AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು

ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ.

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು
ಶಿವ
TV9 Web
| Edited By: |

Updated on:Feb 28, 2022 | 1:30 PM

Share

ಭಾರತದಲ್ಲಿ ಹಿಂದೂ ಧರ್ಮದ ಪ್ರತೀ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಅದರದ್ದೇ ಆದ ಹಿನ್ನೆಲೆ ಕಥೆಯಿದೆ. ಅದೇ ರೀತಿ ಶಿವರಾತ್ರಿ (Shivratri) ಕೂಡಾ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ. ಜಾಗರಣೆ ಮಾಡುವಾಗ ಕನ್ನಡದ ಈ ಹಾಡುಗಳನ್ನು ಹಾಡುವ ಮೂಲಕ ಶಿವನನ್ನು ಪೂಜಿಸಬಹುದು.

* ಮಹಾಪ್ರಾಣ ದೀಪಂ: ಈ ಹಾಡನ್ನು ಕೇಳಿದವರಿಗೆ ಈ ಹಾಡಿನ ಶಕ್ತಿ ತಿಳಿದಿರುತ್ತದೆ. ಮಹಾಪ್ರಾಣ ದೀಪಂ ಎಂಬ ಸಾಹಿತ್ಯದಿಂದ ಆರಂಭವಾಗುವ ಈ ಹಾಡು ಕಿವಿಗೆ ಬೀಳುತ್ತಿದ್ದಂತೆ ಬೇರೆ ಯಾವ ಯೋಚನೆಗಳು ಬರಲ್ಲ. ಶಿವನ ಬಳಿಯೇ ಹೋಗಿ ಬದ್ದಂತೆ ಅನುಭವ ಆಗುತ್ತದೆ. ಗಟ್ಟಿ ಧ್ವನಿಯಲ್ಲಿ ಮೊಳಗುವ ಈ ಹಾಡನ್ನು ಆಲಿಸಿದಾಗ ರೋಮಗಳು ನೆಟ್ಟಗಾಗುತ್ತವೆ. ಕನ್ನಡ ಹಾಡಿನ ಪೈಕಿ ಈ ಹಾಡು ಹೆಚ್ಚು ಪ್ರಸಿದ್ಧಿ ಪಡೆದಿದೆ.

* ಶಿವ ಶಿವ ಎಂದರೆ ಭಯವಿಲ್ಲ: ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠವೇ ಕರ್ನಾಟಕ ಪಾಲಿಗೆ ಉಡುಗೊರೆ. ಅವರ ಧ್ವನಿಯಲ್ಲಿ ಮೂಡಿಬರುವ ಹಾಡುಗಳೆಲ್ಲವೂ ಜನಪ್ರಿಯತೆ ಪಡೆದಿವೆ. ಅದರಲ್ಲಿ ಕೆಲವೊಂದು ಸೂಪರ್ ಹಿಟ್ ಆಗಿವೆ. ಈ ಸಾಲಿಗೆ ಶಿವ ಶಿವ ಎಂದರೆ ಭಯವಿಲ್ಲ ಎಂಬ ಹಾಡು ಸೇರುತ್ತದೆ. ಶಿವನ ಸ್ಮರಿಸುವ ಭಕ್ತರಿಗೆ ಈ ಹಾಡು ಸೂಕ್ತವಾಗಿದೆ. ಸದ್ಯ ಶಿವರಾತ್ರಿ ಸಮೀಪಿಸುತ್ತಿರುವ ಕಾರಣ ಜಾಗರಣೆ ವೇಳೆ ಈ ಹಾಡನ್ನು ಹೇಳಬಹುದು.

* ಪಾಹಿ ಮಹೇಶ: ಬ್ರಹ್ಮಾಂಡ ಒಡೆಯನಾದ ಶಿವನಿಗೆ ಸಮರ್ಪಿತವಾದ ಮತ್ತೊಂದು ಹಾಡೆಂದರೆ ಪಾಹಿ ಮಹೇಶ. ಈ ಹಾಡನ್ನು ಶಿವರಾತ್ರಿ ದಿನದಂದು ಶಿವನನ್ನು ಸ್ಮರಿಸುತ್ತಾ ಹೇಳಬಹುದು.

* ಕೈಲಾಸ ಗಿರಿವಾಸ: ಜಾಗರಣೆಯಲ್ಲಿ ಶಿವನ ಸ್ಮರಿಸುತ್ತಾ ಎಲ್ಲರೂ ಕೂಡಿ ಭಜನೆ ಮಾಡುತ್ತಾರೆ. ಭಜನೆ ವೇಳೆ ಶಿವನ ಯಾವ ಹಾಡುಗಳು ಹೇಳಬೇಕು ಎಂಬ ಗೊಂದಲವೂ ಇರುತ್ತೆ. ಶಿವನಿಗೆ ಸಮರ್ಪಿತವಾದ ಇನ್ನೊಂದು ಹಾಡೆಂದರೆ ಕೈಲಾಸ ಗಿರಿವಾಸ. ಈ ಹಾಡು ಹೇಳುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಬಹುದು.

* ಜಯ ಜಯ ಸಾಂಬಾಸಧಶಿವ ಎಸ್ ಜಾನಕಿ ಹಾಡಿರುವ ಜಯ ಜಯ ಸಾಂಬಾಸಧಶಿವ ಹಾಡು ಭಕ್ತಿ ಪ್ರಧಾನದಿಂದ ಕೂಡಿದೆ. ಭಜನೆಗೆ ಈ ಹಾಡು ಸೂಕ್ತವಾಗಿದೆ.

ಇದನ್ನೂ ಓದಿ

Maha Shivaratri 2022: ಶಿವರಾತ್ರಿ ಉಪವಾಸಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ! ರೈತರಿಗೂ ಸಂಭ್ರಮ, ಶಿವ ಭಕ್ತರಿಗೂ ಆನಂದ!

Shivratri 2022; ಶಿವರಾತ್ರಿಯಂದು ಭೇಟಿ ನೀಡಲು ಸೂಕ್ತವಾದ ಬೆಂಗಳೂರಿನ ಶಿವನ ದೇವಸ್ಥಾನಗಳು

Published On - 12:15 pm, Mon, 28 February 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ