Rajasthan Election Result 2023: ರಾಜಸ್ಥಾನದಲ್ಲಿ ಸಚಿನ್ ಪೈಲಟ್​, ಅಶೋಕ್​ ಗೆಹ್ಲೋಟ್​, ವಸುಂಧರಾ ರಾಜೆಗೆ ಆರಂಭಿಕ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆ(Rajasthan Assembly Election)ಯ ಮತ ಎಣಿಕೆ ಇಂದು ನಡೆಯುತ್ತಿದೆ. ಸಚಿನ್ ಪೈಲಟ್ಅಶೋಕ್​ ಗೆಹ್ಲೋಟ್, ವಸುಂಧರಾ ರಾಜೆ ​ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಸಚಿನ್ ಪೈಲಟ್ ಟೊಂಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ ಅಶೋಕ್ ಗೆಹ್ಲೋಟ್​ ಸರ್ದಾರ್​ಪುರದಿಂದ ಕಣದಲ್ಲಿದ್ದಾರೆ.

Rajasthan Election Result 2023: ರಾಜಸ್ಥಾನದಲ್ಲಿ ಸಚಿನ್ ಪೈಲಟ್​, ಅಶೋಕ್​ ಗೆಹ್ಲೋಟ್​, ವಸುಂಧರಾ ರಾಜೆಗೆ ಆರಂಭಿಕ ಮುನ್ನಡೆ
ಅಶೋಕ್ ಗೆಹ್ಲೋಟ್​
Follow us
ನಯನಾ ರಾಜೀವ್
|

Updated on:Dec 03, 2023 | 9:02 AM

ರಾಜಸ್ಥಾನ ವಿಧಾನಸಭಾ ಚುನಾವಣೆ(Rajasthan Assembly Election)ಯ ಮತ ಎಣಿಕೆ ಇಂದು ನಡೆಯುತ್ತಿದೆ. ಸಚಿನ್ ಪೈಲಟ್ಅಶೋಕ್​ ಗೆಹ್ಲೋಟ್, ವಸುಂಧರಾ ರಾಜೆ ​ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಸಚಿನ್ ಪೈಲಟ್ ಟೊಂಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ ಅಶೋಕ್ ಗೆಹ್ಲೋಟ್​ ಸರ್ದಾರ್​ಪುರದಿಂದ ಕಣದಲ್ಲಿದ್ದಾರೆ. ರಾಜಸ್ಥಾನದ ತಿಜಾರಾ ಕ್ಷೇತ್ರದಲ್ಲಿ ಬಿಜೆಪಿಯ ಬಾಬಾ ಬಾಲಕನಾಥ್ ಮುನ್ನಡೆ ಸಾಧಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳ ನಂತರ, ಈಗ ಮತಗಳ ಎಣಿಕೆಯ ದಿನವಾಗಿದೆ. ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗುವ ಪ್ರತಿಯೊಬ್ಬ ಅಭ್ಯರ್ಥಿಯ ಎದೆಬಡಿತ ಹೆಚ್ಚಿದೆ.

ನಾಲ್ಕು ರಾಜ್ಯಗಳ ಒಟ್ಟು 7,866 ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರಲ್ಲಿ ಒಟ್ಟು 1862 ಅಭ್ಯರ್ಥಿಗಳು ರಾಜಸ್ಥಾನದಲ್ಲಿ 199, ಮಧ್ಯಪ್ರದೇಶದಲ್ಲಿ 2,533 ಅಭ್ಯರ್ಥಿಗಳು, ಛತ್ತೀಸ್‌ಗಢದಲ್ಲಿ 1181 ಅಭ್ಯರ್ಥಿಗಳು ಮತ್ತು ತೆಲಂಗಾಣದಲ್ಲಿ 2290 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಎಲ್ಲರೂ ತಮ್ಮ ಗೆಲುವಿನ ಕನಸು ಕಂಡಿದ್ದರು.

ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 25 ರಂದು ಮತದಾನ ನಡೆದಿತ್ತು. ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 17 ರಂದು ಮತದಾನ ನಡೆದಿತ್ತು. ಛತ್ತೀಸ್‌ಗಢದ 90 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ತೆಲಂಗಾಣದ 119 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 30 ರಂದು ಮತದಾನ ನಡೆದಿತ್ತು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ.

ಮತ್ತಷ್ಟು ಓದಿ: ಛತ್ತೀಸ್​ಗಢ: ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಖಚಿತ ಎಂದು ಅಮಿತ್​ ಶಾ ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ

ವಿವಿಧ ಏಜೆನ್ಸಿಗಳು ನಡೆಸಿದ ಬಹುತೇಕ ಎಕ್ಸಿಟ್ ಪೋಲ್‌ಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ ನೀಡಿದರೆ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಅಂಕಿಅಂಶಗಳು ಕಾಂಗ್ರೆಸ್ ಪರವಾಗಿ ಹೆಚ್ಚು ಬಂದಿವೆ. ಈ ನಾಲ್ಕು ರಾಜ್ಯಗಳಲ್ಲಿ ಕೆಲ ವಿಐಪಿ ಅಭ್ಯರ್ಥಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರಾಜಸ್ಥಾನದ ವಿಐಪಿ ಅಭ್ಯರ್ಥಿಗಳೆಂದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ, ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ, ಸಚಿವ ಶಾಂತಿ ಧರಿವಾಲ್, ಬಿಡಿ ಕಲ್ಲ, ಭನ್ವರ್ ಸಿಂಗ್ ಭಾಟಿ, ಸಲೇಹ್ ಮೊಹಮ್ಮದ್, ಮಮತಾ ಭೂಪೇಶ್, ಪ್ರತಾಪ್ ಸಿಂಗ್ ಖಚರಿಯಾವಾಸ್, ರಾಜೇಂದ್ರ ಯಾದವ್, ಶಕುಂತಲಾ ರಾವತ್, ಉದಯ್ ಲಾಲ್.ಅಂಜನಾ, ಮಹೇಂದ್ರಜಿತ್ ಸಿಂಗ್ ಮಾಳವಿಯಾ, ಅಶೋಕ್ ಚಂದನಾ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:01 am, Sun, 3 December 23