​ ನಿಂದ ದೇಹದ ಉಷ್ಟಣತೆಯಲ್ಲಿ ಏರುಪೇರಾಗಬಹದು. ದೇಹದ ಉಷ್ಟಣತೆಯನ್ನು ಕಡಿಮೆ ಮಾಡಿ ಚಳಿಯ ಅನುಭವ ನೀಡಬಹುದು. ಅಲ್ಲದೆ ಥೈರಾಯಿಡ್​ ಹಾರ್ಮ್​ನಗಳನ್ನು ನಿಯಂತ್ರಿಸುವುದರಿಂದ ನಿಮ್ಮ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹದು. ಆದ್ದರಿಂದ ಥೈರಾಯಿಡ್​ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.

ಗರ್ಭಧಾರಣೆ: ಕೆಲವೊಮ್ಮೆ ಥೈರಾಯಿಡ್​​ ಸಮಸ್ಯೆ ಗರ್ಭಧಾರಣೆಯ ಮೇಲೆಯೂ ಪರಿಣಾಮ ಬೀರುತ್ತದೆ. ಥೈರಾಯಿಡ್​ ಸರಿಯಾಗಿದ್ದರೆ ಗರ್ಭಧಾರಣಗೆ ಸಮಸ್ಯೆಯಾಗದು. ಹೀಗಾಗಿ ಥೈರಾಯಿಡ್​ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಇದನ್ನೂ ಓದಿ:

PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ಯಾ? ಈ ಕ್ರಮಗಳನ್ನು ಅನುಸರಿಸಿ ದೇಹದ ತೂಕ ಇಳಿಸಿಕೊಳ್ಳಿ

Published On - 1:12 pm, Sun, 27 February 22

ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್