ದೆಹಲಿ ನವೆಂಬರ್ 30: ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶ ಈ ಮೂರು ಹಿಂದಿ ಬೆಲ್ಟ್ ರಾಜ್ಯಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ನಿಕಟ ಸ್ಪರ್ಧೆ ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು (Exit Poll) ತೋರಿಸುತ್ತವೆ . ನವೆಂಬರ್ 30 ರಂದು ಮತದಾನ ಮುಗಿದ ನಂತರ, ಐದು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿನ ಯಾರು ಅಧಿಕಾರಕ್ಕೇರುತ್ತವೆ ಎಂಬುದನ್ನು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ . ಈ ರಾಜ್ಯಗಳ ಪೈಕಿ ಮೊದಲ ಎರಡರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಮೂರನೆಯದ್ದರಲ್ಲಿ ಬಿಜೆಪಿ ಸರ್ಕಾರವನ್ನು ಹೊಂದಿತ್ತು. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಅಧಿಕಾರದಲ್ಲಿದ್ದರೆ, ಪ್ರಾದೇಶಿಕ ಮಿಜೋ ನ್ಯಾಷನಲ್ ಫ್ರಂಟ್ (MNF) ಈಶಾನ್ಯ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿದೆ.
ರಾಜಸ್ಥಾನದಲ್ಲಿ ಬಹುತೇಕ ನಿಜ ನುಡಿಯುವ ಆಕ್ಸಿಸ್ ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಪ್ರಕಾರ ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಮುನ್ನಡೆ ಸಾಧಿಸಬಹುದು ಎಂದು ಭವಿಷ್ಯ ನುಡಿದಿದೆ. ಹಿಂದಿನ ಅಭಿಪ್ರಾಯ ಸಮೀಕ್ಷೆಗಳು ಇಲ್ಲಿ ಮತದಾರರು ಬಿಜೆಪಿಗೆ ಅನುಕೂಲಕರವಾಗಿರಬಹುದು ಎಂದು ಹೇಳಿತ್ತು,
ಅದೇ ಸಮಯದಲ್ಲಿ, ಛತ್ತೀಸ್‌ಗಢದ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ ಎಂದು ಹೇಳಿವೆ. ಹಿಂದಿನ ಅಭಿಪ್ರಾಯ ಸಮೀಕ್ಷೆಗಳಿಗೆ ಮತ್ತೆ ವಿರುದ್ಧವಾಗಿದ್ದು, ಇದು ಪ್ರಸ್ತುತ ಕಾಂಗ್ರೆಸ್‌ಗೆ ಅನುಕೂಲಕರ ಜಯವನ್ನು ತೋರಿಸಿದೆ.
ಮಧ್ಯಪ್ರದೇಶದಲ್ಲೂ ಉಭಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ ಎಂದು ಸಮೀಕ್ಷೆಗಳು ತಿಳಿಸಿವೆ.
ಇದನ್ನೂ ಓದಿ: ಮತಗಟ್ಟೆ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ತೀವ್ರ ಪೈಪೋಟಿ
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗೆ ಆಘಾತ ನೀಡಬಹುದು, ಕೆಲವು ಸಮೀಕ್ಷೆಗಳು ಇಲ್ಲಿ ನಿಕಟ ಸ್ಪರ್ಧೆಯನ್ನು ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ಇಲ್ಲಿ ಅವಕಾಶ ಇಲ್ಲದೇ ಇದ್ದರೂ ಅಸಾದುದ್ದೀನ್ ಓವೈಸಿ ಅವರ ಎಂಐಎಂ ಹೆಚ್ಚಿನ ಸೀಟು ಗಳಿಸುವ ಸಾಧ್ಯತೆ ಇದೆ
ಮಿಜೋರಾಂನಲ್ಲಿ, ಮುಖ್ಯಮಂತ್ರಿ ಝೋರಾಮ್ತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) ಸಹ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ (ZNF) ನೊಂದಿಗೆ ನಿಕಟ ಹೋರಾಟದಲ್ಲಿದೆ. ಒಂದು ವೇಳೆ ಅತಂತ್ರ ಅಸೆಂಬ್ಲಿ ಚುನಾಯಿತವಾದರೆ ಫಲಿತಾಂಶದಲ್ಲಿ ಕಾಂಗ್ರೆಸ್ ಮ್ಯಾಜಿಕ್ ಮಾಡಬಹುದು. ಆದರೆ ಬಿಜೆಪಿ ಯಾವುದೇ ಪರಿಣಾಮ ಬೀರಲು ವಿಫಲವಾಗಬಹುದು.
ರಾಜಸ್ಥಾನ: ಬಹುಮತ ಸಂಖ್ಯೆ 100
ಮತಗಟ್ಟೆ ಸಮೀಕ್ಷೆ | ಬಿಜೆಪಿ | ಕಾಂಗ್ರೆಸ್ | ಇತರೆ |
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ | 80-100 | 86-106 | 8-16 |
ಎಬಿಪಿ ನ್ಯೂಸ್-ಸಿ ವೋಟರ್ | 94-114 | 71-91 | 9-19 |
ಜನ್ ಕಿ ಬಾತ್ | 100-122 | 62-85 | 14-15 |
ಇಂಡಿಯಾಟಿವಿ- CNX | 80-90 | 94-104 | 14-18 |
ಟೈಮ್ಸ್ ನೌ-ETG | 108-128 | 56-72 | 13-21 |
ದೈನಿಕ್ ಭಾಸ್ಕರ್ | 98-105 | 85-95 | 10-15 |
ಮಧ್ಯ ಪ್ರದೇಶ: ಬಹುಮತ : 115
ಮತಗಟ್ಟೆ ಸಮೀಕ್ಷೆ | ಬಿಜೆಪಿ | ಕಾಂಗ್ರೆಸ್ | ಇತರೆ |
ದೈನಿಕ್ ಭಾಸ್ಕರ್ | 95-115 | 105-120 | 0-15 |
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ | 118-130 | 97-107 | 0-2 |
ಜನ್ ಕಿ ಬಾತ್ | 100-123 | 102-125 | 5 |
ನ್ಯೂಸ್ 24-ಟುಡೇಸ್ ಚಾಣಕ್ಯ | 151 | 74 | 5 |
ಪೋಲ್ಸ್ಟ್ರಾಟ್ | 106-116 | 111-121 | 0-6 |
ಛತ್ತೀಸ್‌ಗಢ (ಬಹುಮತ- 45)
ಮತಗಟ್ಟೆ ಸಮೀಕ್ಷೆ | ಬಿಜೆಪಿ | ಕಾಂಗ್ರೆಸ್ | ಇತರೆ |
ಎಬಿಪಿ ನ್ಯೂಸ್ – ಸಿ ವೋಟರ್ | 36-4 | 41-53 | 1-5 |
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ | 36-46 | 40-50 | 1-5 |
ಜನ್ ಕಿ ಬಾತ್ | 34-45 | 44-52 | 0-2 |
ಇಂಡಿಯಾ ಟಿವಿ- CNX | 30-40 | 46-56 | 3-5 |
ನ್ಯೂಸ್ 24-ಟುಡೇಸ್ ಚಾಣಕ್ಯ | 33 | 57 | 0 |
ಟೈಮ್ಸ್ ನೌ – ETG | 32-40 | 48-56 | 2-4 |
ತೆಲಂಗಾಣ (ಬಹುಮತ : 60)
ಮತಗಟ್ಟೆ ಸಮೀಕ್ಷೆ | ಬಿಜೆಪಿ | ಕಾಂಗ್ರೆಸ್ | ಬಿಆರ್‌ಎಸ್ | ಇತರೆ |
ಪೋಲ್ಸ್ಟ್ರಾಟ್ | 5-10 | 49-59 | 48-58 | 6-8 |
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್ | 4-9 | 58-68 | 46-56 | 5-7 |
ಇಂಡಿಯಾ TV-CNX | 2-4 | 63-79 | 31-47 | 5-7 |
ಜನ್ ಕಿ ಬಾತ್ | 7-13 | 48-64 | 40-55 | 4-7 |
ಮತಗಟ್ಟೆ ಸಮೀಕ್ಷೆ | MNF | ZPM | ಕಾಂಗ್ರೆಸ್ | ಬಿಜೆಪಿ |
ಜನ್ ಕಿ ಬಾತ್ | 10-14 | 15-25 | 5-9 | 0-2 |
ಎಬಿಪಿ ನ್ಯೂಸ್-ಸಿ ವೋಟರ್ | 15-21 | 12-18 | 2-8 | 0 |
ಇಂಡಿಯಾ TV-CNX | 14-18 | 12-16 | 8-10 | 0-2 |
ಟೈಮ್ಸ್ ನೌ -ETG | 14-18 | 10-14 | 9-13 | 0-2 |
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Thu, 30 November 23