ಒಳ್ಳೆಯ ಆಡಳಿತ ಇದ್ದಾಗ ಆಡಳಿತ ವಿರೋಧಿ ಪದವು ಅಪ್ರಸ್ತುತ: ಪ್ರಧಾನಿ ಮೋದಿ
parliament winter session: ಇಂದಿನಿಂದ ಸಂಸತ್ ಚಳಿಗಾಲ ಅಧಿವೇಶ ಪ್ರಾರಂಭವಾಗಿದ್ದು, ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮಾಧ್ಯಗಳೊಂದಿಗೆ ಮಾತನಾಡಿದ್ದಾರೆ, ನೆನ್ನೆಯ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮೋದಿ ಹೇಳಿದ್ದೇನು? ಇಲ್ಲಿದೆ ನೋಡಿ.
ಚಳಿಗಾಲ ಸಂಸತ್ ಅಧಿವೇಶನ (parliament winter session) ಪ್ರಾರಂಭವಾಗಿದ್ದು, ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಗಳೊಂದಿಗೆ ಮಾತನಾಡಿದರು. ಬಿಜೆಪಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಜನರಿಗಾಗಿ ಕೆಲಸ ಮಾಡಲು ಬದ್ಧರಾಗಿರುವವರಿಗೆ (ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ) ವಿಧಾನಸಭಾ ಚುನಾವಣಾ ಫಲಿತಾಂಶಗಳು ಉತ್ಸಾಹಭರಿತವಾಗಿವೆ ಎಂದು ಹೇಳಿದರು. ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ ಮತ್ತು ರಾಜಸ್ಥಾನ ಹಾಗೂ ಛತ್ತೀಸ್‌ಗಢ ಎರಡರಲ್ಲೂ ಪ್ರತಿಸ್ಪರ್ಧಿ ಕಾಂಗ್ರೆಸ್‌ನಿಂದ ರಾಜ್ಯ ವಿಧಾನಸಭೆಗಳ ನಿಯಂತ್ರಣವನ್ನು ಪಡೆದುಕೊಂಡಿದೆ. ಒಳ್ಳೆಯ ಆಡಳಿತ ಇದ್ದಾಗ ಆಡಳಿತ ವಿರೋಧಿ ಪದವು ಅಪ್ರಸ್ತುತವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ಈ ಸಮಯದಲ್ಲಿ ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಜೀವನದಲ್ಲಿ ಆಶಾವಾದಿ ಧೋರಣೆಯನ್ನು ಹೊಂದಿದ್ದರೆ, ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತು. ಇನ್ನು ಈ ಸೋಲಿನ ಹತಾಶೆಯನ್ನು ಸಂಸತ್ತಿನಲ್ಲಿ ತೋರಿಸಬೇಡಿ. ದೇಶವನ್ನು ಅಭಿವೃದ್ಧಿಯತ್ತ ಹಾಗೂ ಚರ್ಚೆಯನ್ನು ಆರೋಗ್ಯಯುತವಾಗಿ ನಡೆಸುವ ಎಂದು ಹೇಳಿದರು.
ವಿರೋಧ ಪಕ್ಷಗಳ ಸಹಕಾರ ತುಂಬಾ ಅಗತ್ಯ, ಖಂಡಿತ ಇದನ್ನು ನೀವು ನೀಡಬೇಕು ಎಂದು ಮೋದಿ ಮನವಿ ಮಾಡಿದರು. ನಾನು ಕೂಡ ರಾಜಕೀಯವಾಗಿ ಮಾತನಾಡುತ್ತೇನೆ. ಆದರೆ ಸದನದಲ್ಲಿ ದೇಶಕ್ಕೆ ಧನಾತ್ಮಕ ಸಂದೇಶ ನೀಡುವಂತೆ ನಡೆದುಕೊಳ್ಳಿ. ನಿಮ್ಮ ನಿಮ್ಮ ಚರ್ಚೆ ದ್ವೇಷ ಮತ್ತು ನಕಾರಾತ್ಮಕತೆಯಾದರೆ ಅದು ಪ್ರಜಾಪ್ರಭುತ್ವಕ್ಕೆ ಸರಿಯಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ವಿರೋಧವೂ ಅಷ್ಟೇ ಮುಖ್ಯ, ಅದು ಅಷ್ಟೇ ಸಮರ್ಥವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
#WATCH | Winter Session of Parliament | PM Narendra Modi says, “I have been urging for your (Opposition) cooperation in the House. Today, I also speak politically – it is beneficial for you too if you give a message of positivity to the country. It is not right for democracy if… pic.twitter.com/d2FjMDPR6i
— ANI (@ANI) December 4, 2023
ನೆನ್ನೆ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು. ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಇದೀಗ ಈ ವಿಜಯದ ನಂತರ ಚಳಿಗಾಲ ಅಧಿವೇಶ ಪ್ರಾರಂಭವಾಗಿದೆ. ಈ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಪ್ರಶ್ನೆಗೆ ನಗದು’ ಆರೋಪದ ಕುರಿತು ತನಿಖೆ ನಡೆಸಿದ ನೈತಿಕ ಸಮಿತಿಯು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಲೋಕಸಭೆಯಲ್ಲಿ ತನ್ನ ವರದಿಯನ್ನು ಮಂಡಿಸಲಿದೆ.
ಇದನ್ನೂ ಓದಿ: ಡಿಸೆಂಬರ್ 4ರಿಂದ ಡಿಸೆಂಬರ್ 22ರವರೆಗೆ ಸಂಸತ್ ಚಳಿಗಾಲದ ಅಧಿವೇಶನ: ಪ್ರಲ್ಹಾದ ಜೋಶಿ
ಈ ಮಂಡನೆ ಸದಸದಲ್ಲಿ ಭಾರೀ ದೊಡ್ಡ ಗದ್ದಲಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇಂದು ಲೋಕಸಭೆಯ ಪಟ್ಟಿ ಮಾಡಲಾದ ಅಜೆಂಡಾದಲ್ಲಿ ನೀತಿಶಾಸ್ತ್ರ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಮತ್ತು ಸಮಿತಿಯ ಸದಸ್ಯೆ ಅಪರ್ಜಿತಾ ಸಾರಂಗಿ ಅವರು “ನೀತಿಗಳ ಸಮಿತಿಯ ಮೊದಲ ವರದಿಯನ್ನು ನೀಡಲಿದ್ದಾರೆ. ಡಿಸೆಂಬರ್ 4 ರಿಂದ ಡಿಸೆಂಬರ್ 22 ರ ನಡುವೆ 15 ಅಧಿವೇಶನಗಳು ನಡೆಯಲಿರುವ ಅಧಿವೇಶನದ ಸುಗಮ ಕಲಾಪಕ್ಕಾಗಿ ಸರ್ಕಾರ ಶನಿವಾರ ಸರ್ವಪಕ್ಷ ಸಭೆ ನಡೆಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 4 December 23