
ಐಜ್ವಾಲ್ ಡಿಸೆಂಬರ್ 04: ಚುನಾವಣಾ ಆಯೋಗ (EC) ಪ್ರಕಾರ ಸೋಮವಾರ ಬೆಳಿಗ್ಗೆ ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಗೆ (Mizoram Election) ಮತ ಎಣಿಕೆಯಾಗುತ್ತಿದ್ದಂತೆ ಆರಂಭಿಕ ಹಂತದಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) 10 ಸ್ಥಾನಗಳಲ್ಲಿ, ಬಿಜೆಪಿ ಮೂರು ಮತ್ತು ಕಾಂಗ್ರೆಸ್ ಒಂದರಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂ 40 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, 21 ಮ್ಯಾಜಿಕ್ ನಂಬರ್.
ಟುಯಿಚಾಂಗ್ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ತೌನ್ಲುಯಾ ZPM ಅಭ್ಯರ್ಥಿ ಡಬ್ಲ್ಯು ಚುವಾನವ್ಮಾ ವಿರುದ್ಧ 909 ಮತಗಳ ಅಂತರದಿಂದ ಸೋತಿದ್ದಾರೆ. ಎರಡು ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಐಜ್ವಾಲ್ ಪೂರ್ವ-1 ಸ್ಥಾನದಿಂದ ZPM ನ ಲಾಲ್ತನ್‌ಸಂಗ ಮುನ್ನಡೆ ಸಾಧಿಸಿದ್ದು ಮುಖ್ಯಮಂತ್ರಿ ಝೋರಂತಂಗ ಹಿನ್ನಡೆ ಅನುಭವಿಸಿದ್ದಾರೆ. ದಕ್ಷಿಣ ಟುಯಿಪುಯಿ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಆರ್ ಲಾಲ್ತಾಂಗ್ಲಿಯಾನಾ ಹಿಂದುಳಿದಿದ್ದು, ZPM ಅಭ್ಯರ್ಥಿ ಜೆಜೆ ಲಾಲ್ಪೆಖ್ಲುವಾ ಮುನ್ನಡೆ ಸಾಧಿಸಿದ್ದಾರೆ.
ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. (ಗೆದ್ದ ನಂತರ) ನಮ್ಮ ಮುಖ್ಯ ಆದ್ಯತೆ ಕೃಷಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದ, ವಿದ್ಯುತ್ ಮತ್ತು ಸಂವಹನ ಮತ್ತು ನಮ್ಮ ಯುವ ಪೀಳಿಗೆ ಎಂದು ZPM ಉಪಾಧ್ಯಕ್ಷ ಡಾ ಕೆನೆತ್ ಚಾಂಗ್ಲಿಯಾನಾ ಹೇಳಿದ್ದಾರೆ.
#WATCH | #MizoramElections2023 | Aizawl: ZPM (Zoram People’s Movement) Vice-President Dr Kenneth Chawngliana says, “As of now we are leading on more than 20 seats, which is already the majority, I think we’ll form the government with the absolute majority. (After winning) our… pic.twitter.com/Jk0lOmiEch
— ANI (@ANI) December 4, 2023
ಸೆರ್ಚಿಪ್ಸ್ಥಾನದಲ್ಲಿ ZPM ನ ಸಿಎಂ ಅಭ್ಯರ್ಥಿ ಲಾಲ್ದುಹೋಮ ಮುನ್ನಡೆ ಸಾಧಿಸಿದ್ದಾರೆ. 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗಿದ್ದು, ಬೆಳಗ್ಗೆ 8.30ರಿಂದ ಇವಿಎಂಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆ ಕಾರ್ಯ ಆರಂಭವಾಯಿತು.
ಕಡಿಮೆ ಮತದಾರರಿರುವ ಕೆಲವು ಕ್ಷೇತ್ರಗಳಲ್ಲಿ ಕೇವಲ ಎರಡು ಸುತ್ತಿನ ಮತ ಎಣಿಕೆ ನಡೆಯಲಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಐದು ಸುತ್ತುಗಳ ಮತ ಎಣಿಕೆ ನಡೆಯಲಿದೆ. 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ, ಇವಿಎಂಗಳಿಗಾಗಿ 399 ಮತ್ತು ಅಂಚೆ ಮತಗಳ ಎಣಿಕೆಗೆ 56 ಟೇಬಲ್‌ಗಳಿವೆ.
ಇದನ್ನೂ ಓದಿ: Mizoram Election Results 2023: ಮಿಜೋರಾಂನಲ್ಲಿ ಇಂದು 174 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ, ತ್ರಿಕೋನ ಸ್ಪರ್ಧೆ
ನವೆಂಬರ್ 7 ರಂದು ಮತದಾನ ನಡೆದಿದ್ದು, ರಾಜ್ಯದ 8.57 ಲಕ್ಷ ಮತದಾರರಲ್ಲಿ ಶೇಕಡಾ 80 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು.
MNF, ZPM ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 23 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಅಲ್ಲದೆ, 17 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Mon, 4 December 23