DK Shivakumar: ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಎರಡನೇ ಹಂತದ ಬಸ್ ಯಾತ್ರೆ ಇಂದಿನಿಂದ ಆರಂಭ

|

Updated on: Oct 28, 2023 | 9:44 AM

Telangana Assembly Elections 2023: ತೆಲಂಗಾಣ ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವು ತನ್ನ 2ನೇ ಬಸ್ ಯಾತ್ರೆ ಆರಂಭಿಸಿದೆ. ಇದು ನವೆಂಬರ್ 2 ರವರೆಗೆ ಒಟ್ಟು ಆರು ದಿನಗಳ ಕಾಲ ಮುಂದುವರಿಯುತ್ತದೆ. ಎರಡನೇ ಹಂತದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಂಡೂರು, ಪರಿಗಿ, ಚೇವೆಲ್ಲಕ್ಕೆ ಇಂದು ಭೇಟಿ ನೀಡಲಿದ್ದಾರೆ.

DK Shivakumar: ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಎರಡನೇ ಹಂತದ ಬಸ್ ಯಾತ್ರೆ ಇಂದಿನಿಂದ ಆರಂಭ
Follow us on

ಹೈದರಾಬಾದ್, ಅಕ್ಟೋಬರ್​ 28: ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆ (Telangana Assembly Elections 2023) ಜೋರಾಗಿದೆ. ರಾಜ್ಯ ಸರ್ಕಾರದ ವಿರುದ್ಧ ತೆಲಂಗಾಣ ಕಾಂಗ್ರೆಸ್ ( Telangana Congress) ಆಕ್ರೋಶ ಹೆಚ್ಚಿಸಿದೆ. ಅಭ್ಯರ್ಥಿಗಳ ಪರ ಈಗಾಗಲೇ ಪ್ರಮುಖ ನಾಯಕರು ತೆಲಂಗಾಣದಲ್ಲಿ ಪ್ರಚಾರ ಆರಂಭಿಸಿದ್ದಾರೆ. ವಿಜಯಭೇರಿ ಬಸ್ ಯಾತ್ರೆಯ ಮೊದಲ ಆವೃತ್ತಿಯಲ್ಲಿ ರಾಹುಲ್ ಗಾಂಧಿ ಪ್ರಚಾರದಲ್ಲಿ ಇತ್ತೀಚೆಗೆ ಪಾಲ್ಗೊಂಡಿದ್ದರು. ದೀಪಾವಳಿಯಿಂದ ಎರಡನೇ ಹಂತದ ಬಸ್ ಪ್ರಯಾಣವನ್ನು ಉನ್ನತ ನಾಯಕರು ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಎರಡನೇ ಹಂತದ ವಿಜಯಭೇರಿ ಬಸ್ ಯಾತ್ರೆಯನ್ನು ಆರಂಭಿಸಲಿದೆ.

ಇದು ನವೆಂಬರ್ 2 ರವರೆಗೆ ಒಟ್ಟು ಆರು ದಿನಗಳ ಕಾಲ ಮುಂದುವರಿಯುತ್ತದೆ. ಎರಡನೇ ಹಂತದಲ್ಲಿ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರು 7 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 17 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು (DK Shivakumar) ತಾಂಡೂರು, ಪರಿಗಿ, ಚೇವೆಲ್ಲಕ್ಕೆ ಭೇಟಿ ನೀಡಲಿದ್ದಾರೆ. ಭಾನುವಾರ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮೇದಕ್ ಲೋಕಸಭಾ ಕ್ಷೇತ್ರದ ಸಂಗಾರೆಡ್ಡಿ, ನರಸಾಪುರ, ಮೇದಕ್‌ನಲ್ಲಿ ಬಸ್ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಸಂಗಾರೆಡ್ಡಿ, ಮೇದಕ್ ನಲ್ಲಿ ನಡೆಯುವ ಸಭೆಗಳಲ್ಲಿ ಖರ್ಗೆ ಭಾಗವಹಿಸುತ್ತಾರೆ.

ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವೇಳಾಪಟ್ಟಿ ಹೀಗಿದೆ:

ತಾಂಡೂರು, ಪರಿಗಿ, ಚೇವೆಲ್ಲಾ ಯೋಜನೆ ಪ್ರದೇಶಗಳಿಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ. ಇಂದು ಶನಿವಾರ ಮಧ್ಯಾಹ್ನ 2 ರಿಂದ 3ರವರೆಗೆ ತಾಂಡೂರಿನಲ್ಲಿ, ಸಂಜೆ 4ರಿಂದ 5ರವರೆಗೆ ಪರಿಗಿಯಲ್ಲಿ, ಸಂಜೆ 6ರಿಂದ 7ರವರೆಗೆ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

Also Read: ರಾಹುಲ್​ ಬಾಬಾ ಪಕ್ಷವು ನನ್ನ ರಾಯಲ್ ಎನ್‌ಫೀಲ್ಡ್‌ನಲ್ಲಿ ಇರುವಷ್ಟು ಸೀಟು ಕೂಡ ತೆಲಂಗಾಣದಲ್ಲಿ ಗೆಲ್ಲುವುದಿಲ್ಲ ಎಂದು ಪಂಚ್ ಕೊಟ್ಟ ಅಸಾದುದ್ದೀನ್ ಓವೈಸಿ

ರಾಹುಲ್ ಬಳಿಕ ಪ್ರಿಯಾಂಕಾ ಗಾಂಧಿ ಬಸ್ ಯಾತ್ರೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 30 ರಂದು ಜನಗಾಮ, ಅಲೆರು, ಭುವನಗಿರಿ, ನಲ್ಗೊಂಡ ಪಾರ್ಲಿಮೆಂಟ್ ಕ್ಷೇತ್ರದ ನಾಗಾರ್ಜುನಸಾಗರ ಮತ್ತು 31 ರಂದು ನಾಗರ್ ಕರ್ನೂಲ್ ಕ್ಷೇತ್ರದ ಕೊಲ್ಲಾಪುರಕ್ಕೆ ಬಸ್ ಯಾತ್ರೆ ಆಯೋಜಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:35 am, Sat, 28 October 23