ಬೈಪಾಸ್‌ ರಸ್ತೆಯಲ್ಲಿ ಭಸ್ಮಗೊಂಡ ಐಷಾರಾಮಿ ಖಾಸಗಿ ಟ್ರಾವೆಲ್ಸ್‌ ಬಸ್‌, ಒಬ್ಬರ ಸಜೀವ ದಹನ

Bus Fire Accident: ನಲ್ಗೊಂಡ ಮರಿಗೂಡ ಬೈಪಾಸ್ ರಸ್ತೆ ಬಳಿ ಶಾರ್ಟ್​​ ಸರ್ಕ್ಯೂಟ್‌ನಿಂದ ಶ್ರೀ ಕೃಷ್ಣ ಖಾಸಗಿ ಟ್ರಾವೆಲ್ಸ್ ಬಸ್‌ಗೆ ಬೆಂಕಿ ಹೊತ್ತಿಕೊಂಡು ಭಸ್ಮಗೊಂಡಿದೆ.

ಬೈಪಾಸ್‌ ರಸ್ತೆಯಲ್ಲಿ ಭಸ್ಮಗೊಂಡ ಐಷಾರಾಮಿ ಖಾಸಗಿ ಟ್ರಾವೆಲ್ಸ್‌ ಬಸ್‌,  ಒಬ್ಬರ ಸಜೀವ ದಹನ
ಭಸ್ಮಗೊಂಡ ಐಷಾರಾಮಿ ಖಾಸಗಿ ಟ್ರಾವೆಲ್ಸ್‌ ಬಸ್‌.
Follow us
ಸಾಧು ಶ್ರೀನಾಥ್​
|

Updated on: Dec 04, 2023 | 10:01 AM

ನಲ್ಲಗೊಂಡ-ಮರಿಗೂಡ (Nalgonda) ಬೈಪಾಸ್ ರಸ್ತೆ ಬಳಿ ಖಾಸಗಿ ಟ್ರಾವೆಲ್ಸ್ ಗೆ ಸೇರಿದ ಐಷಾರಾಮಿ ಬಸ್ ಭಸ್ಮಗೊಂಡಿದೆ. ಶಾಕ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಬೆಂಕಿಗೆ ಆಹುತಿಯಾದ ಬಸ್ (Bus Short Circuit) ಶ್ರೀ ಕೃಷ್ಣ ಟ್ರಾವೆಲ್ಸ್ ಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು, ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿದ್ದು, ಒಬ್ಬ ಪ್ರಯಾಣಿಕರು (Passenger) ಪ್ರಾಣ ಕಳೆದುಕೊಂಡಿದ್ದಾರೆ. ಅವಘಡ ಸಂಭವಿಸಿದರೂ ಟ್ರಾವೆಲ್ ಮಾಲೀಕರು ಪ್ರಯಾಣಿಕರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬಸ್ಸಿನಲ್ಲಿದ್ದವರು ಹೇಳಿದ್ದಾರೆ.

ಸಹಾಯಕ್ಕಾಗಿ ಮೂರು ಗಂಟೆಗಳ ಕಾಲ ರಸ್ತೆಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅಪಘಾತದ ವೇಳೆ ಬಸ್ಸಿನಲ್ಲಿ 40 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಹೈದರಾಬಾದ್‌ನಿಂದ ಚಿರಾಲಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಜೀವವಾಗಿ ದಹನವಾಗಿದ್ದಾರೆ.

ಮತ್ತಷ್ಟು ಓದಿ: ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕ ಮತ್ತು ಟ್ರಾವೆಲ್ಸ್​​ ಮಾಲೀಕರ ತಪ್ಪೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ