ಮೋದಿ ವಿರುದ್ಧ ಸುಳ್ಳು ಆರೋಪ ಮಾಡಿದಕ್ಕೆ ಪ್ರಿಯಾಂಕಾ ವಿರುದ್ಧ ಕ್ರಮ ಕೈಗೊಳ್ಳಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

|

Updated on: Oct 25, 2023 | 8:04 PM

ಪ್ರಿಯಾಂಕಾ ಗಾಂಧಿ ಅವರು ಕಾನೂನಿಗಿಂತ ಮೇಲಿದ್ದಾರೆಯೇ? ಅವರು ಯಾವುದಾದರೂ ಕಾನೂನನ್ನು ನಂಬುತ್ತಾರೆಯೇ? ಅವರು ಏನೇನೋ ಹೇಳಲು ಧಾರ್ಮಿಕ ಭಾವನೆಗಳನ್ನು ಬಳಸುತ್ತಿದ್ದಾರೆ. ಅವರು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಮೇಘವಾಲ್ ಅವರು ಪ್ರಧಾನಿ ಮೋದಿಯವರ ದೇಣಿಗೆಗೆ ಸಂಬಂಧಿಸಿದ ಆರೋಪ ಸುಳ್ಳು ಎಂದು ಪ್ರತಿಪಾದಿಸಿದರು.

ಮೋದಿ ವಿರುದ್ಧ ಸುಳ್ಳು ಆರೋಪ ಮಾಡಿದಕ್ಕೆ ಪ್ರಿಯಾಂಕಾ ವಿರುದ್ಧ ಕ್ರಮ ಕೈಗೊಳ್ಳಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಪ್ರಿಯಾಂಕಾ ಗಾಂಧಿ
Follow us on

ದೆಹಲಿ ಅಕ್ಟೋಬರ್ 25: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ರಾಜಸ್ಥಾನದಲ್ಲಿ (Rajasthan) ಚುನಾವಣಾ ಪ್ರಚಾರದ ವೇಳೆ ಸುಳ್ಳು ಹೇಳಿಕೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೈಯಕ್ತಿಕ ಧಾರ್ಮಿಕ ನಂಬಿಕೆಯನ್ನು ಬಳಸಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.  ಕೇಂದ್ರ ಮಂತ್ರಿಗಳಾದ ಹರ್ದೀಪ್ ಸಿಂಗ್ ಪುರಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಮತ್ತು ಪಕ್ಷದ ನಾಯಕರಾದ ಅನಿಲ್ ಬಲುನಿ ಮತ್ತು ಓಂ ಪಾಠಕ್ ಸೇರಿದಂತೆ ಬಿಜೆಪಿ ನಿಯೋಗವು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಅಕ್ಟೋಬರ್ 20 ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಿಯಾಂಕಾ ವಾದ್ರಾ, ದೇವಸ್ಥಾನದಲ್ಲಿ ಪಿಎಂ ಮೋದಿ ನೀಡಿದ ದೇಣಿಗೆಯ ಲಕೋಟೆಯನ್ನು ತೆರೆದಾಗ ಅದು ಕೇವಲ ₹ 21 ಇತ್ತು ಎಂದು ಟಿವಿಯಲ್ಲಿ ನೋಡಿದೆ. ಅದು ನಿಜವೋ ಸುಳ್ಳೋ ಎಂದು ತಿಳಿದಿಲ್ಲ ಎಂದು ಪ್ರಿಯಾಂಕಾ ಹೇಳಿರುವುದಾಗಿ ಬಿಜೆಪಿ ತಮ್ಮ ದೂರಿನಲ್ಲಿ ಹೇಳಿದೆ.

ಬಿಜೆಪಿ ಮೇಲೆ ರಾಜಕೀಯ ದಾಳಿಯನ್ನು ಮಾಡಿದ ಪ್ರಿಯಾಂಕಾ, “ಲಕೋಟೆಗಳನ್ನು” ಪಕ್ಷವು ಸಾರ್ವಜನಿಕರಿಗೆ ತೋರಿಸುತ್ತದೆ ಆದರೆ ಚುನಾವಣೆಯ ನಂತರ ಅವುಗಳಲ್ಲಿ ಏನೂ ಕಂಡುಬರುವುದಿಲ್ಲ ಎಂದು ಹೇಳಿದ್ದರು.

ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೇಘವಾಲ್ ಮತ್ತು ಪುರಿ, ಪ್ರಿಯಾಂಕಾ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ “ಅಪರಾಧ” ಮಾಡಿದ್ದಾರೆ ಎಂದು ಹೇಳಿದರು.

ಪ್ರಿಯಾಂಕಾ ಗಾಂಧಿ ಅವರು ಕಾನೂನಿಗಿಂತ ಮೇಲಿದ್ದಾರೆಯೇ? ಅವರು ಯಾವುದಾದರೂ ಕಾನೂನನ್ನು ನಂಬುತ್ತಾರೆಯೇ? ಅವರು ಏನೇನೋ ಹೇಳಲು ಧಾರ್ಮಿಕ ಭಾವನೆಗಳನ್ನು ಬಳಸುತ್ತಿದ್ದಾರೆ. ಅವರು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಮೇಘವಾಲ್ ಅವರು ಪ್ರಧಾನಿ ಮೋದಿಯವರ ದೇಣಿಗೆಗೆ ಸಂಬಂಧಿಸಿದ ಆರೋಪ ಸುಳ್ಳು ಎಂದು ಪ್ರತಿಪಾದಿಸಿದರು. ಜನವರಿಯಲ್ಲಿ ಪ್ರಧಾನ ಮಂತ್ರಿಯ ದೇವಾಲಯದ ಭೇಟಿಗೆ ಸಂಬಂಧಿಸಿದಂತೆ ಅವರು ಇನ್ನೂ ಸುಳ್ಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.

“ಪ್ರಿಯಾಂಕಾ ಗಾಂಧಿಯವರ ಈ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಧಾರ್ಮಿಕ ಭಕ್ತಿಯನ್ನು ಆಹ್ವಾನಿಸುವ ಮೂಲಕ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೂಲಭೂತ ಅಡಿಪಾಯವನ್ನು ಉಲ್ಲಂಘಿಸಿದೆ ಎಂದು ಬಿಜೆಪಿ ಹೇಳಿದೆ. ಅದರ ಸತ್ಯಾಸತ್ಯತೆಯ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದೂ ಹೇಳಿದ್ದಾರೆ. ಅವರ ಹೇಳಿಕೆಗಳು ಭಾರತೀಯ ದಂಡ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ (ಆರ್‌ಪಿ) ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ಬಿಜೆಪಿ ತಿಳಿಸಿದೆ.

ಆರ್‌ಪಿ ಕಾಯ್ದೆ ಪ್ರಕಾರ ಅಭ್ಯರ್ಥಿ ಅಥವಾ ಆತನ ಏಜೆಂಟ್ ಅಥವಾ ಯಾವುದೇ ವ್ಯಕ್ತಿ ಅಥವಾ ಪ್ರಕಟಣೆ, ಯಾವುದೇ ಅಭ್ಯರ್ಥಿಯ ವೈಯಕ್ತಿಕ ಗುಣ ಅಥವಾ ನಡವಳಿಕೆಗೆ ಸಂಬಂಧಿಸಿದಂತೆ ಅಥವಾ ಯಾವುದೇ ಅಭ್ಯರ್ಥಿಯ ಉಮೇದುವಾರಿಕೆಗೆ ಸಂಬಂಧಿಸಿದಂತೆ ಅಥವಾ ಹಿಂತೆಗೆದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿದರೆ ಅಥವಾ ನಿಜ ಅಲ್ಲದೇ ಇದ್ದರೆ, ಇದು ಪೂರ್ವಾಗ್ರಹ ಪೀಡಿತ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ದೆಹಲಿ ದಸರಾದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ: ಜಾತೀಯತೆ, ಪ್ರಾದೇಶಿಕತೆ ತೊಡೆದುಹಾಕಲು ಕರೆ

ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡುವುದು ಮತದಾನದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಉದ್ದೇಶವಿದ್ದಾಗ ಅಪರಾಧವೆಂದು ಐಪಿಸಿ ಪರಿಗಣಿಸುತ್ತದೆ ಎಂದು ಅದು ಹೇಳಿದೆ. ಆದ್ದರಿಂದ, RPA 1951 ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಪ್ರಕಾರ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಆಯೋಗವನ್ನು ವಿನಂತಿಸಲಾಗಿದೆ. ಜೊತೆಗೆ ಮಾದರಿ ಸಂಹಿತೆಯ ಉಲ್ಲಂಘನೆಗಾಗಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ