ಅಮರಾವತಿ ಜೂನ್ 03: ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 20 ದಿನಗಳ ನಂತರ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ (Uddhav Thackeray) ಅವರು ಪ್ರಧಾನಿ ಮೋದಿ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಪಕ್ಷೇತಕ ಶಾಸಕ ಮತ್ತು ಸಂಸದೆ ನವನೀತ್ ರಾಣಾ ಅವರ ಪತಿ ರವಿ ರಾಣಾ (Ravi Rana) ಹೇಳಿದ್ದಾರೆ.
“ನರೇಂದ್ರ ಮೋದಿ ಅವರು ಬಾಳಾಸಾಹೇಬ್ ಠಾಕ್ರೆಯವರ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ 20 ದಿನಗಳ ನಂತರ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಶಾಸಕ ರವಿ ರಾಣಾ ಹೇಳಿದ್ದಾರೆ.
ಪ್ರಧಾನಿಯವರು ದೇಶಕ್ಕಾಗಿ ದುಡಿದ ರೀತಿಗೆ ಜನ ಸಾಮಾನ್ಯರಿಂದ ಅಪಾರ ಬೆಂಬಲ ಸಿಕ್ಕಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ದೇಶಕ್ಕೆ ಪ್ರಧಾನಿ ಮೋದಿಯವ ಅಗತ್ಯವಿದೆ. ಬಾಳಾಸಾಹೇಬ್ ಠಾಕ್ರೆಯವರ ಉದ್ದೇಶ ಮತ್ತು ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವವರು ಪ್ರಧಾನಿ ಮೋದಿ ಮಾತ್ರ.
#WATCH | Amravati, Maharashtra: Independent MLA Ravi Rana says, “… It is Narendra Modi who is taking the ideas of Balasaheb Thackeray forward… 20 days after PM Narendra Modi takes oath for the third time, Uddhav Thackeray will join hands with PM Narendra Modi…” pic.twitter.com/f5eodZA0cD
— ANI (@ANI) June 3, 2024
ಉದ್ಧವ್ ಠಾಕ್ರೆಗಾಗಿ ತಮ್ಮ ಒಂದು ಕಿಟಕಿ ಯಾವಾಗಲೂ ತೆರೆದಿರುತ್ತದೆ ಎಂದು ಪ್ರಧಾನಿ ಮೋದಿ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ 20 ದಿನಗಳ ನಂತರ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆ ಒಂದು ಕಿಟಕಿಯ ಮೂಲಕ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ರವಿ ರಾಣಾ ಹೇಳಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ದಾಖಲೆ ಬರೆದ ಭಾರತದ ಲೋಕಸಭಾ ಚುನಾವಣೆ, 64 ಕೋಟಿ ಮಂದಿಯಿಂದ ಮತದಾನ
ಮಿತ್ರಪಕ್ಷಗಳ ನಡುವಿನ 2019 ರ ಅಧಿಕಾರ ಹಂಚಿಕೆ ಜಗಳದ ನಂತರ ಶಿವಸೇನಾ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿತ್ತು. ನಂತರ, ಶಿವಸೇನಾ ಎರಡು ಬಣಗಳಾಗಿ ಒಡೆಯಿತು. ಒಂದು ಪ್ರಸ್ತುತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರದ್ದು ಮತ್ತು ಇನ್ನೊಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ. ಬಿಜೆಪಿಯೊಂದಿಗೆ ಮೈತ್ರಿ ಮುರಿದ ನಂತರ, ಉದ್ಧವ್ ಠಾಕ್ರೆ, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ಮಹಾ ವಿಕಾಸ್ ಅಘಾಡಿ ಎಂಬ ಮಹಾಮೈತ್ರಿಕೂಟವನ್ನು ರಚಿಸಲಾಯಿತು. MVA ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಿತು. ನಂತರ ಅದು ಪತನವಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ