AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ರಾಜ್ಯಗಳು ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡ ಇಂಡಿಯಾ ಒಕ್ಕೂಟ

ನಾಲ್ಕರಲ್ಲಿ ಕೇವಲ ಒಂದು ರಾಜ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್​ನ್ನು ಇಂಡಿಯಾ(INDIA) ಒಕ್ಕೂಟ ತರಾಟೆಗೆ ತೆಗೆದುಕೊಂಡಿದೆ. ನವೆಂಬರ್​ನಲ್ಲಿ ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್ 3 ರಂದು ಹೊರಬಿದ್ದಿತ್ತು. ಅದರಲ್ಲಿ ಛತ್ತೀಸ್​ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ, ಕೇವಲ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್​ ಗೆಲುವಿನ ರುಚಿ ಕಂಡಿದೆ, ಈ ಕುರಿತು ಇಂಡಿಯಾ ಒಕ್ಕೂಟ ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡಿದೆ.

3 ರಾಜ್ಯಗಳು ಬಿಜೆಪಿ ತೆಕ್ಕೆಗೆ, ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡ ಇಂಡಿಯಾ ಒಕ್ಕೂಟ
ರಾಹುಲ್ ಗಾಂಧಿImage Credit source: Daily Excelsior
Follow us
ನಯನಾ ರಾಜೀವ್
|

Updated on: Dec 04, 2023 | 10:51 AM

ನಾಲ್ಕರಲ್ಲಿ ಕೇವಲ ಒಂದು ರಾಜ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್​ನ್ನು ಇಂಡಿಯಾ(INDIA) ಒಕ್ಕೂಟ ತರಾಟೆಗೆ ತೆಗೆದುಕೊಂಡಿದೆ. ನವೆಂಬರ್​ನಲ್ಲಿ ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್ 3 ರಂದು ಹೊರಬಿದ್ದಿತ್ತು. ಅದರಲ್ಲಿ ಛತ್ತೀಸ್​ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ, ಕೇವಲ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್​ ಗೆಲುವಿನ ರುಚಿ ಕಂಡಿದೆ, ಈ ಕುರಿತು ಇಂಡಿಯಾ ಒಕ್ಕೂಟ ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷ, ಜನತಾದಳ(ಯು) ತೃಣಮೂಲ ಕಾಂಗ್ರೆಸ್​ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್​ ವಿರುದ್ಧ ತೀಕ್ಷ್ಣದಾಳಿ ನಡೆದಿದ್ದಾರೆ. ಪಕ್ಷವು ಏಕಾಂಗಿಯಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ನಿತೀಶ್ ಕುಮಾರ್ ಅವರ ಜೆಡಿಯು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದೆ.

ಇದು ಕಾಂಗ್ರೆಸ್ ಸೋಲು, ಬಿಜೆಪಿ ಗೆಲುವಲ್ಲ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನು ಸಮಾಲೋಚನೆಗೆ ಎಂದಿಗೂ ಆಹ್ವಾನಿಸದ ಕಾರಣ ಚುನಾವಣೆಯಲ್ಲಿ ಭಾರತ ಒಕ್ಕೂಟ ಕಾಣೆಯಾಗಿದೆ ಎಂದು ಅವರು ಹೇಳಿದರು. ಒಂದೆರಡು ತಿಂಗಳ ಹಿಂದೆಯೇ ಮೈತ್ರಿಕೂಟದ ಸಭೆ ಕರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದರು.

ಮತ್ತಷ್ಟು ಓದಿ: ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ

ಭವಿಷ್ಯದಲ್ಲಿ ಪರಿಸ್ಥಿತಿ ಹೀಗಾದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ ಮೈತ್ರಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷಕ್ಕೆ ಸ್ಥಾನ ನೀಡದಿರುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.

ತನ್ನ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಆದರೆ ಸಿಪಿಎಂ ರಾಹುಲ್ ಗಾಂಧಿಗೆ ಬೆಂಬಲ ನೀಡಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿ 54, ಕಾಂಗ್ರೆಸ್‌ 35. ಮಧ್ಯಪ್ರದೇಶದಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಕಾಂಗ್ರೆಸ್‌ನ 66 ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ 69 ಸ್ಥಾನಗಳನ್ನು ಗಳಿಸಿದೆ.

ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಆರ್‌ಎಸ್ 39, ಬಿಜೆಪಿ 8 ಮತ್ತು ಎಐಎಂಐಎಂ 7 ಸ್ಥಾನಗಳನ್ನು ಗೆದ್ದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ