ತೆಲಂಗಾಣ: ಮುಂದಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ? ಇಂದು ರಾತ್ರಿ ನೂತನ ಸಿಎಂ ಪ್ರಮಾಣವಚನ ಸ್ವೀಕಾರ

Revanth Reddy: ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ರೇವಂತ್ ರೆಡ್ಡಿ ಅವರ ಕಾರ್ಯಶೈಲಿಯು ಅವರಿಗೆ ಪಕ್ಷದ ಶ್ರೇಣಿಯೊಳಗೆ ಹಲವಾರು ವಿರೋಧಿಗಳನ್ನು ಗಳಿಸಿತು. ಆದರೆ 54 ವರ್ಷ ಹರೆಯದ ರೆಡ್ಡಿ ದಕ್ಷಿಣ ರಾಜ್ಯದಲ್ಲಿ BRS ಅನ್ನು ಪದಚ್ಯುತಗೊಳಿಸಲು ಸಾಕಷ್ಟು ಸಮರ್ಥರಾಗಿದ್ದರು. ಜುಲೈ 2021 ರಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ರೆಡ್ಡಿ ಆಡಳಿತಾರೂಢ BRS ಸರ್ಕಾರದ ವಿರುದ್ಧ ಹಲವಾರು ಸಮಸ್ಯೆಗಳ ಕುರಿತು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು.

ತೆಲಂಗಾಣ: ಮುಂದಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ? ಇಂದು ರಾತ್ರಿ ನೂತನ ಸಿಎಂ ಪ್ರಮಾಣವಚನ ಸ್ವೀಕಾರ
ರೇವಂತ್ ರೆಡ್ಡಿ
Follow us
|

Updated on:Dec 04, 2023 | 3:22 PM

ಹೈದರಾಬಾದ್: ತೆಲಂಗಾಣ (Telangana) ಮುಖ್ಯಮಂತ್ರಿ ಸ್ಥಾನಕ್ಕೆ ರೇವಂತ್ ರೆಡ್ಡಿ (Revanth Reddy) ಹೆಸರು ಬಹುತೇಕ ಖಚಿತವಾಗಿದೆ. ಹೈದರಾಬಾದ್ ಗಾಂಧಿ ಭವನದಲ್ಲಿ ಇಂದು (ಸೋಮವಾರ) ಕಾಂಗ್ರೆಸ್ ಪಕ್ಷದ  ಶಾಸಕಾಂಗ ಸಭೆ (CLP) ನಡೆದಿದ್ದು, ಈ ಸಭೆಯಲ್ಲಿ ರೆಡ್ಡಿ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ತೆಲಂಗಾಣದ ಮುಂದಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಭಟ್ಟಿ ವಿಕ್ರಮಾರ್ಕ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ಟ್ವೀಟ್ ಮಾಡಿದೆ. ಇಂದು ರಾತ್ರಿ ರಾತ್ರಿ 8 ಗಂಟೆಗೆ ತೆಲಂಗಾಣ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದು, ತೆಲಂಗಾಣ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಕೆಲ ಹೊತ್ತಿನಲ್ಲೇ  ಎಐಸಿಸಿ ಅಧ್ಯಕ್ಷರು ಸಿಎಂ ಹೆಸರು ಪ್ರಕಟಿಸಲಿದ್ದಾರೆ ಎಂದು ಟಿವಿ9 ತೆಲುಗು ವರದಿ ಮಾಡಿದೆ.

2014 ರಲ್ಲಿ ರಾಜ್ಯ ವಿಭಜನೆಯ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಲು ಸಿದ್ಧವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ವಿ ಹನುಮಂತ ರಾವ್,  ಕಾಂಗ್ರೆಸ್ ಶಾಸಕಾಂಗ ಪಕ್ಷ  ಸಭೆ  ನಂತರವೇ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುವುದು ಎಂದಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಏನು ತೀರ್ಮಾನ ಆಗುತ್ತದೋ ಕಾದು ನೋಡಬೇಕಿದೆ, ಬಹುಷಃ ರೇವಂತ್ ರೆಡ್ಡಿ ಅವರು ಮಾಡಿದ ಎಲ್ಲಾ ಕೆಲಸಗಳಿಂದ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ವಿ ಹನುಮಂತ ರಾವ್ ಹೇಳಿದ್ದಾರೆ.

ವಾಗ್ಮಿ, ಉತ್ಸಾಹಿ ಯುವ ನಾಯಕ  ರೇವಂತ್ ರೆಡ್ಡಿ

2000ನೇ ಇಸವಿಯಲ್ಲಿ ಕೇವಲ 31ರ ಹರೆಯದ ಅನುಮುಲ ರೇವಂತ್ ರೆಡ್ಡಿ ಅವರು ತಮ್ಮ ಆತ್ಮೀಯ ಗೆಳೆಯರೊಬ್ಬರ ಬಳಿ ‘ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಹೇಳಿದ್ದರು. ಆ ಸಮಯದಲ್ಲಿ ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಇರಲಿಲ್ಲ. ಅವರು ಕೆಲವೇ ತಿಂಗಳುಗಳ ಹಿಂದೆ, ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಸಹಕಾರಿ ಹೌಸಿಂಗ್ ಸೊಸೈಟಿ ಚುನಾವಣೆ ಗೆದ್ದಿದ್ದರು. ಆಗ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ರೇವಂತ್ ರೆಡ್ಡಿ ಅವರ ಗೆಳೆಯರೊಬ್ಬರು “ರೇವಂತ್ ಯುವಕ, ಉತ್ಸಾಹಿ ಮತ್ತು ಮಹತ್ವಾಕಾಂಕ್ಷೆಯುಳ್ಳವರಾಗಿದ್ದರು. ಅವರು ಹೇಳಿದ್ದು ಸ್ವಲ್ಪ ಅತಿ ಎಂದು ತೋರುತ್ತದೆಯಾದರೂ, ನನಗೆ ಆಶ್ಚರ್ಯವಾಗಲಿಲ್ಲ ಎಂದಿದ್ದಾರೆ.

ಎರಡು ದಶಕಗಳ ನಂತರ ಅವರ ಮಾತು ‘ಅತಿ ಆಗಿತ್ತು ಎಂದು ಅನಿಸುತ್ತಿಲ್ಲ. ವಾಸ್ತವವಾಗಿ ಇದು ಅವರ ರಾಜಕೀಯ ಪಥವನ್ನು ವಿವರಿಸುತ್ತದೆ. ಇದು ರೇವಂತ್ ಅವರಿಗೆ ಸುಲಭದ ಸಂಗತಿ ಆಗಿರಲಿಲ್. ರೇವಂತ್ ಕಲ್ವಕುರ್ತಿ ವಿಧಾನಸಭಾ ಕ್ಷೇತ್ರದ ಕೊಂಡರೆಡ್ಡಿಪಲ್ಲಿಯವರು. ನವೆಂಬರ್ 8, 1969 ರಂದು ನರಸುಮ ರೆಡ್ಡಿ ಮತ್ತು ರಾಮಚಂದ್ರಮ್ಮ ಎಂಬ ಕೃಷಿ ಕುಟುಂಬಕ್ಕೆ ಜನಿಸಿದ ರೇವಂತ್, ಸಹೋದರಿ ಸೇರಿದಂತೆ ಏಳು ಒಡಹುಟ್ಟಿದವರ ಪೈಕಿ ನಾಲ್ಕನೆಯವರಾಗಿದ್ದರು. ಅವರ ಕುಟುಂಬದವರು ಯಾರೂ ರಾಜಕೀಯದಲ್ಲಿ ಇರಲಿಲ್ಲ.

ಕಲ್ವಕುರ್ತಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದ ಅವರು 1992 ರಲ್ಲಿ ಹೈದರಾಬಾದ್‌ನ AV ಕಾಲೇಜಿನಲ್ಲಿ ಲಲಿತಕಲೆಯಲ್ಲಿ ಪದವಿ ಪಡೆದರು. ಅವರ ಕಾಲೇಜು ದಿನಗಳಲ್ಲಿ, ಅವರು ಬಿಜೆಪಿಯ ವಿದ್ಯಾರ್ಥಿ ಘಟಕವಾದ ABVP ಯೊಂದಿಗೆ ಸಂಬಂಧ ಹೊಂದಿದ್ದರು. ಮೇ 7, 1992 ರಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಸ್ ಜೈಪಾಲ್ ರೆಡ್ಡಿ ಅವರ ಸೋದರ ಸೊಸೆ, ರಾಜಕೀಯ ಮತ್ತು ವ್ಯಾಪಾರ ವಲಯಗಳಲ್ಲಿ ಪ್ರಸಿದ್ಧರಾಗಿದ್ದ ಪದ್ಮಾ ರೆಡ್ಡಿ ಅವರ ಪುತ್ರಿ ಗೀತಾ ರೆಡ್ಡಿ ಅವರನ್ನು ವಿವಾಹವಾದರು. ಒಂದು ಕುತೂಹಲಕಾರಿ ಸಂಗತಿಯೆಂದರೆ ಆತ್ಮೀಯ ಸ್ನೇಹಿತ ಮತ್ತು ರೂಮ್‌ಮೇಟ್, ಈಗ ಹಿರಿಯ ಆರ್‌ಎಸ್‌ಎಸ್ ವ್ಯಕ್ತಿಯೇ ಆಗ ರೇವಂತ್ ರೆಡ್ಡಿ-ಗೀತಾ ಪರಿಣಯಕ್ಕೆ ಸಹಾಯ ಮಾಡಿದ್ದು.

ಈ ಸಮಯದಲ್ಲಿ, ರೇವಂತ್, ಜಾಹೀರಾತು ಮತ್ತು ಮುದ್ರಣ ಏಜೆನ್ಸಿಯನ್ನು ಆರಂಭಿಸಿ ನಾಲ್ಕು ವರ್ಷಗಳಲ್ಲಿ, ಹೈದರಾಬಾದ್ ಐಟಿ ಕೇಂದ್ರವಾಗಿ ಬೆಳೆಯಲು ಪ್ರಾರಂಭಿಸುವ ಸಮಯದಲ್ಲಿ ರಿಯಲ್ ಎಸ್ಟೇಟ್‌ಗೆ ಪ್ರವೇಶಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಅವರು ಜುಬಿಲಿ ಹಿಲ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ನಿರ್ದೇಶಕರಾಗಿ ಮತ್ತು ಎರಡು ಬಾರಿ ಅದರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾಗಿ ಆಯ್ಕೆಯಾದರು.

2002 ರಲ್ಲಿ, ರೇವಂತ್ ಮತ್ತು ಪ್ರಸ್ತುತ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಪ್ರತ್ಯೇಕ ತೆಲಂಗಾಣ ಆಂದೋಲನವನ್ನು ಪ್ರಾರಂಭಿಸುವುದರೊಂದಿಗೆ ಸ್ನೇಹ ಬೆಳೆಸಿದರು. ಅವರು ಕೆಸಿಆರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. 2004 ರಲ್ಲಿ ಕಲ್ವಕುರ್ತಿ ವಿಧಾನಸಭೆ ಟಿಕೆಟ್ ನಿರೀಕ್ಷಿಸಿದ್ದರು, ಅಲ್ಲಿ ಆಗಿನ ಟಿಆರ್ಎಸ್ (ಈಗ ಬಿಆರ್ಎಸ್) ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಕೊನೆ ಗಳಿಗೆಯಲ್ಲಿ ಜೈಪಾಲ್ ರೆಡ್ಡಿ ಅವರ ಆಪ್ತ ಅನುಯಾಯಿ ಯಡಂ ಕಿಸ್ತಾ ರೆಡ್ಡಿಗೆ ಟಿಕೆಟ್ ಹಂಚಿಕೆಯಾಗಿದೆ.

ಕಲ್ವಕುರ್ತಿಯಿಂದ ಟಿಆರ್‌ಎಸ್ ಸ್ಪರ್ಧಿಸಲು ಜೈಪಾಲ್ ರೆಡ್ಡಿ ಸಿದ್ಧರಿದ್ದರೆ, ರೇವಂತ್ ಟಿಐರ್ ಎಸ್ ಪಕ್ಷದ ಪರವಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದರು. ಆದರೆ ಹಾಗಾಗಲಿಲ್ಲ. ಆ ಚುನಾವಣೆಯ ನಂತರ, ರೇವಂತ್ ಅವರು ಟಿಆರ್‌ಎಸ್‌ನಿಂದ ದೂರವಿದ್ದರು ಮತ್ತು ಸ್ವಂತವಾಗಿ ನೆಲಮಟ್ಟದಿಂದ ನೇರ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದರು. 2006 ರಲ್ಲಿ ಮಿಡ್ಜಿಲ್ ಮಂಡಲದಿಂದ ZPTC ಚುನಾವಣೆಯಲ್ಲಿ ಅವರು ಸ್ವತಂತ್ರವಾಗಿ ಗೆದ್ದಿದ್ದರು. ಒಂದು ವರ್ಷದ ನಂತರ, ಅವರು ಮಹೆಬೂಬ್‌ನಗರದಿಂದ ಸ್ಥಳೀಯ ಸಂಸ್ಥೆಗಳ ಕೋಟಾದ ಅಡಿಯಲ್ಲಿ MLC ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು. ಇದು ಅವರ ರಾಜಕೀಯ ಜೀವನದ ಮಹತ್ವದ ತಿರುವು ಆಗಿತ್ತು. 2007 ರಲ್ಲಿ ಅಂದಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ್ ರೆಡ್ಡಿ ಅವರನ್ನು ಕಾಂಗ್ರೆಸ್ ಸೇರುವಂತೆ ಕೇಳಿಕೊಂಡರು, ಆದರೆ ರೇವಂತ್ ಅವರು ವಿರೋಧ ಪಕ್ಷವಾದ ತೆಲುಗು ದೇಶಂ ಅನ್ನು ಆಯ್ಕೆ ಮಾಡಿದರು. ಅವರ ಸಹಾಯಕರ ಪ್ರಕಾರ ರೇವಂತ್ ತನ್ನದೇ ಆದ ಛಾಪು ಮೂಡಿಸಲು ಬಯಸಿದ್ದರು, ಅದು ವಿರೋಧದ ಧ್ವನಿಯಾಗಿದ್ದರೆ ಮಾತ್ರ ಸಾಧ್ಯ ಎಂದು ಅವರು ಭಾವಿಸಿದ್ದರು.

ವಾಗ್ಮಿಯೂ ಆಗಿದ್ದ ರೇವಂತ್ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಗಮನ ಸೆಳೆದರು ಮತ್ತು ಸ್ವತಃ ಫೈರ್‌ಬ್ರಾಂಡ್ ಇಮೇಜ್ ಅನ್ನು ರಚಿಸಿದರು.

ಇದನ್ನೂ ಓದಿ: Plane Crash: ತೆಲಂಗಾಣದ ಮೆದಕ್ ಬಳಿ ಲಘು ವಿಮಾನ ಪತನ, ಓರ್ವ ಸಾವು

ಅವರು 2009 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮಹೆಬೂಬ್‌ನಗರ ಜಿಲ್ಲೆಯ ಕೊಡಂಗಲ್‌ನಿಂದ ಪ್ರಬಲ ಎದುರಾಳಿ ಗುರುನಾಥ ರೆಡ್ಡಿ ವಿರುದ್ಧ ಕಾಂಗ್ರೆಸ್‌ನಿಂದ ಐದು ಬಾರಿ ಶಾಸಕರಾಗಿ ಸ್ಪರ್ಧಿಸಿದರು. ಟಿಡಿಪಿ ಆ ಸಮಯದಲ್ಲಿ ಟಿಆರ್‌ಎಸ್, ಸಿಪಿಐ ಮತ್ತು ಸಿಪಿಎಂ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಂದಹಾಗೆ ತೆಲಂಗಾಣ ಭಾವನೆಯನ್ನು ದಕ್ಷಿಣ ಪ್ರದೇಶದಲ್ಲಿ ಹರಡಲು ಕೆಸಿಆರ್ ಅವರನ್ನು ಮಹೆಬೂಬ್‌ನಗರದಿಂದ ಸಂಸದರಾಗಿ ಸ್ಪರ್ಧಿಸುವಂತೆ ಮನವೊಲಿಸಿದ ಪ್ರಮುಖ ವ್ಯಕ್ತಿ ರೇವಂತ್ ಎಂದು ಹೇಳಲಾಗಿದೆ.

ಆ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ಅವರು ಗುರುನಾಥರೆಡ್ಡಿ ಅವರನ್ನು 6,989 ಮತಗಳ ಅಂತರದಿಂದ ಸೋಲಿಸಿದ್ದರು. ಮೊದಲ ಬಾರಿಗೆ ಶಾಸಕರಾಗಿದ್ದ ಅವರು ತೆಲಂಗಾಣ ಆಂದೋಲನದ ಸಮಯದಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಮಾತನಾಡುವ ಅವಕಾಶವನ್ನು ಬಳಸಿಕೊಂಡರು. 2014ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ 14,614 ಮತಗಳ ಅಂತರದಿಂದ ಗೆದ್ದಿದ್ದರು. ಅವರನ್ನು ತೆಲಂಗಾಣ ಟಿಡಿಪಿಯ ಕಾರ್ಯಾಧ್ಯಕ್ಷರನ್ನಾಗಿ ಏರಿಸಲಾಯಿತು. ಅವನ ನಿಜವಾದ ಪರೀಕ್ಷೆಯು ನಂತರ ಪ್ರಾರಂಭವಾಯಿತು. ಮೇ 31, 2015 ರಂದು, ಎಮ್‌ಎಲ್‌ಸಿ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿ ವೆಂ ನರೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸಲು ನಾಮನಿರ್ದೇಶಿತ ಶಾಸಕ ಸ್ಟೀಫನ್‌ಸನ್‌ಗೆ 50 ಲಕ್ಷ ರೂಪಾಯಿ ಆಫರ್ ಮಾಡಿದ ಆರೋಪದಲ್ಲಿ ರೇವಂತ್ ಭ್ರಷ್ಟಾಚಾರ ನಿಗ್ರಹ ದಳದಿಂದ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಆತನನ್ನು ಬಂಧಿಸಲಾಯಿತು. ಆ ಸಮಯದಲ್ಲಿ ಅವರು ತಮ್ಮ ಮೀಸೆಯನ್ನು ತಿರುಗಿಸಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಸವಾಲೆಸೆದಿದ್ದರು, ನಾನು ನಿಮ್ಮ ಅಂತ್ಯವನ್ನು ನೋಡುತ್ತೇನೆ. ನನ್ನ ಸಮಯ ಬರುತ್ತದೆ. ” ಮಗಳು ನಿಮಿಷಾಳ ಮದುವೆಗೆ ಹಾಜರಾಗಲು ಅವರು 12 ಗಂಟೆಗಳ ಕಾಲ ಜಾಮೀನು ಪಡೆಯಬೇಕಾಯಿತು. ಅವರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು

2017 ರಲ್ಲಿ ಕಾಂಗ್ರೆಸ್‌ಗೆ ಸೇರಿದ ರೇವಂತ್ ಅವರನ್ನು ಶೀಘ್ರದಲ್ಲೇ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. 2018 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ  ಹಣಕಾಸಿನ ವಹಿವಾಟುಗಳಲ್ಲಿನ ಅಕ್ರಮ ಆರೋಪದಲ್ಲಿ  ಆದಾಯ ತೆರಿಗೆ ಮತ್ತು ಇಡಿ ರೆಡ್ಡಿ ನಿವಾಸದಲ್ಲಿ ಶೋಧ ನಡೆಸಿತ್ತು. ರೇವಂತ್ ರೆಡ್ಡಿ  ಕೊಡಂಗಲ್‌ನಿಂದ ಬಿಆರ್‌ಎಸ್ ಅಭ್ಯರ್ಥಿ ಪಟ್ನಂ ನರೇಂದ್ರ ರೆಡ್ಡಿ ವಿರುದ್ಧ ಚುನಾವಣೆಯಲ್ಲಿ ಸೋತರು.

ವಿಧಾನಸಭಾ ಚುನಾವಣೆಯಲ್ಲಿ ಸೋತ ಕೇವಲ ನಾಲ್ಕು ತಿಂಗಳ ನಂತರ ಅವರು 2019 ರಲ್ಲಿ ಮಲ್ಕಾಜ್‌ಗಿರಿಯಿಂದ ಲೋಕಸಭೆ ಸ್ಥಾನವನ್ನು ಹೇಗೆ ಗೆದ್ದರು ಎಂಬುದನ್ನು ತೋರಿಸಿದರು. ಮಲ್ಕಾಜ್‌ಗಿರಿ ದಕ್ಷಿಣ ಏಷ್ಯಾದ ಅತಿದೊಡ್ಡ ಕ್ಷೇತ್ರವಾಗಿದೆ. ‘ಆಡಳಿತಗಾರರನ್ನು ಪ್ರಶ್ನಿಸುವ ದನಿಯನ್ನು ಆರಿಸಿ’ ಎಂಬುದು ಚುನಾವಣೆಯ ಸಂದರ್ಭದಲ್ಲಿ ಅವರ ಘೋಷಣೆಯಾಗಿತ್ತು. ಅವರು 10,000 ಮತಗಳ ಅಂತರದಿಂದ ಗೆದ್ದರು, ಇದು ಅವರಿಗೆ ರಾಜಕೀಯದಲ್ಲಿ ಎರಡನೇ ಮಹತ್ತರ ತಿರುವಿಗೆ  ಕಾರಣವಾಯಿತು.

ಪಕ್ಷಕ್ಕೆ ಸೇರಿದ ಮೂರು ವರ್ಷಗಳಲ್ಲಿ ಅವರನ್ನು ಜೂನ್ 2021 ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು, ಇದು ಅವರ ವೃತ್ತಿಜೀವನದಲ್ಲಿ ದೊಡ್ಡ ಸಾಧನೆಯಾಗಿದೆ. ಅವರು ಯಾವಾಗಲೂ ಕೆಸಿಆರ್‌ಗೆ ಕಂಟಕವಾಗಿದ್ದಾರೆ. ಕೆಟಿ ರಾಮರಾವ್ ಫಾರ್ಮ್‌ಹೌಸ್ ಪ್ರಕರಣದಲ್ಲಿ ಅವರು ಕೆಲವು ಬಾರಿ ಬಂಧಿತರಾಗಿದ್ದು ಕೆಲವು ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು.

“ನಾನು ಮಂತ್ರಿಯಾಗಲು ಎಂದಿಗೂ ಆಸಕ್ತಿ ಹೊಂದಿರಲಿಲ್ಲ. ಸಿಎಂ ಆಗುವುದೇ ನನ್ನ ಗುರಿ. ನಾನು ತಳಮಟ್ಟದಿಂದ ಮೇಲೆ ಬರಲು ಬಯಸಿದ್ದೆ. ರಾಜಕೀಯದಲ್ಲಿ ಶಾರ್ಟ್‌ಕಟ್‌ಗಳಿಲ್ಲ. ನಾನು ಮಂತ್ರಿಯಾಗಲು ಬಯಸಿದರೆ, ನಾನು ರಾಜಶೇಖರ ರೆಡ್ಡಿ ಸರ್ಕಾರಕ್ಕೆ ಸೇರಬಹುದಿತ್ತು ಆದರೆ ನಾನು ವಿರೋಧ ಪಕ್ಷದಲ್ಲಿರಲು ನಿರ್ಧರಿಸಿದೆ ಎಂದು ಅವರು ಹೇಳಿದ್ದರು .

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Mon, 4 December 23

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ