AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ನೆಮ್ಮದಿಯ ನಿದ್ದೆಗೆ ಈ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಿ

ಎಷ್ಟೇ ಕೆಲಸ ಮಾಡಿದರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮರುದಿನ ಮತ್ತೊಂದು ಹೊಸ ದಿನ, ಹುರುಪಿನ ದಿನ ಪಡೆಯಬಹುದು. ಹೀಗಾಗಿ ನಿದ್ದೆ ಎನ್ನುವುದು ಪ್ರತೀ ಜೀವಿಗೆ ಸಿಕ್ಕ ವರವಾಗಿದೆ.

Sleep: ನೆಮ್ಮದಿಯ ನಿದ್ದೆಗೆ ಈ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 01, 2022 | 10:29 AM

Share

ದೇಹದ ಪ್ರತಿಯೊಂದು ಆರೋಗ್ಯಕ್ಕೂ ನಿದ್ದೆ(Sleep) ಪರಿಹಾರವಾಗಿರುತ್ತದೆ ಎಂದರೆ ತಪ್ಪಲ್ಲ. ಎಷ್ಟೇ ಕೆಲಸ ಮಾಡಿದರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮರುದಿನ ಮತ್ತೊಂದು ಹೊಸ ದಿನ, ಹುರುಪಿನ ದಿನ ಪಡೆಯಬಹುದು. ಹೀಗಾಗಿ ನಿದ್ದೆ ಎನ್ನುವುದು ಪ್ರತೀ ಜೀವಿಗೆ ಸಿಕ್ಕ ವರವಾಗಿದೆ. ಹಿಂದಿನ ಕಾಲದಲ್ಲಿ ಅಂದರೆ ನಮ್ಮ ಅಜ್ಜ ಅಜ್ಜಿಯರ ಜೀವನಶೈಲಿಯನ್ನು ಗಮನಿಸಿದರೆ ನಿದ್ದೆಯ ಮಹತ್ವ ತಿಳಿಯುತ್ತದೆ. ಬೇಗ ಮಲಗಿ ಬೇಗ ಏಳಬೇಕು ಎನ್ನುವ ಸೂತ್ರವನ್ನು ಅಳವಡಿಸಿಕೊಂಡು  ಆರೋಗ್ಯಯುತ ಜೀವನಶೈಲಿಯನ್ನು ನಡೆಸಿಕೊಂಡು ಬಂದವರು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಕ್​ ಫ್ರಾಮ್​ ಹೋಮ್(Work From Home)​, ನೈಟ್​ ಶಿಪ್ಟ್(Night Shift)​ ಕೆಲಸಗಳು ನಿದ್ದೆಯನ್ನು ಕಸಿದುಕೊಂಡಿವೆ. ಜತೆಗೆ ಹೆಸರು ಕೇಳದ ರೋಗಗಳಿಗೆ ತುತ್ತಾಗುತ್ತಿದೆ. ಪ್ರತೀ ಆರೋಗ್ಯವಂತ ವ್ಯಕ್ತಿಗೆ ಕನಿಷ್ಠ 6 ರಿಂದ 8  ಗಂಟೆಗಳ ಕಾಲ ನಿದ್ದೆ ಅವಶ್ಯಕವಾಗಿರುತ್ತದೆ.  ನಿದ್ದೆ ಮಾಡುವುದಕ್ಕೆ ನಮ್ಮ ಮನಸ್ಥಿತಿಯೂ ಕಾರಣವಾಗುತ್ತದೆ. ಸದಾ ಕಾಲ ಭವಿಷ್ಯದ ಚಿಂತೆ, ಕೆಲಸದ ಒತ್ತಡವನ್ನು ತುಂಬಿಕೊಂಡರೆ ನಿದ್ದೆ ಬರಲು ಸಾಧ್ಯವಿಲ್ಲ. ನೆನಪಿಡಿ, ನೀವು ಚಿಂತಿಸುತ್ತಾ ಅಥವಾ ಯಾವುದಾದರೂ ಒಂದು ವಿಷಯವನ್ನು ಆಳವಾಗಿ ಯೋಚಿಸುತ್ತಾ ಮಲಗಿದರೆ  ನಿದ್ದೆಯಿಂದ ಎದ್ದ ನಂತರವೂ ನಿಮ್ಮ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳಬಹುದು. ಹೀಗಾಗಿ ನೆಮ್ಮದಿಯ ನಿದ್ದೆಗೆ ಈ ಕ್ರಮಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ,

ವೇಳಾಪಟ್ಟಿ ತಯಾರಿಸಿ, ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಿ: ದೇಹಕ್ಕೆ ಒಂದು ಅಭ್ಯಾಸವನ್ನು ರೂಢಿಸಿದ ಮೇಲೆ ಅದಕ್ಕೆ ತಕ್ಕಹಾಗೆ ನಡೆದುಕೊಳ್ಳಿ. ಆಗ ದೇಹದಲ್ಲಿನ ಚಯಾಪಚಯ ಕ್ರಿಯೆಗೂ ಅಡ್ಡಿಯಾಗದೆ ಸೇವಿಸಿದ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗಿ ಆರೋಗ್ಯಯುತವಾಗಿರಬಹುದು. ಅದೇ ರೀತಿ ನಿಮ್ಮ ಪ್ರತಿದಿನ ಕೆಲಸಗಳಿಗೆ ಸರಿಯಾಗಿ ವೇಳಾಪಟ್ಟಿ ತಯಾರಿಸಿಕೊಳ್ಳಿ. ಯಾವ ಯಾವ ಕೆಲಸಗಳನ್ನು ಎಷ್ಟು ಸಮಯದಲ್ಲಿ ಮಾಡಬೇಕು ಎನ್ನುವುದನ್ನು ನಿಗದಿಪಡಿಸಿಕೊಳ್ಳಿ. ಕೊಂಚ ಜಾಸ್ತಿ ಸಮಯವನ್ನೇ ಮೀಸಲಿಡಿ. ಆ ವೇಳಾಪಟ್ಟಿಯಲ್ಲಿ ನಿದ್ದೆಗೂ ಸಮಯ ಮೀಸಲಿಡಿ. ಊಟ ಮಾಡಿ 2 ಗಂಟೆಯ ನಂತರ  ಮಲಗಿ. ನೆನಪಿಡಿ ಮಲಗುವ ವೇಳೆ ನಿಮ್ಮ ಮೊಬೈಲ್​ ಬಳಕೆಯನ್ನು ನಿರ್ಭಂಧಿಸಿ. ಆಗ ಕಣ್ತುಂಬ ನಿದ್ದೆ ಮಾಡಬಹುದು.

ಎಚ್ಚರವಾದಮೇಲೂ ಹಾಸಿಗೆಯ ಮೇಲೆ ಇರಬೇಡಿ: ಆಲಸ್ಯ ದೇಹವನ್ನು ಸುಲಭವಾಗಿ ಆವರಿಸಿಕೊಳ್ಳುತ್ತದೆ. ಅದಕ್ಕೆ  ಮುಖ್ಯ ಕಾರಣ ನೀವು ಎಚ್ಚರವಾದಮೇಲೂ ಹಾಸಿಗೆಯಲ್ಲಿ ಮಲಗುಕೊಳ್ಳುವುದೂ ಕೂಡ ಕಾರಣವಾಗಬಹುದು.  ಆದ್ದರಿಂದ ಒಮ್ಮೆ ಎಚ್ಚರವಾಗಿ ನಿದ್ದೆ ಮುಗಿದಿದೆ ಎನ್ನಿಸಿದರೆ ಎದ್ದು ಇತರ ಕೆಲಸದಲ್ಲಿ ತೊಡಗಿಕೊಳ್ಳಿ. ಕೆಲವೊಮ್ಮೆ ಎಚ್ಚರವಾದ ಮೇಲೂ ಮಲಗಿಕೊಳ್ಳಬೇಕು ಎನಿಸುತ್ತದೆ. ನಿದ್ದ ಬಂದರೆ ಒಳಿತು. ಅದನ್ನು ಬಿಟ್ಟು ಮೊಬೈಲ್​ ನೊಡುತ್ತಾ ಹೆಚ್ಚು ಹೊತ್ತು ಹಾಸಿಗೆಯ ಮೇಲೆ ಮಲಗಿಕೊಳ್ಳುವುದರಿಂದ ದೇಹಕ್ಕೆ ಜಡತ್ವ ಬರುತ್ತದೆ. ಅಲ್ಲಿಯೇ ಆಗಾಗ ನಿದ್ದೆ ಬಂದು ಎಚ್ಚರವಾಗುತ್ತಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಹಗಲು ನಿದ್ದೆ ಆರೋಗ್ಯಕ್ಕೆ ಕೆಡುಕೇ ಆಗಿದೆ. ಹೀಗಾಗಿ ಎಚ್ಚರವಾದ ತಕ್ಷಣ ಹಾಸಿಗೆಯ ಮೇಲೆ ಕುಳಿತುಕೊಳ್ಳದೆ ಎದ್ದಿಉ ಓದಿ, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ನಿದ್ದೆಯ ಬಗೆಗಿನ ಹವ್ಯಾಸ ಬದಲಿಸಿಕೊಳ್ಳಿ: ನಿದ್ದೆ ಪ್ರತೀ ಜೀವಿಗೆ ಅಗತ್ಯ. ಅದೇ ರೀತಿ ಎಲ್ಲರಿಗೂ ಮರುದಿನ ಬೆಳಗಾದರೆ ಆ ಕೆಲಸ ಮಾಡಬೇಕು, ಈ ಕೆಲಸ ಆಗಬೇಕು ಎನ್ನುವ ಧಾವಂತ ಇದ್ದೇ ಇರುತ್ತದೆ. ಅದೇ ಯೋಚನೆಯಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ಕೆಲಸದಲ್ಲಿ ಉತ್ಸಾಹ ಕಳೆದುಕೊಳ್ಳಬಹುದು. ಹೀಗಾಗಿ ನಿದ್ದೆಗೊಂದು ಸಮಯ ನಿಗದಿಪಡಿಸಿಕೊಳ್ಳಿ. ವೆಬ್​ ಸೀರಿಸ್​, ಸಿನಿಮಾ ವೀಕ್ಷಣೆ ಇವೆಲ್ಲವನ್ನು ಮಲಗಲು ಹೋದಾಗ ಮಾಡಬೇಡಿ. ಮೊಬೈಲ್​ ಥವಾ ನಿಮ್ಮ ಗ್ಯಾಜೆಟ್​ಗಳನ್ನು ಬದಗಿರಿಸಿ ನಿದ್ದೆ ಮಾಡಿ.  ರಾತ್ರಿ 11 ಗಂಟೆಗೆ ಮಲಗಿದರೆ 7 ಗಂಟೆಗೆ ಏಳಬಹದು ಆಗ 8 ಗಂಟೆಗಳ ಸಂಪೂರ್ಣ ನಿದ್ದೆ ನಿಮ್ಮದಾಗುತ್ತದೆ. 9 ಗಂಟೆಗೆ ಆಫೀಸ್​ ಆರಂಭವಾಗುವುದಾದರೂ ನಿಮ್ಮ ನಿದ್ದೆಗೆ ತೊಂದರೆಯಾಗುವುದಿಲ್ಲ. ಆದ್ದರಿಂದೆ ನಿದ್ದೆ ಸರಿಯಾಗಿ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ.

ಇದನ್ನೂ ಓದಿ:

PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ಯಾ? ಈ ಕ್ರಮಗಳನ್ನು ಅನುಸರಿಸಿ ದೇಹದ ತೂಕ ಇಳಿಸಿಕೊಳ್ಳಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್