ಕಾಡು ಮಲ್ಲೇಶ್ವರ ದೇವಾಲಯ(Kadu Malleshwara Temple): ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ ಸುಮಾರು ಕ್ರಿ.ಶ 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ. ಇಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ. ನಂದೀಶ್ವರ ತೀರ್ಥ ಈ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ನಂದಿ ಪ್ರತಿಮೆಯ ಬಾಯಿಯಿಂದ ನೀರು ನಿರಂತರವಾಗಿ ಹರಿದು ಲಿಂಗದ ಮೇಲೆ ಬೀಳುತ್ತದೆ. ಈ ನೀರು ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ.